ಹುಬ್ಬಳ್ಳಿ: ಹುಬ್ಬಳ್ಳಿ ಸೆಂಟ್ರಲ್ ಲೇಡಿಸ್ ಸರ್ಕಲ್ -71, ಲೇಡಿಸ್ ಸರ್ಕಲ್ ಅಸೋಸಿಯೇಷನ್ ಇಂಡಿಯನ್ ಹಾಗೂ ಕಿಮ್ಸ್ ವತಿಯಿಂದ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮವನ್ನು ಇದೇ ಸೆ.1ರಂದು ನಗರದ ಬಿವಿಬಿ ಕಾಲೇಜಿನ ಆಡಿಟೋರಿಯಂ ಹಾಲನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಜಯ ಮಿಶ್ರಾ ತಿಳಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರಲ್ಲಿ ಕ್ಯಾನ್ಸರ್ ರೋಗದ ಬಗ್ಗೆ ಜಾಗೃತಿ ಹಾಗೂ ಆರೋಗ್ಯದ ಬಗ್ಗೆ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಕಾರ್ಯಕ್ರಮದಲ್ಲಿ ತಿಳಿಸಲಾಗುವುದು ಎಂದರು. ಸಾವಿರಾರೂ ಜನರು ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಿದ್ದಾರೆ ಈ ಹಿನ್ನೆಲೆಯಲ್ಲಿ ಕ್ಯಾನ್ಸರ್ ರೋಗದ ಬಗ್ಗೆ ಜಾಗೃತಿ ಮೂಡಿಸುವ ಸದುದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಡಾ.ಕೆ.ಶಶಿಧರ, ಕಿಮ್ಸ್ ನಿರ್ದೆಶಕರಾದ ಡಾ.ರಾಮಲಿಂಗಪ್ಪ, ಹಾಗೂ ಡಾ.ಶೋಭಾ ಸೇರಿದಂತೆ ಇತರರು ಆಗಮಿಸಲಿದ್ದಾರೆ. ಜಾಗೃತಿ ಅಭಿಯಾನದಲ್ಲಿ ರಕ್ತಕ್ಯಾನ್ಸರ್, ಸ್ತನಕ್ಯಾನ್ಸರ್, ಮೆದಳು ಕ್ಯಾನ್ಸರ್ ಸೇರಿದಂತೆ ವಿವಿಧ ಬಗೆಯ ಕ್ಯಾನ್ಸರ್ ಕುರಿತಾಗಿ ಮಾಹಿತಿ ನೀಡಲಾಗುವುದು ಅಲ್ಲದೇ ಯುವ ಸಮುದಾಯ ತಂಬಾಕು, ನಿಕೋಟಿನ್ ಅಂತಹ ಮಾದಕ ವಸ್ತುಗಳಿಗೆ ಬಲಿಯಾಗುತ್ತಿದ್ದಾರೆ ಅದನ್ನು ಸಮಾಜದಿಂದ ಹೊರಗೆ ಹಾಕುವ ಧೇಯೋದ್ದೇಶವನ್ನು ಸಂಸ್ಥೆಯೂ ಹೊಂದಿದೆ ಎಂದರು.
ಈ ಸಂದರ್ಭದಲ್ಲಿ ಮನಿಶಾ, ಆರ್ಯಾ ಅಂಕಲಿಕರ್, ಸಾಂಚಿ ಶರ್ಮಾ ಸೇರಿದಂತೆ ಇತರರು ಇದ್ದರು.