ಗಂಗಾವತಿ ಪ್ರಾಣೇಶ್ ಸ್ವ ವಿವರ ಹಾಗೂ ಕಾರ್ಯಕ್ರಮಗಳ ವೆಬ್‍ಸೈಟ್ ಲೋಕಾರ್ಪಣೆ

ಬೆಂಗಳೂರು, ಸೆ.4- ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ಅವರ ಸ್ವ ವಿವರ ಹಾಗೂ ಕಾರ್ಯಕ್ರಮಗಳ ಮಾಹಿತಿ ಒಳಗೊಂಡ ವೆಬ್‍ಸೈಟ್‍ಅನ್ನು ಇಂದು ಸಂಜೆ ಸಾಹಿತ್ಯ ಪ್ರೇಮಿಗಳ ಬಳಗವು ಲೋಕಾರ್ಪಣೆಗೊಳಿಸಲಿದೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಾಸ್ಯ ಚಕ್ರವರ್ತಿ ಗಂಗಾವತಿ ಪ್ರಾಣೇಶ್, ನನ್ನ ಬದುಕಿನ ಸಿಹಿ-ಕಹಿ ಅನುಭವಗಳು, ನಾನು ಬೆಳೆದು ಬಂದ ದಾರಿ, ಬಾಲ್ಯದ ಅನುಭವಗಳು, ನನ್ನ ಬದುಕಿನ ಅಪರೂಪದ ಘಟನೆಗಳು ಇತ್ಯಾದಿಗಳನ್ನು ಜನರೊಂದಿಗೆ ಹಂಚಿಕೊಳ್ಳುವ ಉದ್ದೇಶದಿಂದ ಈ ವೆಬ್‍ಸೈಟ್ ಸಿದ್ಧಪಡಿಸಲಾಗಿದೆ ಎಂದು ಹೇಳಿದರು.
1987 ರಿಂದ 2000ದ ನಡುವೆ ನಡೆದಿರುವ ಕಾರ್ಯಕ್ರಮಗಳ ವಿವರ, ಅಪರೂಪದ ವಿಡಿಯೋಗಳನ್ನು ಈ ವೆಬ್‍ಸೈಟ್‍ನಲ್ಲಿ ಹಂಚಿಕೊಳ್ಳಲಿದ್ದೇನೆ. ಜತೆಗೆ ಒಂದು ತಿಂಗಳು ಮುನ್ನವೇ ನಾನು ನಡೆಸುವ ಹಾಸ್ಯ ಕಾರ್ಯಕ್ರಮಗಳ ಸ್ಥಳ, ದಿನಾಂಕ ಹಾಗೂ ಯಾರನ್ನು ಸಂಪರ್ಕಿಸಬೇಕು ಎಂಬ ಮಾಹಿತಿ ಸಿಗಲಿದೆ ಎಂದರು.
ಬೇರೆಯವರು ನನ್ನ ಕಾರ್ಯಕ್ರಮಗಳ ವಿಡಿಯೋಗಳನ್ನು ದುರುಪಯೋಗ ಮಾಡಿಕೊಳ್ಳಬಾರದು ಎಂಬುದು ಇದರ ಉದ್ದೇಶವಾಗಿದೆ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ