ಬೆಂಗಳೂರು, ಸೆ.8- ನಗರದಲ್ಲಿ ಇದೇ ಪ್ರಪ್ರಥಮ ಬಾರಿಗೆ ಮಹಿಳಾ ಉದ್ಯಮಿಗಳಿಗಾಗಿ ಒಂದು ಹೊಸ ವೇದಿಕೆ ಸೃಷ್ಟಿಸುವ ಮೂಲಕ ಮಹಿಳೆಯರಿಂದ ಮಹಿಳೆಯರಿಗಾಗಿ ಫ್ಯಾಷನ್ ಎಕ್ಸಿಬಿಷನ್ ಆಯೋಜಿಸಲಾಗಿದೆ.
ಫ್ಯಾಷನ್ ಯುಗದಲ್ಲಿನ ಮಿಂಚಿನ ಸಂಚಲನಕ್ಕೆ ಅನುಗುಣವಾಗಿ ಪ್ರಸ್ತುತ ದಿನದ ಅಗತ್ಯತೆಗೆ ತಕ್ಕಂತೆ ರೂಪಿಸಲಾಗಿರುವ ವಿಶಿಷ್ಟ ಮಾದರಿಯ ಬಟ್ಟೆಗಳು ದೇಸಿ ಗಮಲಿನ ಆಭರಣಗಳು, ಬ್ಯಾಗ್ ಮತ್ತಿತರ ವಸ್ತುಗಳು, ಗೃಹಾಲಂಕಾರ ವಸ್ತುಗಳು, ಬೊಟಿಕ್,ಟಪ್ಪರ್ ವೇರ್, ಪುಸ್ತಕಗಳು ಸೇರಿದಂತೆ ಇನ್ನಿತರ ಮಹಿಳೆಯರ ಅಗತ್ಯದ ವಸ್ತುಗಳ ಪ್ರದರ್ಶನ ಇದಾಗಿದೆ.
ಇಂದಿನಿಂದ ಆರಂಭಗೊಂಡಿರುವ ಈ ವಸ್ತು ಪ್ರದರ್ಶನದಲ್ಲಿ ಹಾಕಲಾಗಿರುವ ಎಲ್ಲ ಮಳಿಗೆಗಳು ಮಹಿಳಾ ಉದ್ಯಮಿಗಳಿಗೆ ಸೇರಿದ್ದು, ಅವರೇ ತಯಾರಿಸಿದ ವಸ್ತಗಳು ಪ್ರದರ್ಶನ ಹಾಗೂ ಮಾರಾಟಕ್ಕೆ ಲಭ್ಯವಿದೆ.
ಡಿಸೈನರ್ ಸ್ಟುಡಿಯೋ, ಪ್ರಿಯಂಬದ ಡಿಸೈನರ್ ಸ್ಟುಡಿಯೋ ಸೇರಿದಂತೆ ಇನ್ನಿತರ ಲೈಫ್ ಸ್ಟೈಲ್ಗೆ ತಕ್ಕಂತೆ ಉತ್ಪನ್ನಗಳನ್ನು ಉತ್ಪಾದಿಸಿದ ಸಂಸ್ಥೆಗಳು ಒಗ್ಗೂಡಿ ಎರಡು ದಿನಗಳ ಕಾಲ ನಗರದ ಬಸವನಗುಡಿಯ ಸೌತ್ ಎಂಡ್ ಸರ್ಕಲ್ನಲ್ಲಿರುವ ಪೈವಿಸ್ಟ ಕನ್ವೆಷನ್ ಹಾಲ್ನ ಮೊದಲ ಮಹಡಿಯಲ್ಲಿ ಪ್ರದರ್ಶನ ಏರ್ಪಡಿಸಲಾಗಿದೆ.
ಇಂದು ಮತ್ತು ನಾಳೆ ಬೆಳಗ್ಗೆ 11ರಿಂದ ರಾತ್ರಿ 8ರವರೆಗೆ ಪ್ರದರ್ಶನ ನಡೆಯಲಿದ್ದು, ಅತ್ಯಾಧುನಿಕ ಫ್ಯಾಷನ್ ಜಗತ್ತಿನ ಹೊಸ ಹೊಸ ವಿನ್ಯಾಸದ ಉತ್ಪನ್ನಗಳಿಗೆ ಈ ಪ್ರದರ್ಶನ ವೇದಿಕೆಯಾಗಿದೆ.