
ಹುಬ್ಬಳ್ಳಿ: ಕೂಡುಗು ಜಿಲ್ಲೆಯಲ್ಲಿ ಮಳೆಯಿಂದ ನರೆ ಹಾವಳಿಗೆ ತತ್ತರಿಸಿದ ಜನರಿಗೆ ನರೆವು ನೀಡುವ ನಿಟ್ಟಿನಲ್ಲಿ ಧಾರವಾಡದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಕೂಡುಗು ನೆರೆ ಸಂತ್ರಸ್ತರಿಗೆ ಅವಶ್ಯವಿರುವ ವಸ್ತುಗಳನ್ನು ಸಂಗ್ರಹಿಸಿ ಪೂರೈಕೆ ಮಾಡಿದರು. ಸುಮಾರು 3ಘಂಟೆಗಳ ಕಾಲ ನಗರದ ಪ್ರಮುಖ ಬೀದಿಗಳಲ್ಲಿ ಕಾಲ್ನಡಿಗೆ ಮೂಲಕ ಸಂಚರಿಸಿ ವಸ್ತುಗಳನ್ನು ಸಂಗ್ರಹಿಸಿ, ಧಾರವಾಡದ ಜಿಲ್ಲಾಧಿಕಾರಿಗಳ ಮೂಲಕ ಕೊಡಗು ಜಿಲ್ಲೆಗೆ ತಲುಪಿಸಲು ಮುಂದಾಗಿದ್ದಾರೆ. ಹಲವಾರು ಜನರು ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ಬಟ್ಟೆ, ಆಗಿರಬಹುದು ಊಟ ಮತ್ತು ಅನೇಕ ಇತರೆ ಸಾಮಾಗ್ರಿಗಳನ್ನು, ನೀಡುತ್ತಿದ್ದಾರೆ. ನಾನು ಸಹ ಅಲ್ಲಿನ ಜನರಿಗೆ ಸಹಾಯ ಮಾಡಲು ನನ್ನ ಕೈಲಾದ ಸಹಾಯ ಮಾಡ್ತಿದ್ದನೆ ಎಂದು ಮಾಜಿ ಸಚಿವ ವಿನಯ ಕುಲಕರ್ಣಿ ಹೇಳಿಕೊಂಡರು.