ಸಾವಿರ ಅಂಕ ಕುಸಿದು 732 ಅಂಕ ಏರಿಕೆ ಕಂಡು 19 ತಿಂಗಳ ದಾಖಲೆ ಮುರಿದ ಸೆನ್ಸೆಕ್ಸ್​!

39 ಸಾವಿರದ ಅಂಚಿಗೆ ತಲುಪಿದ್ದ ಷೇರುಪೇಟೆ ನಿನ್ನೆಯ ಮಹಾ ಕುಸಿತವೂ ಸೇರಿದಂತೆ 33900 ರ ಗಡಿಗೆ ತಲುಪಿ ಇಡೀ ದೇಶವನ್ನೇ ತಲ್ಲಣಗೊಳ್ಳುವಂತೆ ಮಾಡಿತ್ತು.   ಆದರೆ ಇಂದು ಷೇರುಪೇಟೆ ದಿಢೀರ್​ ಏರಿಕೆ ಕಂಡು ಹೂಡಿಕೆದಾರರಲ್ಲಿ ತುಸು ಮಂದಹಾಸವನ್ನುಂಟು ಮಾಡಿದೆ.

ಇನ್ನು ರಾಷ್ಟ್ರೀಯ ಷೇರು ಸೂಚ್ಯಂಕ (ನಿಫ್ಟಿ)  237.85 ಅಂಕಗಳ ಏರಿಕೆಯೊಂದಿಗೆ 10,472.50 ಕ್ಕೆ ತಲುಪಿತು.

ವಿಶೇಷ ಎಂದರೆ ಇಂದು ರೂಪಾಯಿ ಬರೋಬ್ಬರಿ ಅರ್ಧ ರೂಪಾಯಿಗೂ ಹೆಚ್ಚು ಮೌಲ್ಯವನ್ನು ಹೆಚ್ಚಿಸಿಕೊಂಡು ಷೇರುಪೇಟೆಯಲ್ಲಿ ಗೂಳಿ ಅಬ್ಬರಿಸುವಂತೆ ಮಾಡಿತು. ಅಂದರೆ ರೂ 74ರ ಮೇಲ್ಪಟ್ಟು ವ್ಯವಹಾರ ನಡೆಸುತ್ತಿದ್ದ ರೂಪಾಯಿ ಇಂದು 73.59ರಲ್ಲಿ ಸ್ಥಿರಗೊಳ್ಳುವ ಮೂಲಕ ಪೇಟೆಯಲ್ಲಿ ಹುರುಪು ತಂದಿಟ್ಟಿದೆ.

ಐಟಿ ದ್ಯತ್ಯ ಟಿಸಿಎಸ್​​ ಷೇರು ಕುಸಿತ ಕಂಡಿದ್ದನ್ನು ಹೊರತುಪಡಿಸಿ ಬಹುತೇಕ ಪ್ರಮುಖ ಷೇರುಗಳು ಇಂದು ಭರ್ಜರಿ ಲಾಭಗಳಿಸಿವೆ. ಅಂದರೆ ಏರಿಕೆ ದಾಖಲಿಸಿವೆ.   ಆಟೋ, ರಿಯಲ್ಟಿ, ಮೆಟಲ್‌, ಆಯಿಲ್‌ ಆ್ಯಂಡ್‌ ಗ್ಯಾಸ್‌, ಎಫ್ಎಂಸಿಜಿ, ಬ್ಯಾಂಕಿಂಗ್‌, ಪವರ್‌, ಇನ್‌ಫ್ರಾಸ್ಟ್ರಕ್ಚರ್‌, ಐಟಿ, ಆಟೋ ಮತ್ತು ಕ್ಯಾಪಿಟಲ್‌ ಗೂಡ್ಸ್‌ ಷೇರುಗಳು ಉತ್ತಮ ಖರೀದಿಯನ್ನು ಕಂಡವು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ