ವಾರದ ಆರಂಭದಲ್ಲೇ ಏರಿಕೆ ಕಂಡ ಷೇರುಮಾರುಕಟ್ಟೆ, ರೂಪಾಯಿ ಮೌಲ್ಯದಲ್ಲೂ ಚೇತರಿಕೆ

ಮುಂಬೈ: ಕಳೆದ ವಾರಾಂತ್ಯದಲ್ಲಿ ಕುಸಿತಕಾಣುವ ಮೂಲಕ ಹೂಡಿಕೆದಾರರಲ್ಲಿ ಆತಂಕ ಮೂಡಿಸಿದ್ದ ಭಾರತೀಯ ಷೇರುಮಾರುಕಟ್ಟೆ ಸೋಮವಾರ ವಹಿವಾಟು ಆರಂಭವಾಗುತ್ತಿದ್ದಂತೆಯೇ ಏರುಗತಿಯಲ್ಲಿ ಸಾಗಿದೆ.
ಕಳೆದ ವಾರ ದಾಖಲೆ ಅಂಶಗಳ ಏರಿಕೆ ಕಂಡು ವಾರಾಂತ್ಯದಲ್ಲಿ ಕುಸಿತಗೊಂಡಿದ್ದ ಸೆನ್ಸೆಕ್ಸ್ ಇಂದು ವಾರದ ವಹಿವಾಟಿನ ಆರಂಭದಲ್ಲೇ 289 ಅಂಕಗಳ ಏರಿಕೆ ಕಂಡಿದೆ. ಆ ಮೂಲಕ ಸೆನ್ಸೆಕ್ಸ್ 38,798.10 ಅಂಕಗಳಿಗೆ ಏರಿಕೆಯಾಗಿದೆ. ಅಂತೆಯೇ ನಿಫ್ಟಿ ಕೂಡ 71.30 ಅಂಕಗಳ ಏರಿಕೆ ಕಾಣುವ ಮೂಲಕ 10, 700 ಅಂಕಗಳಿಗೆ ಏರಿಕೆಯಾಗಿದೆ. ಇನ್ನು ಇಂದಿನ ವಹಿವಾಟಿಗೆ ಈ ಹಿಂದೆ ಬಿಡುಗಡೆಯಾಗಿದ್ದ ಸಕಾರಾತ್ಮಕ ಜಿಡಿಪಿ ವರದಿ ಮತ್ತು ಮತ್ತು ಏಪ್ರಿಲ್ ಜೂನ್ ತಿಂಗಳ ತ್ರೈಮಾಸಿಕ ವರದಿ ಕಾರಣವಾಗಿರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇಂದಿನ ವಹಿವಾಟಿನಿಂದಾಗಿ ಕೃಷಿ ಕ್ಷೇತ್ರದ ಷೇರುಗಳ ಮೌಲ್ಯದಲ್ಲಿ ಏರಿಕೆ ಕಂಡುಬಂದಿದ್ದು, ರುಪಾಯಿ ಮೌಲ್ಯ ಕೂಡ ಅಲ್ಪ ಚೇತರಿಕೆ ಕಂಡಿದೆ. ಕಳೆದ ವಾರ ಡಾಲರ್ ಎದುರು ರೂಪಾಯಿ ಮೌಲ್ಯ ದಾಖಲೆ ಪ್ರಮಾಣದ ಕುಸಿತ ಕಂಡಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ