ಅತ್ಯಾಧುನಿಕ ಬ್ಯಾಟರಿ ಆಧರಿತ ಸೌರವಿದ್ಯುತ್ ದಾಸ್ತಾನು ಉತ್ಪನ್ನ ಮಾರುಕಟ್ಟೆಗೆ

ಬೆಂಗಳೂರು, ಆಗಸ್ಟ್ 31, 2018: ಬೆಂಗಳೂರು ಮೂಲದ ಸನ್- ಎಪಿ ಎಕೊಪವರ್ ಎಂಜಿನಿಯರಿಂಗ್ ಕಂಪನಿ, ಅಮೆರಿಕದ ಅಗ್ರಗಣ್ಯ ಸೋಲಾರ್ ಸ್ಟೋರೇಜ್ ಸೊಲ್ಯೂಶನ್ಸ್ ಕಂಪನಿಯಾದ ಔಟ್‍ಬ್ಯಾಕ್ ಪವರ್ ಟೆಕ್ನಾಲಜೀಸ್ ಜತೆ ಒಪ್ಪಂದ ಮಾಡಿಕೊಂಡು, ಅತ್ಯಾಧುನಿಕ ಅಲಿನೊ ಮತ್ತು ಔಟ್‍ಬ್ಯಾಕ್ ಸರಣಿಯ ಸೌರ ಉತ್ಪನ್ನಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಲಿಥಿಯಂ ಅಥವಾ ಅತ್ಯಾಧುನಿಕ ಎಲ್‍ಎಂಎಲ್‍ಎ ಬ್ಯಾಟರಿ ಮತ್ತು ಅತ್ಯಧಿಕ ಕ್ಷಮತೆಯ ಔಟ್‍ಬ್ಯಾಕ್ ಇನ್‍ವರ್ಟರ್ ಬಳಸುವ ವಿದ್ಯುತ್ ದಾಸ್ತಾನು ಉತ್ಪನ್ನ ಇದಾಗಿದೆ.

ಇದು ವಿಕೇಂದ್ರೀಕೃತ ವಿದ್ಯುತ್ ಉತ್ಪಾದನೆಯನ್ನು ಉತ್ತೇಜಿಸಲು ಮತ್ತು ಸೌರ ಗ್ರಿಡ್ ಮತ್ತು ಬ್ಯಾಟರಿ ವ್ಯವಸ್ಥೆಯನ್ನು ಹೊಂದುವ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಅಥವಾ ವಿದ್ಯುತ್ ಕೊರತೆ ಇರುವ ಪ್ರದೇಶಗಳಲ್ಲಿ ಸುಲಲಿತ ವಿದ್ಯುತ್ ಪೂರೈಕೆ ಮಾಡಲು ನೆರವಾಗಲಿದೆ. ಈ ಉತ್ಪನ್ನವು ಕಂಪನಿ ಮನೆಬಾಗಿಲ ಸೇವೆಗಾಗಿ ವ್ಯವಸ್ಥೆ ಮಾಡಿರುವ ಪಾಲುದಾರ ಸಂಸ್ಥೆಗಳ ಜಾಲದ ಮೂಲಕ ಇದೀಗ ಕರ್ನಾಟಕದಾದ್ಯಂತ ಲಭ್ಯವಿರುತ್ತದೆ.

ಈ ಪಾಲುದಾರಿಕೆಯು ಸೌರಘಟಕ ಅಳವಡಿಸುವ ಕಂಪನಿಗಳು ಮತ್ತು ಕಟ್ಟಕಡೆಯ ಗ್ರಾಹಕರಿಗೆ ವಿಶ್ವಾಸಾರ್ಹ, ಸುಲಲಿತ, ಕ್ಷೇತ್ರ ಪರೀಕ್ಷೆಗೆ ಒಳಪಡಿಸಿದ ಗ್ರಿಡ್ ಹೊರತಾದ ಅಥವಾ ಅತ್ಯಾಧುನಿಕ ಬ್ಯಾಟರಿಯಿಂದ ನಿರ್ವಹಿಸಲ್ಪಡುವ ಹೈಬ್ರೀಡ್ ಇನ್‍ವರ್ಟರ್ ವ್ಯವಸ್ಥೆಯನ್ನು ಪರಿಚಯಿಸಲಿದೆ. ಇದು ವಿದ್ಯುತ್ ಕಡಿತ ಮತ್ತು ಒಳನಾಡು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಸಮಸ್ಯೆ ನಿಭಾಯಿಸಲು ನೆರವಾಗಲಿದೆ. ಜತೆಗೆ ವಿದ್ಯುತ್ ಕೊರತೆ ಇರುವ ಪ್ರದೇಶಗಳಲ್ಲೂ ತಕ್ಷಣದ ನಿಗಾ ವ್ಯವಸ್ಥೆಯ ಮೂಲಕ ನೆರವಾಗುತ್ತದೆ. ಈ ವಿನೂತನ ಸೊಲ್ಯೂಶನ್, ಅತ್ಯಧಿಕ ವಿದ್ಯುತ್ ದಾಸ್ತಾನು ಮಾಡುವ ಸಾಮಥ್ರ್ಯ ಹೊಂದಿದ್ದು, ನೈಸರ್ಗಿಕ ವಿಕೋಪಕ್ಕೆ ತುತ್ತಾಗುವ ಪ್ರದೇಶಗಳು ಮತ್ತು ಇತರ ತುರ್ತು ಅಗತ್ಯದ ಪ್ರದೇಶಗಳಿಗೆ ನಿರಂತರ ವಿದ್ಯುತ್ ಪೂರೈಕೆ ಮಾಡುತ್ತದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ