ಅನುದಾನರಹಿತ ಶಾಲಾ ನೌಕರರ ಮೇಲೆ ಮಲತಾಯಿ ಧೋರಣೆ : ಭಾರತಿ ಪಾಟೀಲ

 

ಹುಬ್ಬಳ್ಳಿ: ಹಿಂದಿನ ರಾಜ್ಯ ಸಮಿಶ್ರ ಸರ್ಕಾರ ಕರ್ನಾಟಕ ರಾಜ್ಯ ಅನುದಾನರಹಿತ ಶಾಲಾ ಕಾಲೇಜು ಭೋದಕರ ಹಾಗೂ ಭೋದಕೇತರ ಸಿಬ್ಬಂದಿಗಳಿಗೆ ಧಾರವಾಡ ಜಿಲ್ಲೆಯನ್ನು ಒಳಗೊಂಡಂತೆ ಕನಿಷ್ಟ ಮೂಲವೇತನ ಹಾಗೂ ಸೇವಾ ಭದ್ರತೆಯನ್ನು ಕಡ್ಡಾಯವಾಗಿ ನೀಡಬೇಕೆಂದು ಆದೇಶ ಹೊರಡಿಸಿತ್ತು ಆದರೆ 13 ವರ್ಷಗಳಾದರೂ ಕೂಡ ಯಾವುದೇ ಯೋಜನೆ ಅನುಷ್ಟಾನಗೊಂಡಿಲ್ಲ ಎಂದರು ಧಾರವಾಡ ಜಿಲ್ಲಾ ಅನುದಾನ ರಹಿತ ಶಾಲಾ ನೌಕರರ ಸಂಘಟನೆ ಮುಖಂಡರಾದ ಭಾರತಿ ಪಾಟೀಲ ಆರೋಪಿಸಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಪತ್ರ ಸಂಖ್ಯೆ ಇಡಿ/104/ಎಸ್.ಇ.ಪಿ/2005 ಆದೇಶದಲ್ಲಿ 5ನೇ ವೇತನ ಆಯೋಗದಡಿಯಲ್ಲಿ ಕನಿಷ್ಟ ಮೂಲವೇತನ ಶ್ರೇಣಿ 2005ರಿಂದ 2011ರವರಗೆ ಪ್ರಾಥಮಿಕ ವಿಭಾಗಕ್ಕೆ ರೂ.6600, ಪ್ರೌಢ ವಿಭಾಗಕ್ಕೆ ರೂ.8800 ನೀಡಬೇಕೆಂದು ಆದೇಶಿಸಿತ್ತು 2012ರಿಂದ 2017ರ ವರೆಗೆ ಪ್ರಾಥಮಿಕ ವಿಭಾಗಕ್ಕೆ ರೂ.13600, ಪ್ರೌಢ ವಿಭಾಗಕ್ಕೆ 17650 ನೀಡಬೇಕಾಗಿತ್ತು ಅಲ್ಲದೇ ವೇತನವನ್ನು ವೈಯಕ್ತಿಕ ಚೆಕ್ ಹಾಗೂ ಬ್ಯಾಂಕ್ ಖಾತೆಯ ಮೂಲಕ ನೀಡಬೇಕಾಗಿತ್ತು ಆದರೆ ಯಾವುದೇ ಯೋಜನೆಗಳು ಕೂಡ ಅನುಷ್ಟಾನಗೊಂಡಿಲ್ಲ ಎಂದರು.
ದಿನಭತ್ಯೆ, ಮನೆಬಾಡಿಗೆ ಭತ್ಯೆ, ನಗರ ಪರಿಹಾರ ಭತ್ಯೆ, ವಾರ್ಷಿಕ ವೇತನ ಬಡ್ತಿ, ಸಾಮಾನ್ಯ ಭವಿಷ್ಯ ನಿಧಿ, ಇಎಸ್ಐ ಹಾಗೂ ಗ್ರಾಚ್ಯುಟಿಯನ್ನು ಆಡಳಿತ ಮಂಡಳಿಯವರೇ ನೀಡಬೇಕು ಇಂತಹ ಹಲವಾರು ಯೋಜನೆಗಳು ಜಾರಿಯಾಗದೇ ಇರುವುದು ನೌಕರರಲ್ಲಿ ಆತಂಕ ಸೃಷ್ಟಿಸಿವೆ ಎಂದರು.
ಅನುದಾನರಹಿತ ಶಿಕ್ಷಣ ಸಂಸ್ಥೆಗಳಲ್ಲಿ ಅನುಷ್ಟಾನಗೊಳಿಸಲು ಹಲವು ಆದೇಶಗಳನ್ನು ಇಲಾಖೆಯ ಸುತ್ತೋಲೆಗಳನ್ನು ಕಳೆದ 13ವರ್ಷದಿಂದ ಹೊರಡಿಸಲಾಗಿದ್ದರೂ ಯಥಾವತ್ತಾಗಿ ಅನುಷ್ಟಾನಗೊಳಿಸಿಲ್ಲ ಇದು ಶಾಲಾ ನೌಕರರ ಮೇಲೆ ಸರ್ಕಾರ ಹಾಗೂ ಮ್ಯಾನೆಜ್‌ಮೆಂಟ್ ಅವರು ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ. ಈ ಕುರಿತು ಹಲವಾರು ಭಾರಿ ರಾಜ್ಯ ಸರ್ಕಾರ, ಶಿಕ್ಷಣ ಸಚಿವರಿಗೆ ಅಲ್ಲದೇ ಮಾನವ ಹಕ್ಕು ಆಯೋಗಕ್ಕೆ ದೂರು ಸಲ್ಲಿಸಿದರು ಕೂಡ ಯಾವುದೇ ಶಿಸ್ತು ಕ್ರಮ ಜಾರಿಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅನುದಾನರಹಿತ ಶಾಲಾ ನೌಕರರಿಗೆ ಅನ್ಯಾಯವಾಗಿದೆ ಇದು ಕಾನೂನ ಉಲ್ಲಂಘನೆಯಾಗಿರುವದು ಗಮನಾರ್ಹವಾಗಿದೆ ಶೀಘ್ರವೇ ಸೂಕ್ತ ಕ್ರಮ ಜಾರಿಗೊಳಿಸಿ ಶಾಲಾ ಶಿಕ್ಷಕರ ಹಿತವನ್ನು ಕಾಪಾಡಬೇಕು ಎಂದರು.

ಈ ಸಂದರ್ಭದಲ್ಲಿ ರಾಜಶೇಖರ ಮೂರ್ತಿ, ಹರೀಶ ಸೇರಿದಂತೆ ಇತರರು ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ