ಜನರು ಸಂಕಷ್ಟದಲ್ಲಿದ್ದಾರೆ; ವಾಸ್ತವ ಸ್ಥಿತಿ ಅರಿಯಲು ಪ್ರಧಾನಿ ರಾಜ್ಯಕ್ಕೆ ಆಗಮಿಸಲಿ: ಸಚಿವ ಎಚ್.ಡಿ.ರೇವಣ್ಣ

 

ಬೆಂಗಳೂರು, ಆ.21-ಅತಿವೃಷ್ಟಿ ಹಾಗೂ ಪ್ರವಾಹದ ವಿಚಾರದಲ್ಲಿ ಯಾರೂ ಕೂಡ ರಾಜಕೀಯ ಮಾಡಬಾರದು. ಜನರು ಸಂಕಷ್ಟದಲ್ಲಿದ್ದಾರೆ. ವಾಸ್ತವ ಸ್ಥಿತಿ ಅರಿಯಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ನಿತಿನ್‍ಗಡ್ಕರ್ ಅವರು ರಾಜ್ಯಕ್ಕೆ ಆಗಮಿಸಬೇಕೆಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಒತ್ತಾಯಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಡಗು ಹಾಗೂ ಮಂಗಳೂರು ಭಾಗದಲ್ಲಿ ಜನರು 25 ವರ್ಷಗಳಿಂದ ಮತ ಹಾಕಿದ್ದಾರೆ. ಆದರೂ ಯಾರೂ ಕೂಡ ತಿರುಗಿ ನೋಡಿಲ್ಲ. ಕೇಂದ್ರ ಸಚಿವರು ಯಾರು ಬಂದಿದ್ದಾರೆ ಎಂದರು.
ಸಂಕಷ್ಟದಲ್ಲಿರುವ ಜನರಿಗೆ ನೆರವು ಕಲ್ಪಿಸಲು ಪ್ರಧಾನಿ ಹಾಗೂ ಗಡ್ಕರಿ ಅವರು ಬಂದು ವೀಕ್ಷಣೆ ಮಾಡಬೇಕು. ಜನರಿಗೆ ನೆರವಾಗಬೇಕು ಎಂದ ಅವರು, ತಾವು ನಿರಾಶ್ರಿತ ಕೇಂದ್ರದಲ್ಲಿ ಸಂಕಷ್ಟದಲ್ಲಿದ್ದ ಜನರನ್ನು ಅಪಮಾನಿಸಿಲ್ಲ. ಅವರು ನಮ್ಮ ಪ್ರಭುಗಳು. ಜನತೆಗಾಗಿ ಏನು ಬೇಕಾದರೂ ಕೇಳಲು ಸಿದ್ದ. ನೆರೆ ಹಾವಳಿ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ. ಯಾರೂ ಕೂಡ ಮಾಡಬಾರದು. ಚುನಾವಣೆ ಸಂದರ್ಭದಲ್ಲಿ ರಾಜಕೀಯ ಮಾಡಿಕೊಳ್ಳಲಿ ಎಂದರು.
ನೆರೆ ಸಂತ್ರಸ್ತರಿಗೆ 250 ಕ್ವಿಂಟಾಲ್ ಅಕ್ಕಿ, 35 ಸಾವಿರ ಲೀಟರ್ ಹಾಲು ನೀಡಲಾಗಿದೆ. ಶನಿವಾರ ನಡೆದ ಘಟನೆಯನ್ನು ಸೋಮವಾರ ಪ್ರಸಾರ ಮಾಡಲಾಗಿದೆ. ಇದರ ಹಿಂದೆ ಯಾರಿದ್ದಾರೆ ಎಂಬುದು ಗೊತ್ತಾಗಬೇಕು. ತಾವು ತಪ್ಪು ಮಾಡಿದ್ದರೆ ಅಂದೇ ಬಿತ್ತರವಾಗಬೇಕಿತ್ತಲ್ಲವೇ ಎಂದು ಪ್ರಶ್ನಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ