6 ಸಾವಿರ ರನ್ ಪೂರೈಸಿದ ಕ್ಯಾಪ್ಟನ್ ಕೊಹ್ಲಿಗೆ ಹೊಟೇಲ್ ಸಿಬ್ಬಂದಿಗಳಿಂದ ಸರ್‍ಪ್ರೈಸ್

SOUTHAMPTON, ENGLAND - AUGUST 31: India captain Virat Kolhi bats during day two of the Specsavers 4th Test match between England and India at The Ageas Bowl on August 31, 2018 in Southampton, England. (Photo by Gareth Copley/Getty Images)

ಸೌಥಾಂಪ್ಟನ್:ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಎರಡನೇ ದಿನದಾಟದ ಪಂದ್ಯ ಮುಗಿಸಿ ಹೊಟೇಲ್‍ಗೆ ಹೋದಾಗ ಸರ್‍ಪ್ರೈಸ್ ಕಾದಿತ್ತು.
ಟೀಂ ಇಂಡಿಯಾ ತಂಗಿರುವ ಹಾರ್ಬರ್ ಹೋಟೇಲ್‍ನ ಸಿಬ್ಬಂದಿಗಳು ವಿರಾಟ್ ಕೊಹ್ಲಿಗೆ ವಿಶೇಷವಾದ ಕೇಕ್ ತಯಾರಿಸಿ ಗಿಫ್ಟ್ ನೀಡಿದ್ರು. ಈ ಬಗ್ಗೆ ವಿರಾಟ್ ಕೊಹ್ಲಿ ಹಾರ್ಬರ್ ಹೋಟೇಲ್ ಸಿಬ್ಬಂದಿಗಳದ್ದು ಎಂತಹ ಆತಿಥ್ಯ ಎಂದು ಟ್ವಿಟರ್‍ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೇಕ್‍ನಲ್ಲಿ ವಿರಾಟ್ ಕೊಹ್ಲಿಗೆ 6 ಸಾವಿರ ರನ್ ಪೂರೈಸಿದಕ್ಕೆ ಅಭಿನಂದನೆಗಳನ್ನ ತಿಳಿಸಲಾಗಿತ್ತು. ಆಂಗ್ಲರ ವಿರುದ್ಧ ಮೊದಲ ಇನ್ನಿಂಗ್ಸ್ ನಲ್ಲಿ ವಿರಾಟ್ ಕೊಹ್ಲಿ ಎರಡನೇ ಕ್ರಮಾಂಕದಲ್ಲಿ ಆಗಮಿಸಿ ತಂಡವನ್ನ ಕಾಪಾಡಿದ್ದರು. ಪೂಜಾರ ಜೊತೆಗೂಡಿ 3ನೇ ವಿಕೆಟ್‍ಗೆ 92 ರನ್‍ಗಳ ಜೊತೆಯಾಟ ನೀಡಿ ತಂಡ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಿಂದ ಪಾರು ಮಾಡಿದ್ರು.
ವಿರಾಟ್ ಕೊಹ್ಲಿ 46 ರನ್‍ಗಳಾಗಿದ್ದಾಗ ಸ್ಯಾಮ್ ಕರನ್ ಎಸೆತದಲ್ಲಿ ಸ್ಲಿಪ್‍ನಲ್ಲಿದ್ದ ಅಲೆಸ್ಟರ್ ಕುಕ್‍ಗೆ ಕ್ಯಾಚ್ ನೀಡಿ ಅರ್ಧ ಶತಕದಿಂದ ವಂಚಿತರಾಗಿದ್ರು. ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 27ರನ್‍ಗಳ ಮುನ್ನಡೆ ಪಡೆಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ