ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಒಡಿಸ್ಸಾ ಮೂಲದ ವ್ಯಕ್ತಿ ಸೇರಿ ನಾಲ್ವರನ್ನು ಉತ್ತರ ವಿಭಾಗದ ಶ್ರೀರಾಮಪುರ ಠಾಣೆ ಪೆÇಲೀಸರಿಂದ ಬಂಧನ

ಬೆಂಗಳೂರು, ಆ.31- ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಒಡಿಸ್ಸಾ ಮೂಲದ ವ್ಯಕ್ತಿ ಸೇರಿ ನಾಲ್ವರನ್ನು ಉತ್ತರ ವಿಭಾಗದ ಶ್ರೀರಾಮಪುರ ಠಾಣೆ ಪೆÇಲೀಸರು ಬಂಧಿಸಿದ್ದಾರೆ.
ಮೂಲತಃ ಒಡಿಸ್ಸಾದ ಪ್ರತಾಪ್‍ಕುಮಾರ್ ಸಾಹು (29), ರಾಮಮೂರ್ತಿನಗರದ ನಾರಾಯಣ(35), ಶ್ರೀಗಂಧ ಕಾವಲು ನಿವಾಸಿ ನೂರ್ ಅಹಮ್ಮದ್ (32) ಹಾಗೂ ಓಕಳಿಪುರದ ವೆಂಕಟೇಶ್ (38) ಬಂಧಿತರು.
ಆರೋಪಿಗಳಿಂದ 1.60 ಲಕ್ಷ ರೂ. ಮೌಲ್ಯದ 4 ಕೆಜಿ ಗಾಂಜಾ ವಶಪಡಿಸಿಕೊಳ್ಳುವಲ್ಲಿ ಶ್ರೀರಾಮಪುರ ಠಾಣೆ ಪೆÇಲೀಸರು ಯಶಸ್ವಿಯಾಗಿದ್ದಾರೆ.
ಶ್ರೀರಾಮಪುರ ಠಾಣೆ ವ್ಯಾಪ್ತಿಯ ಪಿಎಫ್‍ರಸ್ತೆಯ ಬ್ರಿಟಾನಿಯಾ ರಸ್ತೆ ಜಂಕ್ಷನ್ ಬಳಿ ಆಟೋ ರಿಕ್ಷಾದಲ್ಲಿ ನಾಲ್ವರು ವ್ಯಕ್ತಿಗಳು ಮಾದಕ ವಸ್ತು ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಪೆÇಲೀಸರಿಗೆ ಮಾಹತಿ ಲಭಿಸಿದೆ.
ತಕ್ಷಣ ಕಾರ್ಯ ಪ್ರವೃತ್ತರಾದ ಪೆÇಲೀಸರು ಸ್ಥಳದ ಮೇಲೆ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿ ಮಾಲನ್ನು ವಶಪಡಿಸಿಕೊಂಡಿದ್ದಾರೆ.
ಇವರನ್ನು ವಿಚಾರಣೆಗಳೊಪಡಿಸಿದಾಗ ಆರೋಪಿ ಪ್ರತಾಪ್‍ಕುಮಾರ್ ಎಂಬಾತ ಗಾಂಜಾಸೊಪ್ಪನ್ನು ಒಡಿಸ್ಸಾ ರಾಜ್ಯದಿಂದ ಕಡಿಮೆ ಬೆಲೆಗೆ ತಂದು ಬೆಂಗಳೂರಿನಲ್ಲಿ ಅಧಿಕ ಬೆಲೆಗೆ ಮಾರಾಟ ಮಾಡುತ್ತಿದುದ್ದಾಗಿ ತಿಳಿದು ಬಂದಿದೆ.
ಸಹಾಯಕ ಪೆÇಲೀಸ್ ಆಯುಕ್ತ ಧನಂಜಯ, ಇನ್ಸ್‍ಸ್ಪೆಕ್ಟರ್ ಗೌತಮ್ ಅವರನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ