ಕುಕ್  ಔಟ್ ಮಾಡಿ ದಾಖಲೆ ಬರೆದ  ಇಶಾಂತ್  ಶರ್ಮಾ 

ನಾಟಿಂಗ್ಯಾಮ್​:  ಟೀಂ ಇಂಡಿಯಾದ ಘಾತಕ ವೇಗಿ ಇಶಾಂತ್  ಶರ್ಮಾ ನಿನ್ನೆ  ಇಂಗ್ಲೆಂಡ್ ತಂಡ  ಆರಂಭಿಕ ಬ್ಯಾಟ್ಸ್ ಮನ್ ಆಲೆಸ್ಟರ್ ಕುಕ್​ ಅವರನ್ನ  ಎರಡನೇ ಇನ್ನಿಂಗ್ಸ್​ ನಲ್ಲಿ ಔಟ್​ ಮಾಡುವ ಮೂಲಕ ಹೊಸ  ದಾಖಲೆ ಬರೆದಿದ್ದಾರೆ.  ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಕುಕ್​ ಅವರನ್ನ  ಒಟ್ಟು  12  ಬಾರಿ ಔಟ್​ ಮಾಡಿ  ದಕ್ಷಿಣ ಆಫ್ರಿಕಾ ವೇಗಿ ಮಾರ್ನೆ ಮಾರ್ಕೆಲ್ ಸರಿಸಮಾನವಾಗಿ ದಾಖಲೆ ಬರೆದಿದ್ದಾರೆ.

ಇಂಗ್ಲೆಂಡ್  ತಂಡದ ಅನುಭವಿ ಬ್ಯಾಟ್ಸ್ ಮನ್  ಆಲೆಸ್ಟರ್  ಕುಕ್  ಈ ಹಿಂದೆ ತಂಡಕ್ಕೆ  ಅತಿ ಹೆಚ್ಚು ರನ್  ತಂದುಕೊಟ್ಟ  ಬ್ಯಾಟ್ಸ್ ಮನ್​  ಆಗಿದ್ರು. ಆದ್ರೆ  ಟೀಂ ಇಂಡಿಯಾ ವಿರುದ್ದದ  ಟೆಸ್​  ಸರಣಿಯಲ್ಲಿ  ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದಾರೆ.  ಆಡಿದ ಮೂರು ಟೆಸ್ಟ್ ಪಂದ್ಯಗಳಲ್ಲಿ ಮೂರು ಬಾರಿ  ಇಂಶಾಂತ್​ ಶರ್ಮಾಗೆ ಔಟ್​ ಆಗಿದ್ದಾರೆ.

ಮೂರನೇ ಟೆಸ್ಟ್  ಪಂದ್ಯದಲ್ಲಿ   ಎರಡು ಇನ್ನಿಂಗ್ಸ್ ಗಳಲ್ಲೂ  ಕುಕ್​  ಇಶಾಂತ್​ಗೆ ವಿಕೆಟ್  ಒಪ್ಪಿಸಿದ್ದಾರೆ. ಇದರೊಂದಿಗೆ ಈ ಅನುಭವಿ  ಬ್ಯಾಟ್ಸ್ ್ಮನ್​  ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ  ಇಶಾಂತ್​ಗೆ  12 ಬಾರಿ  ಔಟಾದ ಅನಗತ್ಯ  ದಾಖಲೆಯನ್ನ ಕುಕ್​  ಬರೆದರು.  ಇದುವರೆಗೂ ಕುಕ್ 12 ಬಾರಿ ಇಶಾಂತ್​ಗೆ  ವಿಕೆಟ್​ ಒಪ್ಪಿಸಿದ್ದು  ಇದರಲ್ಲಿ 11 ಟೆಸ್ಟ್ ನಲ್ಲಿ   ಹಾಗೂ ಒಂದು ಬಾರಿ  ಏಕದಿನ  ಕ್ರಿಕೆಟ್​ನಲ್ಲಿ  ಔಟಾಗಿದ್ದಾರೆ. ದಕ್ಷಿಣ ಆಫ್ರಿಕಾ  ವೇಗಿ  ಮಾರ್ನೆ ಮಾರ್ಕೆಲ್  ಆಲೆಸ್ಟರ್  ಕುಕ್​ ಅವರನ್ನ  ಬರೀ ಟೆಸ್ಟ್  ನಲ್ಲಿ  12   ಬಾರಿ ಔಟ್ ಮಾಡಿದ್ದಾರೆ.  ಇದು ಬಿಟ್ಟರೇ  ಟೀಂ ಇಂಡಿಯಾದ ಕೇರಂ  ಸ್ಪೆಶಲಿಸ್ಟ್  ಆರ್​.ಅಶ್ವಿನ್  ಆಲೆಸ್ಟರ್  ಕುಕ್ ಅವರನ್ನ  9 ಬಾರಿ ಔಟ್​ ಮಾಡಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ