ಪೂಜಾ-ಎನ್-ಪೂಜಾರಿ ಸಂಸ್ಥೆಯಿಂದ ವಿಶೇಷ ಕಿಟ್

ಬೆಂಗಳೂರು,ಸೆ.8-ವಿಜೃಂಭಣೆಯ ಗಣೇಶ ಹಬ್ಬಕ್ಕಾಗಿ ವಿಶೇಷ ರೀತಿಯಲ್ಲಿ ಸಜ್ಜುಗೊಂಡಿರುವ ಪೂಜಾ-ಎನ್-ಪೂಜಾರಿ ಸಂಸ್ಥೆ ಹಬ್ಬದ ಪ್ರಯುಕ್ತ ವಿಶೇಷ ಕಿಟ್‍ನ್ನು ಪರಿಚಯಿಸಿದೆ.
ಹಿಂದುಗಳ ಶ್ರೇಷ್ಠ ಹಬ್ಬವಾದ ಗಣೇಶ ಚತುರ್ಥಿಯನ್ನು ದೇಶಾದ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಇಂತಹ ಹಬ್ಬದ ಆಚರಣೆಗೆ ಅಗತ್ಯವಿರುವ ಪೂಜಾ ಸಾಮಾಗ್ರಿಗಳನ್ನು ಒಗ್ಗೂಡಿಸುವುದೇ ಒಂದು ಗೊಂದಲ. ಎಲ್ಲವನ್ನು ಒಂದೇ ಕಡೆ ಖರೀದಿಸುವುದು ಹಾಗೂ ಮರೆಯದೆ ತರುವ ತೊಂದರೆ ಎದುರಾಗುವ ಹಿನ್ನೆಲೆಯಲ್ಲಿ ಈ ಕಿಟ್ ಬಹುಪಯೋಗಿಯಾಗಿದೆ.

ಪೂಜಾ-ಎನ್-ಪೂಜಾರಿ ಸ್ಟಾರ್ಟ್ ಅಪ್ ವತಿಯಿಂದ ಪರಿಚಯಿಸಿರುವ ಕಿಟ್‍ನಲ್ಲಿ ಪರಿಸರ ಸ್ನೇಹಿ ಗಣೇಶ ಮೂರ್ತಿಯೊಂದಿಗೆ ಪೂಜಾ ಸಾಮಾಗ್ರಿ, ಶ್ಲೋಕದ ಪುಸ್ತಕ ಸೇರಿದಂತೆ 29ಕ್ಕೂ ಹೆಚ್ಚು ಬಗೆಯ ಪೂಜಾ ಸಾಮಾಗ್ರಿಗಳನ್ನು ನೀಡಲಾಗುತ್ತದೆ.
ಹಿಂದೂ ಸಂಪ್ರದಾಯದಂತೆ ನಡೆಯುವ ಪೂಜೆಗೆ ಅಗತ್ಯ ಪರಿಕರಗಳನ್ನು ಒದಗಿಸಲಾಗುತ್ತಿದ್ದು, ಇಂದಿನ ಫಾಸ್ಟ್ ಯುಗದಲ್ಲಿ ಜನರ ಅವಶ್ಯಕತೆಗಳನ್ನು ಮನಗಂಡು ಸಂಸ್ಥೆ ವೆಬ್‍ಸೈಟ್ ಮೂಲಕವೇ ಕಿಟ್‍ಗಳ ಆರ್ಡರ್ ಪಡೆಯುತ್ತಿದೆ.

ಕಿಟ್ ಪಡೆಯಲು ತಿತಿತಿ.ಠಿooರಿಚಿಟಿಠಿuರಿಚಿಡಿಚಿi.ಛಿom <hಣಣಠಿ://ತಿತಿತಿ.ಠಿooರಿಚಿಟಿಠಿuರಿಚಿಡಿಚಿi.ಛಿom> ನಲ್ಲಿ ಆರ್ಡರ್ ಮಾಡಬಹುದಾಗಿದು, ಈ ಸಂಸ್ಥೆಯ ಸಂಸ್ಥಾಪಕ ಡಾ.ಮಹೇಶ್ ಈಗಾಗಲೇ ಚೆನ್ನೈ ಹೈದರಾಬಾದ್, ಯುಎಸ್‍ಎನ ಟೆಕ್ಸಾಸ್‍ನಲ್ಲಿ ಸಂಸ್ಥೆಯ ಶಾಖೆಗಳನ್ನು ತೆರೆದಿದ್ದು, ಬೆಂಗಳೂರಿನಲ್ಲಿ ಇನ್ನಷ್ಟು ಶಾಖೆ ತೆರೆಯುವ ಇಚ್ಛೆ ಹೊಂದಿದ್ದಾರೆ.
ಇದಲ್ಲದೆ ಇನ್ನಷ್ಟು ಸೇವೆಗಳನ್ನು ನೀಡುತ್ತಿರುವ ಸಂಸ್ಥೆ ದೇವಸ್ಥಾನದ ಸಾಮಾಗ್ರಿಗಳನ್ನು ಆನ್‍ಲೈನ್ ಮೂಲಕ ತರಿಸಿಕೊಡುವ ವ್ಯವಸ್ಥೆ ಮಾಡಲಾಗಿದೆ. ಜ್ಯೋತಿಷಿಗಳ ಮೂಲಕ ಭವಿಷ್ಯ ತಿಳಿಯುವುದು, ಇನ್ನಿತರ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು ಪ್ರಸಾದವನ್ನು ನಿಮ್ಮ ಸ್ಥಳಕ್ಕೆ ರವಾನಿಸುವ ವ್ಯವಸ್ಥೆ ಕಲ್ಪಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ