ರೈತ ಸಮುದಾಯ ಬಯಸಿದ್ದನ್ನು ನಾವು ಈಡೇರಿಸಿದ್ದೇವೆ: ಸಿಎಂ ಕುಮಾರಸ್ವಾಮಿ

ಹೊಸದಿಲ್ಲಿ: ರೈತ ಸಮುದಾಯ ಬಯಸಿದ್ದನ್ನು ನಾವು ಈಡೇರಿಸಿದ್ದೇವೆ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿಯಾದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ನಮ್ಮ ಸಮ್ಮಿಶ್ರ ಸರ್ಕಾರ ಯಶಸ್ವಿಯಾಗಿ 100 ದಿನ ಪೂರೈಸಿದೆ. ಇದಕ್ಕಾಗಿ ನಾಡಿನ ಜನತೆಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಈ 100 ದಿನಗಳಲ್ಲಿ ರೈತ ಸಮುದಾಯ ಬಯಸಿದ್ದನ್ನು ನಾವು ಈಡೇರಿಸಿದ್ದೇವೆ. ಅಂತೆಯೇ ಮುಂದಿನ ದಿನಗಳಲ್ಲಿ ಸಮ್ಮಿಶ್ರ ಸರ್ಕಾರದ ಮೇಲಿನ ಜನರ ನಿರೀಕ್ಷೆಗಳನ್ನು ಈಡೇರಿಸುತ್ತೇವೆ. ಆ ಬಗ್ಗೆ ಸಂಪೂರ್ಣ ಭರವಸೆ ನೀಡುತ್ತೇನೆ ಎಂದು ತಿಳಿಸಿದರು.
ಮಧ್ಯಾಹ್ನ ರಾಷ್ಟ್ರಪತಿ ಭೇಟಿ: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿ ಬಳಿಕ ಮಧ್ಯಾಹ್ನ 1 ಗಂಟೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ರನ್ನ ಭೇಟಿ ಮಾಡಿ, ತಾವು ಇತ್ತೀಚಿಗೆ ಕ್ಯಾಬಿನೇಟ್ ನಲ್ಲಿ ಚರ್ಚಿಸಿದಂತೆ ರೈತರ ಸಾಲಮನ್ನಾ ವಿಚಾರದಲ್ಲಿ ಋಣಮುಕ್ತ ಅಧಿನಿಯಮದ ಸುಘ್ರೀವಾಜ್ಞೆಗೆಯ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಈ ಋಣಮುಕ್ತ ಅಧಿನಿಯಮ ಅಂಗೀಕಾರವಾಗಬೇಕಾದ್ರೆ ರಾಷ್ಟ್ರಪತಿ ಅಂಕಿತ ಬೇಕಿದೆ. ಈ ಹಿನ್ನೆಲೆಯಲ್ಲಿ ಸುಗ್ರೀವಾಜ್ಞೆ ತರುವುದರಿಂದ ಯಾವೆಲ್ಲ ರೀತಿಯಲ್ಲಿ ರಾಜ್ಯದ ರೈತರಿಗೆ ಸಹಕಾರಿಯಾಗಲಿದೆ ಅನ್ನೋ ಬಗ್ಗೆ ತಿಳಿಸಲಿದ್ದಾರೆ. ನಂತರ ತಾವು ತರಲು ನಿರ್ಧರಿಸೋ ಸುರ್ಗೀವಾಜ್ಞೆಯ ಬಗ್ಗೆ ಮನವಿ ಮಾಡಲಿದ್ದಾರೆ.
ರಾಜ್ಯದ ಕೊಡಗು ಜಿಲ್ಲೆಯಲ್ಲಿ ಇತ್ತೀಚಿಗೆ ಸುರಿದ ಮಳೆಯಿಂದಾದ ಹಾನಿಯ ಬಗ್ಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಬಳಿ ಚರ್ಚಿಸಲಿದ್ದಾರೆ. ಈಗಾಗಲೇ ಅಧಿಕಾರಿಗಳ ಜೊತೆ ಚರ್ಚೆ ನಡೆಸಿರೋ ಸಿಎಂ ಹಾನಿಯ ಬಗ್ಗೆ ಮಾಹಿತಿಯನ್ನ ಕಲೆಹಾಕಿದ್ದಾರೆ. ಸರ್ಕಾರ ಸಿದ್ದಪಡಿಸಿರೋ ಹಾನಿಯ ಮಾಹಿತಿಯನ್ನ ಸಿಎಂ ಗೃಹ ಸಚಿವರಿಗೆ ತಿಳಿಸಲಿದ್ದಾರೆ. ಈಗಾಗಲೇ ಸಿಎಂ ಹೇಳಿರುವಂತೆ ಮೂರು ಸಾವಿರ ಕೋಟಿ ಕೊಡಗಿನಲ್ಲಿ ಹಾನಿಯಾಗಿದ್ದು, ಕೇಂದ್ರದಿಂದ ಎನ್ ಡಿ ಆರ್ ಎಫ್ ನಿಧಿಯಿಂದ ಎರಡು ಸಾವಿರ ಕೋಟಿ ಅನುದಾನ ಕೇಳಲು ತೀರ್ಮಾನಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ