ಸ್ನಾತಕ/ಸ್ನಾತಕೋತ್ತರ ಕೋರ್ಸ್‍ಗಳಿಗೆ ಅರ್ಜಿ ಆಹ್ವಾನ

Varta Mitra News

ಬೆಂಗಳೂರು,ಸೆ.7-ಕರ್ನಾಟಕ ರಾಜ್ಯ ಮುಕ್ತ ವಿವಿಯ ಮಹಿಳಾ ಪ್ರಾದೇಶಿಕ ಕೇಂದ್ರವು 2018-19ನೇ ಶೈಕ್ಷಣಿಕ ಸಾಲಿನ ಸ್ನಾತಕ/ಸ್ನಾತಕೋತ್ತರ ಕೋರ್ಸ್‍ಗಳಾದ ಬಿಎ, ಬಿಕಾಂ, ಎಂ.ಎಸ್ಸಿ(ಪರಿಸರಜ್ಞಾನ) ಕೋರ್ಸ್‍ಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಪ್ರಥಮ ವರ್ಷದ ಕೋರ್ಸ್‍ಗಳಿಗೆ ದಂಡ ಶುಲ್ಕವಿಲ್ಲದೆ ಸೆ.20 ಕೊನೆಯ ದಿನವಾಗಿದೆ. ಅಕ್ಟೋಬರ್ 200 ರೂ. ದಂಡ ಶುಲ್ಕದೊಂದಿಗೆ ಕಡೆಯ ದಿನವಾಗಿರುತ್ತದೆ.

ಬಿಎ, ಬಿಕಾಂ ಪದವಿಗೆ ಪ್ರವೇಶಾತಿ ಶುಲ್ಕ, 4,600 ರೂ. ಹಾಗೂ ಎಂಎ, ಎಂಕಾಂ ಪದವಿಗೆ ಪ್ರವೇಶಾತಿ ಶುಲ್ಕ 6100 ರೂ. ನಿಗದಿಪಡಿಸಲಾಗಿದೆ.
ವಿಶೇಷವಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಅಗತ್ಯ ದಾಖಲೆಗಳನ್ನು ಒದಗಿಸಿದಲ್ಲಿ ಪ್ರವೇಶಾತಿ ಶುಲ್ಕ ವಿನಾಯಿತಿ ಪಡೆಯಬಹುದು ಹಾಗೂ ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳಾ ವಿದ್ಯಾರ್ಥಿಗಳಿಗೆ ಬೊಧನಾ ಶುಲ್ಕದಲ್ಲಿ ಶೇ.25ರಷ್ಟು ವಿನಾಯಿತಿ ನೀಡಲಾಗುತ್ತದೆ.
ಅರ್ಜಿ ಹಾಗೂ ವಿತರಣಾ ಪುಸ್ತಕವನ್ನು ಡಿಡಿಡಿ.hoಟ್ಠಞqsoಟ್ಟಛಿ.hZ್ಟ್ಞZಠಿZhZ.ಜಟq.ಜ್ಞಿನಿಂದ ಡೌನ್‍ಲೋಡ್ ಮಾಡಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗೆ ದೂ: 080-23448811, 9844506629 ಸಂಪರ್ಕಿಸಬಹುದು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ