ಹೊಸದಿಲ್ಲಿ: ಆದಾಯ ತೆರಿಗೆ ವಿವರ ಸಲ್ಲಿಕೆಗೆ ಕೊನೆಯ ದಿನ ಆಗಸ್ಟ್ 31 ಮುಕ್ತಾಯವಾಗಿದ್ದು, ಒಟ್ಟು 6 ಕೋಟಿಗೂ ಹೆಚ್ಚು ಮಂದಿ ಐಟಿಆರ್ ಸಲ್ಲಿಸಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.60ರಷ್ಟು ಏರಿಕೆಯಾಗಿದೆ.
ಇದುವರೆಗೆ 6,74,74,904 ರಿಟರ್ನ್ಸ್ ದಾಖಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ. ಐಟಿಆರ್ ಸಲ್ಲಿಕೆಯ ಮಹತ್ವದ ಬಗ್ಗೆ ಜನ ಜಾಗೃತಿಯಾಗಿರುವುದು ಇದಕ್ಕೆ ಕಾರಣ ಎನ್ನಲಾಗಿದೆ.
ವೇತನದಾರರು ಒಂದು ವೇಳೆ ಆಗಸ್ಟ್ 31ರ ಗಡುವು ತಪ್ಪಿದವರೂ, ಐಟಿಆರ್ ಸಲ್ಲಿಸಬಹುದು. ಆದರೆ ದಂಡ ಪಾವತಿಸಬೇಕಾಗುತ್ತದೆ.
ದಂಡ ಎಷ್ಟು?: ನಿಮ್ಮ ವಾರ್ಷಿಕ ವೇತನ 5 ಲಕ್ಷ ರೂ.ಗಿಂತ ಕಡಿಮೆ ಇದ್ದರೆ, 1000 ರೂ. ದಂಡ ಪಾವತಿಸಬೇಕು. 5 ಲಕ್ಷ ರೂ.ಗಿಂತ ಹೆಚ್ಚು ವೇತನ ಆದಾಯ ಇದ್ದರೆ, 5,000 ರೂ. ದಂಡ ಪಾವತಿಸಬೇಕು. ಹಾಗೂ ಡಿಸೆಂಬರ್ 31ರೊಳಗೆ ಐಟಿಆರ್ ಸಲ್ಲಿಸಬೇಕು. ಡಿಸೆಂಬರ್ 31ರ ನಂತರ ಸಲ್ಲಿಸುವವರಿಗೆ 10,000 ರೂ. ದಂಡ ತಗಲುತ್ತದೆ.