ಹೊಸ ಫ್ರೀಡಂ ಒಂದು ಲೀಟರ್‍ನ ಸನ್ ಫ್ಲವರ್ ಆಯಿಲ್ ಬಿಡುಗಡೆ

ಬೆಂಗಳೂರು, ಸೆ.4- ಜನರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಶುದ್ಧತೆ ಮತ್ತು ಪೌಷ್ಠಿಕಾಂಶಗಳನ್ನು ಹೊಂದಿರುವ ಹೊಸ ಫ್ರೀಡಂ ಒಂದು ಲೀಟರ್‍ನ ಸನ್ ಫ್ಲವರ್ ಆಯಿಲ್ ಅನ್ನು ನಟಿ ರೆಜಿನಾ ಕಸಾಂದ್ರಾ ಬಿಡುಗಡೆ ಮಾಡಿದರು.
ನಗರದಲ್ಲಿ ಜೆಮಿನಿ ಎಡಿಬಲ್ಡ್‍ಸ್ ಇಂಡಿಯಾ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಫ್ರೀಡಂ ರಿಫೈಂಡ್ ಆಯಿಲ್ ಅನ್ನು ಬಿಡುಗಡೆ ಮಾಡಲಾಯಿತು.

ಈಗಿನ ಮಹಿಳೆಯರು ಇಷ್ಟ ಪಡುವಂಥ ಮಿತ ವ್ಯಯ ಹಾಗೂ ಸುಲಭವಾಗಿ ಬಳಸಲು ಈ ವಿಶೇಷ ವಿನ್ಯಾಸದ ಬಾಟಲಿನಲ್ಲಿ ಬಿಡುಗಡೆ ಮಾಡುತ್ತಿದ್ದೇವೆ. ಆಹಾರವನ್ನು ರುಚಿಕರ ಮಾಡುವಂತಹ ಆಧುನಿಕ ಸಂಶೋಧನೆಗಳಿಂದ ಕೂಡಿದ ನಮ್ಮ ಉತ್ಪನ್ನ ಈಗಾಗಲೇ ದಕ್ಷಿಣ ಭಾರತದಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಅದರಲ್ಲೂ ಕರ್ನಾಟಕದಲ್ಲಿ ಪ್ರತಿ ತಿಂಗಳು ಸರಿ ಸುಮಾರು 90,000 ಟನ್ ಸನ್ ಫ್ಲವರ್ ಅಡುಗೆ ಎಣ್ಣೆಗೆ ಬೇಡಿಕೆ ಇದ್ದು , ಇದರಲ್ಲಿ ಫ್ರೀಡಂ ರೀಫೈಂಡ್ ಎಣ್ಣೆ ಮಾರುಕಟ್ಟೆಯಲ್ಲಿ ತನ್ನದೇ ಆದ ಪರಾಕ್ರಮವನ್ನು ಹೊಂದಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಚೌದರಿ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ