ಮತ್ತಷ್ಟು ಏರಿಕೆಯಾದ ಪೆಟ್ರೋಲ್-ಡೀಸೆಲ್ ದರ

ನವದೆಹಲಿ: ಕಳೆದ ಹಲವು ದಿನಗಳಿಂದ ತೈಲೋತ್ಪನ್ನಗಳ ಬೆಲೆಯಲ್ಲಿ ಭಾರೀ ಏರಿಕೆ ಕಂಡು ಬರುತ್ತಿದ್ದು, ಇಂದು ಮತ್ತಷ್ಟು ಏರಿಕೆಯಾಗಿದೆ. ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 53 ಪೈಸೆ ಮತ್ತು ಡೀಸೆಲ್ ದರದಲ್ಲಿ 56 ಪೈಸೆ ಹೆಚ್ಚಳವಾಗಿದೆ.

ಬೆಂಗಳೂರಿನಲ್ಲಿ ಇಂದು ಪೆಟ್ರೋಲ್‌ ದರ ಲೀಟರ್‌ಗೆ 83.22 ರೂ (53 ಪೈಸೆ ಹೆಚ್ಚಳ) ಮತ್ತು ಡೀಸೆಲ್‌ ದರ 75.03 ರೂ (56 ಪೈಸೆ ಹೆಚ್ಚಳ) ಇದೆ.

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಲೀಟರ್‌ ಪೆಟ್ರೋಲ್‌ ದರ 80.59 ರೂ., ಮತ್ತು ಡೀಸೆಲ್‌ ದರ 72.70 ರೂ. ಇದೆ.

ಕೋಲ್ಕತದಲ್ಲಿ ಇಂದಿನ ಪೆಟ್ರೋಲ್‌ ಬೆಲೆ 83.47 ರೂ (50 ಪೈಸೆ ಹೆಚ್ಚಳ) ಮತ್ತು ಡೀಸೆಲ್ ಬೆಲೆ 75.54 ರೂ. (54 ಪೈಸೆ ಹೆಚ್ಚಳ) ಗಳಾಗಿವೆ.

ವಾಣಿಜ್ಯ ರಾಜಧಾನಿ ಮುಂಬಯಿಯಲ್ಲಿ ಇಂದಿನ ಪೆಟ್ರೋಲ್‌ ದರ 87.98 ರೂ, (50 ಪೈಸೆ ಹೆಚ್ಚಳ), ಡೀಸೆಲ್ ಬೆಲೆ 77.17 ರೂ (57 ಪೈಸೆ ಹೆಚ್ಚಳ) ಆಗಿದೆ.

ಚೆನ್ನೈನಲ್ಲಿ ಇಂದಿನ ಪೆಟ್ರೋಲ್‌ ಬೆಲೆ 83.76 ರೂ., (54 ಪೈಸೆ ಹೆಚ್ಚಳ), ಡೀಸೆಲ್‌ ಬೆಲೆ 76.84 ರೂ. (56 ಪೈಸೆ ಏರಿಕೆ) ಆಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 4,883 ರೂ (73 ರೂ ಇಳಿಕೆ) ಇದೆ. ಗಗನಕ್ಕೇರುತ್ತಿರುವ ಇಂಧನ ಬೆಲೆಯಿಂದಾಗಿ ಹಣದುಬ್ಬರವನ್ನು ಹೆಚ್ಚಿಸುವ ಸಾಧ್ಯತೆಯನ್ನು ನಿರೀಕ್ಷಿಸಲಾಗಿದ್ದು, ಪ್ರಾಥಮಿಕವಾಗಿ ಇಂಧನವನ್ನು ಕೃಷಿ ಉತ್ಪನ್ನಗಳು ಒಳಗೊಂಡಂತೆ ಹೆಚ್ಚಿನ ಸರಕು ಸಾಗಣೆಗೆ ಬಳಸಲಾಗುತ್ತಿದೆ. 15 ದಿನಗಳ ಸರಾಸರಿಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾತೈಲ ಬೆಲೆ ಏರಿಕೆ ಮತ್ತು ರೂಪಾಯಿ ಮೌಲ್ಯ ಕುಸಿತದಿಂದಾಗಿ ದೇಶದಲ್ಲಿ ಇಂಧನ ಬೆಲೆ ಗಗನಕ್ಕೇರಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ