9 ರಂದು ಕೃತಕ ಕೈಕಾಲು ಜೋಡಣಾ ಶಿಬಿರ

ಹುಬ್ಬಳ್ಳಿ : ಭಾರತ ವಿಕಾಸ ಪರಿಷತ್ ನ ಸಿದ್ದಾರೂಢ ಶಾಖೆ ಹಾಗೂ ಮಜೇಥಿಯಾ ಫೌಂಡೇಶನ್ ಸಹಯೋಗದಲ್ಲಿ ಸೆ.೯ಹಾಗೂ ಅಕ್ಟೋಬರ್ ೭ರಂದು ನಗರದಲ್ಲಿ ೨ಹಂತಗಳಲ್ಲಿ ಉಚಿತ ಕೃತಕ ಕೈ ಕಾಲು ಜೋಡಣಾ ಶಿಬಿರವನ್ನು ಮೂರುಸಾವಿರ ಮಠದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವಿಕಲಾಂಗ ಸಹಯೋಗ ಪ್ರಮುಖ ಪಿ.ಮಂಜುನಾಥ ಭಟ್ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ೨ಹಂತಗಳಲ್ಲಿ ಜರುಗುವ ಶಿಬಿರವನ್ನು ಭಾರತ ವಿಜಾಸ ಪರಿಷತ್ ವಿಕಲಾಂಗ ಕೇಂದ್ರ ಹಾಗೂ ಹೈದರಾಬಾದನಿಂದ ಬರುವ ನುರಿತ ತಜ್ಞರು ನಡೆಸಿಕೊಡಲಿದ್ದಾರೆಂದರು.
ಮೊದಲ ಹಂತದಲ್ಲಿ ದಿ.ಸೆ.೯ರಂದು ಬೆಳಿಗ್ಗೆ ೧೦ರಿಂದ ಮಧ್ಯಾಹ್ನ ೨ಗಂಟೆವರೆಗೆ ನೋಂದಣಿ ಮತ್ತು ನುರಿತ ತಜ್ಞರಿಂದ ವಿಕಲ ಚೇತನರ ತಪಾಸಣೆ-ಕೃತಕ ಕೈಕಾಲು ಅಳತೆಯನ್ನು ಪಡೆಯಲಾಗುತ್ತಿದೆ. ಎರಡನೆಯ ಹಂತದಲ್ಲಿ ಅಕ್ಟೋಬರ್ ೭ರಂದು ನಡೆಯುವ ಸರಳ ಸಮಾರಂಭದಲ್ಲಿ ಫಕಾನುಭವಿಗಳಿಗೆ ಕೃತಕ ಕೈಕಾಲುಗಳನ್ನು ಜೋಡಿಸಿ ಅಪಯೋಗಿಸುವ ಬಗೆಗೆ ತರಬೇತಿ ನೀಡಲಾಗುವುದು ಎಂದು ಅವರು ತಿಳಿಸಿದರು.
ಅಫಘಾತದಲ್ಲಿ ಹಾಗೂ ಇತರ ಕಾರಣಗಳಿಂದ ಕೈಕಾಲುಗಳನ್ನು ಕಳೆದುಕೊಂಡವರು ಈ ಉಚಿತ ಸೇವೆಯನ್ನು ಸದುಪಯೋಗ ಪಡಿಸಿಕೊಳ್ಳಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ .೯೭೩೧೬೪೭೬೩೦,೯೪೪೮೧೧೬೯೬೦,೮೯೦೪೨೪೩೫೯೭,೯೪೪೮೦೧೩೬೦೬ ಈ ಮೊಬೈಲ್ ಗಳಿಗೆ ಸಂಪರ್ಕಿಸಬಹುದಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ನರೇಂದ್ರ ನಾಯಕ, ಅಮೃತಬಾಯಿ ಪಟೇಲ್, ದಯಾಲಾಲ ಪಟೇಲ್, ಅಮರೇಶ ಹಿಪ್ಪರಗಿ ಮತ್ತಿತರರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ