ಜಾಗತಿಕ ಮಟ್ಟದ ವಾಹನ ತಯಾರಿಕೆ ಕಂಪೆನಿಯಾದ ಇಸುಜು ಕಂಪೆನಿಯು ಭಾರತೀಯ ಮಾರುಕಟ್ಟೆಗೆ ಅಂತಾರಾಷ್ಟ್ರೀಯ ತಂತ್ರಜ್ಞಾನದಿಂದ ಕೂಡಿದ ಅತ್ಯಾಧುನಿಕ ಸರಕು ಸಾಗಣೆ ವಾಹನಗಳನ್ನು (ಟ್ರಕ್) ಬಿಡುಗಡೆ

ಬೆಂಗಳೂರು, ಸೆ.8- ಜಾಗತಿಕ ಮಟ್ಟದ ವಾಹನ ತಯಾರಿಕೆ ಕಂಪೆನಿಯಾದ ಇಸುಜು ಕಂಪೆನಿಯು ಭಾರತೀಯ ಮಾರುಕಟ್ಟೆಗೆ ಅಂತಾರಾಷ್ಟ್ರೀಯ ತಂತ್ರಜ್ಞಾನದಿಂದ ಕೂಡಿದ ಅತ್ಯಾಧುನಿಕ ಸರಕು ಸಾಗಣೆ ವಾಹನಗಳನ್ನು (ಟ್ರಕ್) ಬಿಡುಗಡೆ ಮಾಡಿದೆ.
ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಂಪೆನಿಯ ಹಿರಿಯ ಅಧಿಕಾರಿ ಜುಂಜಿ ಟೊನೊಶಿಮಾ
ಜಪಾನ್‍ನ ಪರಿಣಿತ ತಂಡ ಇಸುಜುನ ಎಸಿ ಮತ್ತು ಐಸಿ ಟ್ರಕ್‍ಗಳು ಹಾಗೂ ಬಸ್‍ಗಳನ್ನು ಈಗ ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದ್ದು , ಸಾಕಷ್ಟು ಬೇಡಿಕೆ ಬಂದಿದೆ ಎಂದು ಹೇಳಿದರು.

ಭಾರತೀಯ ಟ್ರಕ್ ಉದ್ಯಮದಲ್ಲಿ ಆಗುತ್ತಿರುವ ಬದಲಾವಣೆಗಳು ಮತ್ತು ಹೆಚ್ಚುತ್ತಿರುವ ಬೇಡಿಕೆಗಳಿಗೆ ಅನುಗುಣವಾಗಿ ಸಂಸ್ಥೆಯು ತಂತ್ರಜ್ಞಾನದಲ್ಲಿ ಸಾಕಷ್ಟು ಸುಧಾರಣೆಯನ್ನು ಈ ವಾಹನಗಳಲ್ಲಿ ಅಳವಡಿಸಿದೆ.
ಗ್ಲೋಬಲ್ ಸೀರೀಸ್ ಟ್ರಕ್‍ಗಳಲ್ಲಿ ಸಾರಥಿ ಡಿವೈಸ್‍ಗಳನ್ನು ಅಳವಡಿಸಲಾಗಿದ್ದು, ಕಾನೂನಿನ ಪ್ರಕಾರ ಎಲ್ಲಾ ಬಸ್‍ಗಳಿಗೆ ಕಳೆದ ಏಪ್ರಿಲ್‍ನಿಂದ ಅಳವಡಿಸಲಾಗುತ್ತಿದೆ. ಚಾಲಕರಿಗೆ ಹೊಸ ಅನುಭವದ ಜತೆಗೆ ಶಕ್ತಿ ಸಾಮಥ್ರ್ಯ ಮತ್ತು ಉತ್ತಮ ನಿರ್ವಹಣೆಯ ಇಸುಜು ವಾಹನದಲ್ಲಿದೆ ಎಂದು ಹೇಳಿದರು.
ನವಲ್ ಕುಮಾರ್ ಶರ್ಮಾ(ಜಿಎಂ-ಮಾರ್ಕೆಟಿಂಗ್), ಆರ್.ಭಾಸ್ಕರ್ (ಸಿಎಂ-ಮಾರ್ಕೆಟಿಂಗ್) ಮತ್ತು ರಾಜೆನ್ ಭಾಟಾ ಎಂಡಿ ಬರ್ಮಾ ಆಟೋಮೋಟಿವ್ಸ್ ಪ್ರೈ ಲಿಟೆಡ್ ಮತ್ತಿತರರು ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ