ಕೋಲ್ಕತ್ತಾ: ಇತ್ತೀಚೆಗೆ ಕೊನೆಗೊಂಡ ಏಷ್ಯನ್ ಗೇಮ್ಸ್ ನಲ್ಲಿ ಬಿಡ್ಜ್ ವಿಭಾಗದಲ್ಲಿ ಚಿನ್ನ ಗಳಿಸಿ ಬಾರತೀಯರ ಎದೆಯುಬ್ಬುವಂತೆ ಆಡಿದ್ದ ಪ್ರಣಬ್ ಬರ್ಧನ್ ಹಾಗು ಶಿಬನಾತ್ನ್ ಸರ್ಕಾರ್ ಅವರುಗಳ ಬಳಿ ಅಧಿಕೃತ ಬ್ಲೇಸರ್ಸ್ ಗಳೇ ಇಲ್ಲ!
ಒಲಿಂಪಿಕ್ ಅಸೋಸಿಯೇಷನ್ (ಐಒಎ) ಇದುವರೆಗೆ ಅವರಿಗೆ ಬ್ಲೇಜರ್ ಗಳನ್ನು ನೀಡಿಲ್ಲ.ಪದಕ ವಿಜೇತರು ತಮ್ಮಲ್ಲಿದ್ದ ಹಳೆಯ ಬ್ಲೇಜರ್ ಗಳ ಮೇಲೆ ಐಒಎ ಲೋಗೋಗಳನ್ನು ಹಾಕಿಕೊಳ್ಳುವುದಕ್ಕೆ ಯೋಚಿಸುತ್ತಿದ್ದಾರೆ.ಇದರಿಂದ ಅವರು ಬುಧವಾರ ನಿಗದಿಯಗಿರುವ ಅಧಿಕೃತ ಫೋಟೋ ಶೂಟ್ ಕಾರ್ಯಕ್ರಮಕ್ಕೆ ಅರ್ಹರಾಗಲಿದ್ದಾರೆ ಎಂದು ಭಾರತೀಯ ಪುರುಷರ ಬ್ರಿಡ್ಜ್ ತಂಡದ ಕೋಚ್ ದೇಬಶೀಶ್ ರೇ ಹೇಳಿದ್ದಾರೆ.
“ಆರಂಭದಲ್ಲಿ ನಮಗೆ ಯಾವ ಕಿಟ್ ಗಳೂ ದೊರಕುವುದಿಲ್ಲ ಎನ್ನಲಾಗಿತ್ತು. ಆದರೆ ಕ್ರೀಡಾ ಸಚಿವಾಲಯದ ಮಧ್ಯಸ್ಥಿಕೆಯಿಂದ ಕಡೆಗೆ ನಾವು ಜೆರ್ಸಿಗಳನ್ನು ಪಡೆದುಕೊಂಡೆವು. ಆದರೆ ನಾವು ಇನ್ನೂ ನಮ್ಮ ಅಧಿಕೃತ ಬ್ಲೇಜರ್ ಗಳನ್ನು ಹೊಂದಿಲ್ಲ ಅಧಿಕೃತ ಸ್ವಾಗತ ಕಾರ್ಯ್ಕ್ರ್ಮ ಬುಧವಾರ ನಡೆಯಲಿದ್ದು ಇಷ್ಟರಲ್ಲಿ ನಾವೇ ನಮ ಹಳೆ ಬ್ಲೇಜರ್ ಗಳ ಮೇಲೆ ಲೋಗೋಗಳನ್ನು ಹೊಲಿದುಕೊಳ್ಳಲು ತೀರ್ಮಾನಿಸಿದ್ದೇವೆ, ಕಲ್ಕತ್ತಾ ಸ್ಪೋರ್ಟ್ಸ್ ಜರ್ನಲಿಸ್ಟ್ಸ್ ಕ್ಲಬ್ ನಲ್ಲಿ ನಡೆದ ಸಭೆಯ ವೇಳೆ ಅವರು ಹೇಳಿದ್ದಾರೆ.
ಏಷ್ಯನ್ ಕ್ರೀಡಾಕೂಟ ಆಯೋಜಿಸುವ ಅಧಿಕೃತ ಅಂಗಸಂಸ್ಥೆಯಾದ ಐಒಎ ಈ ಮುನ್ನ ಅಗತ್ಯ ಉಡುಗೆಗಳನ್ನು ಒಳಗೊಂಡು ಯಾವ ಬಟ್ಟೆಗಳನ್ನು ಒದಗಿಸಲು ನಿರಾಕರಿಸಿತ್ತು. ಆದರೆ ಕ್ರೀಡಾ ಸಚಿವಾಲಯ ಮನವಿ ಮಾಡಿದ ಬಳಿಕ ಕಿಟ್ ಹಾಗೂ ಸಮವಸ್ತ್ರಗಳನ್ನು ನೀಡಿದೆ.
ಮೊದಲ ಬಾರಿಗೆ ಏಷ್ಯನ್ ಕ್ರೀಡಾಕೂಟದಲ್ಲಿ ಬ್ರಿಡ್ಜ್ ಆಟವನ್ನು ಸೇರಿಸಲಾಗಿದೆ.ದೆ ಆದರೆ ಇಂಡಿಯನ್ ಒಲಿಂಪಿಕ್ ಅಸೋಸಿಯೇಷನ್ (ಐಒಎ) ಆರಂಭದಲ್ಲಿ ಈ ಕ್ರೀಡಾಕೂಟಕ್ಕಾಗಿ ಭಾರತೀಯ ತಂಡವನ್ನು ಕಳುಹಿಸಲು ನಿರಾಕರಿಸಿತ್ತು.ನಾವು ಪಂದ್ಯಗಳಿಗೆ ಕೇವಲ ಮೂರು ದಿನಗಳ ಮೊದಲು ಸ್ಪಷ್ಟೀಕರಣವನ್ನು ಪಡೆದುಕೊಂಡಿದ್ದೇವೆ ಎಂದು ರೇ ಹೇಳಿದ್ದಾರೆ.
ಇನ್ನು ಪಶ್ಚಿಮ ಬಂಗಾಳ ಸರ್ಕಾರ ಸಹ ಏಷ್ಯನ್ ಗೇಮ್ಸ್ ಪದಕ ವಿಜೇತೆ ಸಪ್ನಾ ಬರ್ಮನ್ ಗೆ 10 ಲಕ್ಷ ರೂ. ಮತ್ತು ಕೆಲಸ ನಿಡುವುದಾಗಿ ಘೋಷಿಸಿದೆ , ಇದೇ ಬ್ರಿಡ್ಜ್ ಆಟಗಾರರಿಗೆ ಮಾತ್ರ ಯಾವ ಉತ್ತೇಜಿತ ಬಹುಮಾನ ಘೊಷಣೆ ಮಾಡಿಲ್ಲ.
“ನಾವು ಹಣ ಬೇಡುವುದಿಲ್ಲ, ಆದರೆ ಬ್ರಿಡ್ಜ್ ಆಡುವುದಕ್ಕೆ ಹಾಗೂ ಈ ಕ್ರಿಡೆಯ ಕುರಿತು ಚರ್ಚೆ ನಡೆಸುವುದಕ್ಕೆ ಒಂದು ಅಧಿಕೃತ ಸ್ಥಳದ ಅಗತ್ಯವಿದೆ.ಇದರಿಂದ ಹೊಸ ಆಟಗಾರರು ಸುಲಭವಾಗಿ ಈ ಆಟದಅಭ್ಯಾಸ ನಡೆಸಬಹುದಾಗಿದೆ.”ರೇ ಹೇಳಿದ್ದಾರೆ.