
ಜಕಾರ್ತಾ: ಇಂಡೋನೇಷ್ಯಾದ ಜಕಾರ್ತಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ನ ಪುರುಷರ ವಿಭಾಗದ 800 ಮೀಟರ್ ಓಟದಲ್ಲಿ ಮನ್ಜೀತ್ ಸಿಂಗ್ ಚಿನ್ನದ ಪದಕ ಗೆದ್ದಿದ್ದಾರೆ.
ಮನ್ಜೀತ್ ಸಿಂಗ್ 1 ನಿಮಿಷ 46.15 ಸೆಕೆಂಡ್ ಗಳಲ್ಲಿ ನಿಗದಿತ ಓಟವನ್ನು ಪೂರ್ಣಗೊಳಿಸಿದರೆ, ಜಿನ್ಸನ್ ಜಾನ್ಸನ್ 1 ನಿಮಿಷ 46.38 ಸೆಕೆಂಡ್ ಗಳಲ್ಲಿ ಗುರಿ ತಲುಪಿದ್ದಾರೆ.
ಈ ಎರಡು ಪದಕಗಳ ಮೂಲಕ ಭಾರತ ಈ ವರೆಗೂ ಗಳಿಸಿರುವ ಒಟ್ಟು ಪದಕಗಳ ಸಂಖ್ಯೆ 49 ಕ್ಕೆ ಏರಿಕೆಯಾಗಿದ್ದು ಪದಕಗಳ ಪಟ್ಟಿಯಲ್ಲಿ 8 ನೇ ಸ್ಥಾನದಲ್ಲಿದೆ.