ಗೌರಿಗಣೇಶ ಹಬ್ಬದ ಪ್ರಯುಕ್ತ ವಿಶೇಷ ಜನಜಾಗೃತಿ ಆಂದೋಲನ

ಬೆಂಗಳೂರು, ಸೆ.9-ನಗರದ ಯುವಚೇತನ ಯುವಜನ ಕೇಂದ್ರವು ಇಂಡಿಯನ್ ಗ್ರೀನ್‍ಪೀನ್ ಮತ್ತು ಕರ್ನಾಟಕ ರಾಜ್ಯ ಒಕ್ಕಲಿಗರ ಹಿತರಕ್ಷಣಾ ಪರಿಷತ್ ನೇತೃತ್ವದಲ್ಲಿ ಸೆ.14ರಂದು ಮಧ್ಯಾಹ್ನ 12.15ಕ್ಕೆ ಗೌರಿಗಣೇಶ ಹಬ್ಬದ ಪ್ರಯುಕ್ತ ವಿಶೇಷ ಜನಜಾಗೃತಿ ಆಂದೋಲನ ಹಮ್ಮಿಕೊಂಡಿದೆ.
ಕೆಮಿಕಲ್ ಗಣೇಶ ಬೇಡ, ಮಣ್ಣಿನ ಗಣಪ ಇರಲಿ, ಕೆರೆಗಳು, ಜಲಚರಗಳನ್ನು ಸಂರಕ್ಷಣೆ ಮಾಡೋಣ, ನಮ್ಮ ಪರಿಸರವನ್ನು ಉಳಿಸೋಣ-ಬೆಳೆಸೋಣ ಎಂಬ ವಿಶೇಷ ಆಂದೋಲನವನ್ನು ಹಮ್ಮಿಕೊಂಡಿರುವುದಾಗಿ ವೈಸಿವೈಕೆ ಸಂಸ್ಥಾಪಕ ಅಧ್ಯಕ್ಷ ನಂದಿದುರ್ಗ ಬಾಲುಗೌಡ ತಿಳಿಸಿದ್ದಾರೆ.

ಪಿಒಪಿ ಗೌರಿ-ಗಣೇಶ ಮೂರ್ತಿಗಳನ್ನು ಕೆರೆ, ನದಿಗಳಲ್ಲಿ ವಿಸರ್ಜನೆ ಮಾಡುವುದರಿಂದ ಜಲ ಮಾಲಿನ್ಯವಾಗುತ್ತದೆ. ಜಲಚರಗಳು ಸಾವನ್ನಪ್ಪುತ್ತವೆ. ಇದರಿಂದ ಪರಿಸರ ಹಾಳಾಗುತ್ತದೆ. ಆದುದರಿಂದ ಈ ಹಬ್ಬವನ್ನು ನಮ್ಮ ಭಾರತೀಯ ಭವ್ಯ ಜಾನಪದ ಸಂಸ್ಕøತಿಯಂತೆ ಭಕ್ತಿ ಪೂರ್ವಕವಾಗಿ ಆಚರಿಸೋಣ, ಮಣ್ಣಿನ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸೋಣ, ಹಬ್ಬದಲ್ಲಿ ಬಳಸುವ ಎಲ್ಲ ಸಾಮಗ್ರಿಗಳನ್ನು ಬೇರ್ಪಡಿಸಿ ಬೇರೆಡೆ ಸಂಗ್ರಹಿಸಿ ಕೆರೆ, ಜಲಚರಗಳನ್ನು ಸಂರಕ್ಷಣೆ ಮಾಡೋಣ ಎಂದು ಅವರು ಕರೆ ನೀಡಿದ್ದಾರೆ.

ಆಂದೋಲನದಲ್ಲಿ ಮೇಯರ್ ಸಂಪತ್‍ರಾಜ್, ಅರಣ್ಯ ಸಚಿವ ಆರ್.ಶಂಕರ್, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್, ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್, ಮಾಜಿ ಮೇಯರ್ ಪದ್ಮಾವತಿ, ಶಾಸಕ ಎಸ್.ರಘು, ವಿಧಾನಪರಿಷತ್ ನಿಟಕಪೂರ್ವ ಸದಸ್ಯ ರಾಮಚಂದ್ರಗೌಡ ಹಾಗೂ ವೈದ್ಯಶ್ರೀ ಡಾ.ರಿತಿಕ್ ಮಂಜುಳ ಮತ್ತಿತರರು ಭಾಗವಹಿಸಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ