ಶಿಕ್ಷಣವನ್ನು ಸಾಂಸ್ಕøತಿಕ ಮಾದರಿಯಲ್ಲಿ ಅರ್ಥ ಮಾಡಿಕೊಳ್ಳಬೇಕು: ಪೆÇ್ರ.ಎಸ್.ಸಿ.ಶರ್ಮ

ಬೆಂಗಳೂರು, ಸೆ.4- ಪ್ರಸ್ತುತ ಶಿಕ್ಷಣವನ್ನು ಸಾಂಸ್ಕøತಿಕ ಮಾದರಿಯಲ್ಲಿ ಅರ್ಥ ಮಾಡಿಕೊಳ್ಳಬೇಕು. ಪದವೀಧರರು ಉನ್ನತ ಶಿಕ್ಷಣವನ್ನು ಉದ್ಯೋಗದ ಮಾರ್ಗದಲ್ಲಿ ನೋಡದೆ ವ್ಯಕ್ತಿತ್ವ ನಿರ್ಮಾಣದ ದಾರಿಯಾಗಿಸಿಕೊಳ್ಳಬೇಕು ಎಂದು ಶಿಕ್ಷಣ ತಜ್ಞ , ನ್ಯಾಕ್‍ನ ನಿರ್ದೇಶಕ ಪೆÇ್ರ.ಎಸ್.ಸಿ.ಶರ್ಮ ತಿಳಿಸಿದರು.
ನಗರದ ಜೈನ್ ಸ್ವಾಯತ್ತ ವಿವಿಯ 8ನೇ ವಾರ್ಷಿಕ ಘಟಿಕೋತ್ಸವದಲ್ಲಿ ಮಾತನಾಡಿದ ಅವರು, ಆಧುನಿಕ ಶಿಕ್ಷಣದ ಅಂತಃಸತ್ತ್ವ ವನ್ನು ಭಾರತದ ತತ್ತ್ವ ಮತ್ತು ಮೌಲ್ಯಗಳೊಂದಿಗೆ ಸಂಯೋಜಿಸಬೇಕು ಎಂದು ನುಡಿದರು.

ವಿದ್ಯಾರ್ಥಿಗಳಿಗೆ ಅವರು ಅತ್ಯಂತ ನಿರೀಕ್ಷೆಯಿಂದ ಕಾಯುತ್ತಿರುವ ಪದವಿ ಪ್ರಮಾಣ ಪತ್ರಗಳನ್ನು ಅಂತಿಮವಾಗಿ ಸ್ವೀಕರಿಸುವ ಮಹತ್ತರ ಕಾರ್ಯಕ್ರಮವಾದ ಘಟಿಕೋತ್ಸವದಲ್ಲಿ ಈ ವರ್ಷ ಒಟ್ಟು 3,067 ಅಭ್ಯರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. 74 ಮಂದಿಗೆ ಚಿನ್ನದ ಪದಕ, 166 ಮಂದಿ ರ್ಯಾಂಕ್‍ಗಳನ್ನು ಪಡೆದರೆ, 16 ಮಂದಿ ಎಂಫಿಲ್ ಮತ್ತು 82 ಮಂದಿ ಪಿಎಚ್‍ಡಿ ಪದವಿ ಗಳಿಸಿದರು.

ಈ ವೇಳೆ ಮೂವರು ಚಿನ್ನದ ಪದಕ ವಿಜೇತರು ತಮ್ಮ ಸಂತೋಷ ಹಂಚಿಕೊಂಡರು. ಶಿಕ್ಷಕರು ನಮಗೆ ಸದಾಕಾಲ ನಮ್ಮ ವ್ಯಾಪ್ತಿ ಮೀರಿ ಆಲೋಚಿಸಲು ಉತ್ತೇಜಿಸುತ್ತಿದ್ದರು ಮತ್ತು ಸಿಲಬಸ್‍ಗೆ ಸೀಮಿತವಾಗಿಸಲಿಲ್ಲ ಎಂದು ಎಂಎಸ್ಸಿ ಫೆÇೀರೆನ್ಸಿಕ್ ಸೈನ್ಸ್ ಪದವೀಧರ ಸೂರ್ಯ ಪುತಲಥ್ ಸಂತಸ ಹಂಚಿಕೊಂಡರು.
ನಾನು ಸಂಶೋಧನಾ ಕೇಂದ್ರಿತ ವಿದ್ಯಾರ್ಥಿಯಾಗಿದ್ದು ನನಗೆ ಅವರ ಮೌಲಿಕ ಮಾರ್ಗದರ್ಶನ ಮತ್ತು ಅನುಭವ ಹಂಚಿಕೊಳ್ಳಲು ಅವರು ಹಿಂಜರಿಯಲಿಲ್ಲ ಎಂದು ಎಂ.ಟೆಕ್.ಏವಿಯಾನಿಕ್ಸ್ ಪದವೀಧರ ಯೋಗೇಶ್ ಮೋಹನ್ ರಾವ್ ಠಾಕ್ರೆ ಹೇಳಿದರು.

ಈ ಸಂದರ್ಭದಲ್ಲಿ ಜೈನ್ ವಿವಿ ಕುಲಾಧಿಪತಿ ಡಾ.ಸಿ.ಜಿ.ಕೃಷ್ಣದಾಸ್ ನಾಯರ್, ಜೈನ್ ವಿವಿ ಕುಲಪತಿ ಡಾ.ಎನ್.ಸುಂದರರಾಜನ್, ಜೈನ್ ವಿವಿ ಸಮ-ಕುಲಪತಿ ಡಾ.ಸಂದೀಪ್ ಶಾಸ್ತ್ರಿ, ಜೈನ್ ವಿವಿ ಕುಲಸಚಿವ ಡಾ.ಎನ್.ವಿ.ಎಚ್.ಕೃಷ್ಣನ್ ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ