18ನೇ ಏಷ್ಯನ್ ಗೇಮ್ಸ್‍ನ 13ನೇ ದಿನವಾದ ಇಂದು ವಿವಿಧ ಕ್ರೀಡೆಗಳಲ್ಲಿ ಭಾರತದ ಪ್ರಾಬಲ್ಯ ಮುಂದುವರಿಕೆ

ಜಕಾರ್ತ (ಪಿಟಿಐ), ಆ.31-ಇಂಡೋನೆಷ್ಯಾದಲ್ಲಿ ನಡೆಯುತ್ತಿರುವ 18ನೇ ಏಷ್ಯನ್ ಗೇಮ್ಸ್‍ನ 13ನೇ ದಿನವಾದ ಇಂದು ವಿವಿಧ ಕ್ರೀಡೆಗಳಲ್ಲಿ ಭಾರತದ ಪ್ರಾಬಲ್ಯ ಮುಂದುವರಿದಿದೆ. ಭಾರತೀಯ ಮಹಿಳಾ ಸ್ಕ್ವಾಶ್ ತಂಡ ಹಾಲಿ ಚಾಂಪಿಯನ್ ಮಲೇಷ್ಯಾವನ್ನು ಮಣಿಸಿ ಫೈನಲ್ ತಲುಪಿದೆ. ಇದರೊಂದಿಗೆ ಭಾರತಕ್ಕೆ ಮತ್ತೊಂದು ಪದಕ ಖಚಿತವಾಗಿದೆ.
ಜೋಷ್ನಾ ಚಿನ್ನಪ್ಪ, ದೀಪಿಕಾ ಪಿಲ್ಲಿಲಕ್ ಕಾರ್ತಿಕ್, ಸುನಯನ ಕುರುವಿಲ್ಲಾ ಮತ್ತು ತಾನ್ವಿ ಖನ್ನಾ ಅವರನ್ನು ಒಳಗೊಂಡ ತಂಡವು ಬಲಿಷ್ಠ ಮಲೇಷ್ಯಾ ವನಿತೆಯರನ್ನು 2-0ರಿಂದ ಮಣಿಸಿತು.
ಫೈನಲ್ ಪ್ರವೇಶಿಸಿರುವ ಭಾರತೀಯ ತಂಡ ಚಿನ್ನ ಅಥವಾ ಬಂಗಾರದ ಪದಕ ಗೆಲ್ಲುವ ಆಸೆ ಮೂಡಿಸಿದೆ.
ಇಂದು ಸಂಜೆ ನಡೆಯುವ ಸೆಮಿ ಫೈನಲ್ಸ್‍ನಲ್ಲಿ ಭಾರತೀಯ ಪುರುಷರ ಸ್ಕ್ವಾಶ್ ತಂಡವು ಬಲಿಷ್ಠ ಹಾಂಕಾಂಗ್ ವಿರುದ್ಧ ಸೆಣಸಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ