ತುಮಕೂರು: ಮೆಡಿಕಲ್ ಸೀಟು ಹಂಚಿಕೆ ಪ್ರಕ್ರಿಯೆ ಪಾರದರ್ಶಕವಾಗಿದೆ. ದೆಹಲಿಯಿಂದಲೇ ಸೀಟು ಹಂಚಿಕೆಯಾಗಲಿದೆ. ಹೀಗಾಗಿ ಇದರಲ್ಲಿ ಯಾವುದೇ ಶಾರ್ಟ್ಕಟ್ ಇಲ್ಲ. ಒಂದು ವೇಳೆ ಯಾರಾದರು ಪೋಷಕರ ಬಳಿ ಹಣ ಪಡೆದು ವಂಚಿಸಿದ್ದರೆ ಅಂಥವರು ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.
ತುಮಕೂರಿನಲ್ಲಿ ಸುದ್ದಿಗಾರ ಪ್ರಶ್ನೆಗೆ ಉತ್ತರಿಸಿದ ಅವರು, ವಿದ್ಯಾರ್ಥಿಗಳುನೀಟ್ ಪರೀಕ್ಷೆ ಬರೆದೇ ಸೀಟು ಪಡೆಯುವ ಪದ್ಧತಿ ಇದೆ. ಇದರಲ್ಲಿ ಯಾವ ಶಾರ್ಟ್ ಕಟ್ ಇಲ್ಲ.ಹಣ ಪಡೆದು ಸೀಟು ಹಂಚಿಕೆ ಮಾಡುವುದು ಅಸಾಧ್ಯ. ಪೋಷಕರ ಬಳಿ ಹಣ ಪಡೆದು ವಂಚಿಸಿದ್ದರೆ ದೂರು ನೀಡಿ, ಅವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.