ಯುಎಸ್ ಓಪನ್: 5 ಬಾರಿ ಚಾಂಪಿಯನ್ ರೋಜರ್ ಫೆಡರರ್ ಟೂರ್ನಿಯಿಂದಲೇ ಔಟ್

ವಾಷಿಂಗ್ಟನ್: 5 ಬಾರಿ ಯುಎಸ್ ಓಪನ್ ಚಾಂಪಿಯನ್ ರೋಜರ್ ಫೆಡರರ್ ಭಾರಿ ಆಘಾತ ಅನುಭವಿಸಿದ್ದು, ಆಸ್ಟ್ರೇಲಿಯಾದ ಉದಯೋನ್ಮುಖ ಆಟಗಾರ ಮಿಲ್ ಮನ್ ವಿರುದ್ಧದ ಪಂದ್ಯದಲ್ಲಿ ಅಚ್ಚರಿ ಸೋಲು ಕಾಣುವ ಮೂಲಕ ಟೂರ್ನಿಯಿಂದಲೇ ಹೊರ ನಡೆದಿದ್ದಾರೆ.
ಅಮೆರಿಕಾದಲ್ಲಿ ನಡೆಯುತ್ತಿರುವ ಯುಎಸ್ ಓಪನ್ 2018ರ ಟೂರ್ನಿಯಲ್ಲಿ ವಿಶ್ವದ 2ನೇ ಶ್ರೇಯಾಂಕದ ಆಟಗಾರ ಮತ್ತು ಮಾಜಿ ಚಾಂಪಿಯನ್ ರೋಜರ್ ಫೆಡರರ್ ಆಘಾತಕಾರಿ ಸೋಲು ಅನುಭವಿಸಿದ್ದು, ಆಸ್ಟ್ರೇಲಿಯಾದ ಜೆ ಮಿಲ್ಮನ್‌ ವಿರುದ್ಧ 6-3, 5-7, 6-7, 6-7 ನೇರ ಸೆಟ್ ಗಳ ಅಂತರದಿಂದ ಸೋಲು ಕಂಡಿದ್ದಾರೆ.
ಹಾಲಿ ಋತುವಿನ ಕೊನೆಯ ಗ್ರಾಂಡ್‌ ಸ್ಲಾಮ್ ಆದ ಅಮೆರಿಕ ಓಪನ್ ಟೆನಿಸ್‌ನಲ್ಲಿ ನೊವಕ್ ಕೊಜೊವಿಚ್ ಮತ್ತು ಐದು ಬಾರಿ ಯುಎಸ್ ಓಪನ್ ಗೆದ್ದಿರುವ ಫೆಡರರ್ ರೋಜರ್ ಫೆಡರರ್ ಪ್ರಶಸ್ತಿ ಫೇವರಿಟ್‌ಗಳಾಗಿದ್ದರು. ಆದರೆ ಈ ಬಾರಿ ಫೆಡರರ್ ಆಘಾತ ಅನುಭವಿಸುವ ಮೂಲಕ ಟೂರ್ನಿಯಿಂದಲೇ ಔಟ್ ಆಗಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ