ಸಿದ್ದಾರ್ಥ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಸಮಾಲೋಚನೆ ಆರಂಭ: ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್

ತುಮಕೂರು: ಇಂದು ಸಾಕ್ಷರತೆ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ದೇಶದ ಆರ್ಥಿಕ ಸ್ಥಿತಿ ಮೇಲ್ಮಟ್ಟಕ್ಕೇರಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.

2018-19 ಸಾಲಿನ ಎಂಬಿಬಿಎಸ್‌ ಹಾಗೂ ಎಂಜಿನಿಯರಿಂಗ್‌ ನೂತನ ವಿದ್ಯಾರ್ಥಿಗಳ ಫ್ರೆಷರ್ಸ್ ಡೇ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹೇಳಿದರು.

ದೇಶದಲ್ಲಿ ವಿವಿಧ ವಿಶ್ವವಿದ್ಯಾಲಯದಿಂದ ಪ್ರತಿ ವರ್ಷ 5 ಲಕ್ಷ ಎಂಜಿನಿಯರ್ ಹಾಗೂ 70 ಸಾವಿರ ಎಂಬಿಬಿಎಸ್‌ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಬರುತ್ತಿದ್ದಾರೆ. ಇಡೀ ವಿಶ್ವದಲ್ಲಿ ನಮ್ಮ ದೇಶದ ಎಂಜಿನಿಯರ್ಸ್, ವೈದ್ಯರು ಕೆಲಸ‌ ಮಾಡುತ್ತಿ, ಯತ್ತೇಚ್ಚವಾಗಿ ಮಾನಸಂಪನ್ಮೂಲವನ್ನು ಒದಗಿಸುತ್ತಿದ್ದೇವೆ.
ಇದರಿಂದ ದೇಶದ ಆರ್ಥಿಕ ಸ್ಥಿತಿಯೂ ಉತ್ತಮ‌ಮಟ್ಟಕ್ಕೇರಿದೆ ಎಂದರು.

ಸಿದ್ದಾರ್ಥ ಶಿಕ್ಷಣ ಸಂಸ್ಥೆಯು ಪ್ರಾಥಮಿಕ ಶಿಕ್ಷಣದಿಂದ ಪ್ರಾರಂಭವಾಗಿ ಇಂದು ಉನ್ನತ ಶಿಕ್ಷಣ ನೀಡುವ ಮಟ್ಟಕ್ಕೆ ಏರಿದೆ. ಈ ಬಾರಿ ೩೧ನೇ ಮೆಡಿಕಲ್ ಬ್ಯಾಚ್ ಪ್ರಾರಂಭವಾಗಿದೆ ಎಂದರು.

ಈ ಕ್ಯಾಂಪಸ್‌ನಲ್ಲಿ ಡ್ರಗ್‌ಗೆ ಅವಕಾಶವಿಲ್ಲ. ಸರಕಾರದಿಂದ ಡ್ರಗ್ ನಿರ್ಮೂಲನೆಗೆ ದಿಟ್ಟ ಹೆಜ್ಜೆ ಇಟ್ಟಿದ್ದೇವೆ. ಅಂತೆಯೇ ಈ ಕ್ಯಾಂಪಸ್‌ನಲ್ಲು ಜಾರಿ ಮಾಡಲಾಗುವುದು ಎಂದರು.

ವಿದ್ಯಾರ್ಥಿಗಳ ಮೇಲೆ ನಿಗಾ ಇಡಲು, ವಿದ್ಯಾರ್ಥಿಗಳ ಸಮಾಲೋಚನೆ ಪ್ರಾರಂಭಿಸಲಾಗುತ್ತಿದೆ ಎಂದು ತಿಳಿಸಿದರು.

ಇದೇವೇಳೆ ಕೊಡಗು ನೆರೆ ನಿರಾಶ್ರಿತರಿಗೆ ಒಂದು ವಾಹನದಷ್ಟು ಅಗತ್ಯ ಸಾಮಾಗ್ರಿಗಳನ್ನು ಸಿದ್ದಾರ್ಥ ಶಿಕ್ಷಣ ಸಂಸ್ಥೆಯಿಂದ ಕಳುಹಿಸಿಕೊಡಲಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ