ಮುಂಬೈ: ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ತಮ್ಮ ಬ್ಯಾಟ್ ನಿಂದ ಈ ಹಿಂದೆ ಕ್ರಿಕೆಟ್ ದಿಗ್ಗಜರು ಮಾಡಿದ್ದ ವಿಶ್ವದಾಖಲೆಗಳನ್ನು ಧೂಳಿಪಟ ಮಾಡುತ್ತಿದ್ದಾರೆ.
ಟ್ರೆಂಟ್ ಬ್ರಿಜ್ ಟೆಸ್ಟ್ ನಲ್ಲಿ ಅದ್ಭುತ ಬ್ಯಾಟಿಂಗ್ ಮೂಲಕ ಟೀಂ ಇಂಡಿಯಾ ಗೆಲುವಿಗೆ ಕಾರಣರಾಗಿದ್ದರು. ಇನ್ನು ಈ ಪಂದ್ಯದಲ್ಲಿ ರನ್ ಮಳೆ ಹರಿಸುವ ಮೂಲಕ ಕ್ರಿಕೆಟ್ ದಿಗ್ಗಜ ಡಾನ್ ಬ್ರಾಡ್ಮನ್ ಹಾಗೂ ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ರ ಅಪರೂಪದ ದಾಖಲೆಯನ್ನು ಮುರಿದಿದ್ದಾರೆ.
ವಿರಾಟ್ ಕೊಹ್ಲಿ ನಾಯಕನಾಗಿ ಪಂದ್ಯವೊಂದರಲ್ಲಿ 7ನೇ ಬಾರಿ 200ಕ್ಕೂ ಅಧಿಕ ರನ್ ಪೇರಿಸಿ ಪಂದ್ಯವನ್ನು ಗೆದ್ದ ಸಾಧನೆಯೊಂದಿಗೆ ಈ ದಿಗ್ಗಜ ಬ್ಯಾಟ್ಸ್ ಮನ್ ಗಳ ದಾಖಲೆಯನ್ನು ಹಿಂದಿಕ್ಕಿದ್ದಾರೆ.
ಬ್ರಾಡ್ಮನ್ ಮತ್ತು ರಿಕಿ ಪಾಂಟಿಂಗ್ ತಲಾ 6 ಬಾರಿ ನಾಯಕನಾಗಿ 200ಕ್ಕೂ ಅಧಿಕ ರನ್ ಪೇರಿಸಿದ ಪಂದ್ಯಗಳನ್ನು ಜಯಿಸಿದ್ದರು.