ಲೈಫ್ ಜೊತೆ ಸೆಲ್ಫೀ ತೆಗೆದುಕೊಳ್ಳಲು ಒಂದಾದ ರಿಯಲ್ ಲೈಫ್ ಗೆಳೆಯರು!

ಬೆಂಗಳೂರು: ತನ್ನ ಎರಡನೆಯ ಚಲನಚಿತ್ರ ಗೆಳಯಾದಲ್ಲಿ ನಟ ಪ್ರಜ್ವಲ್ ದೇವರಾಜ್ ನಟಿಸುವ ಮುನ್ನ  ಮಹತ್ವದ ನಿರ್ಧಾರ ಒಂದಕ್ಕೆ ಬಂದಿದ್ದರು  ಹೊಸ ನರು ತಾವು ಒಬ್ಬರೇ ನಾಯಕರಿರುವ ಚಲನಚಿತ್ರವನ್ನಷ್ಟೇ ಒಪ್ಪಿಕೊಳ್ಳುವ ಬದಲು ಬಹುತಾರಾಂಗಣ, ಒಬ್ಬರಿಗಿಂತ ಹೆಚ್ಚು ನಾಯಕರಿರುವ ಚಿತ್ರಕ್ಕೆ ಸಹಿ ಹಾಕುವ ಹೊಸ ಸಂಪ್ರದಾಯಕ್ಕೆ ಇವರು ನಾಂದಿ ಹಾಡಿದ್ದರು.
ತರುಣ್ ಸುಧೀರ್ ಅವರ ಚೌಕ ಹಾಗೂ ದಿನಕರ್ ತೂಗುದೀಪ್ ನಿರ್ದೇಶನದ ಲೈಫ್ ಜೊತೆ ಒಂದ್ ಸೆಲ್ಫೀ ನಲ್ಲಿರುವಂತೆ ಗೆಳೆಯಾ ದಲ್ಲಿಸಹ ಒಬ್ಬರಿಗಿಂತ ಹೆಚ್ಚು ನಾಯಕರಿದ್ದಾರೆ.”ನನ್ನ ಮೊದಲ ಚಿತ್ರ, ಸಿಕ್ಸರ್ ಹಿಟ್ ಆಗಿದ್ದರೂ ಕೂಡ, ನನ್ನ ಎರಡನೇ ಚಿತ್ರ ಗೆಳಯಾಗಾಗಿ ನಾನು ಬಹು ನಾಯಕರಿರುವ ಚಿತ್ರಕ್ಕೆ ಸಹಿ ಹಾಕಿದ್ದೇನೆ. ಆ ಸಮಯದಲ್ಲಿ, ನನ್ನ ಅಸಾಮಾನ್ಯ ನಿರ್ಧಾರವನ್ನು ಸಹ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಮತ್ತು ಗೆಳೆಯಾ ಚಿತ್ರದ ಪಾತ್ರದ ಮೂಲಕ ನನನ್ನನ್ನು ಗುರುತಿಸುತ್ತಾರೆ.” ಪ್ರಜ್ವಲ್ ಹೇಳುತ್ತಾರೆ.
“ನಾನು ಲೈಫ್ ಜೊತೆ ಒಂದ್ ಸೆಲ್ಫೀ ಚಿತ್ರ ಆಯ್ಕೆ ಮಾಡಿಕೊಳ್ಳುವುದಕ್ಕೆ ಕಾರಣ ಅದೊಂದು ಮಾಮೂಲಿ ಚಿತ್ರಕಥೆಯಾಗಿಲ್ಲ.ನಾವು ಚೌಕದ ಬಗೆಗೆ ಮಾತನಾಡುತ್ತಿದ್ದಾಗಲೇ ದಿನಕರ್ ನನಗೆ ಈ ಚಿತ್ರದ ಕುರಿತು ಹೇಳಿದ್ದರುಈ ಕಥೆ ನನ್ನನ್ನು ಆಕರ್ಷಿಸಿತ್ತು.”
ಸ್ನೇಹ, ಕೌಟುಂಬಿಕ ಭಾವನೆ, ಮತ್ತು ಆಕ್ಷನ್ ಇವು ಲೈಫ್ ಜೊತೆ…. ಚಿತ್ರದಲ್ಲಿದೆ.”ಲೈಫ್ ಜೊತೆ…. ಚಿತ್ರದಲ್ಲಿ ನಟಿಸುವುದಕ್ಕೆ ನನಗೆ ಭಾವಾತಿರೇಕದ ಅಗತ್ಯವಿರಲಿಲ್ಲ. ಚಿತ್ರ ವೀಕ್ಷಿಸುವ ಪ್ರತಿ ಪ್ರೇಕ್ಷಕರೂ ಇದನ್ನು ಗಮನಿಸಲು ಸಾಧ್ಯ. ಕೆಲವರೊಡನೆ ಚಿತ್ರದ ಸೆನ್ಸಾರ್ ಪ್ರತಿ ನೋಡಿದ್ದ ಸಮಯ ನಾನಿದನ್ನು ಗಮನಿಸಿದೆ. ಕೆಲವರು ಕಥೆಯೊಂದಿಗೆ ತಾವೂ ಸಂಪರ್ಕ ಸಾಧಿಸಲು ಸಾಧ್ಯ ಎಂದು ಒಪ್ಪಿಕೊಂಡಿದ್ದಾರೆ”
ಲೈಫ್ ಜೊತೆ…. ಚಿತ್ರದಲ್ಲಿ ಪ್ರಜ್ವಲ್ ಓರ್ವ ವ್ಯಾಪಾರಿಯ ಮಗನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.”ಹಣವು ಜೀವನದ ಸಮಸ್ಯೆಗಳನ್ನು ಕಡಿಮೆಗೊಳಿಸುವುದಿಲ್ಲ ಮತ್ತು ದುಃಖವನ್ನುಂಟುಮಾಡುತ್ತದೆ” ಎಂದು ಅವರು ಹೇಳುತ್ತಾರೆ.
ಪ್ರೇಮ್ ಮತ್ತು ಹರಿಪ್ರರಿಯಾಸಹ ಚಿತ್ರದಲ್ಲಿದ್ದು ಪ್ರಜ್ವಲ್ ನಟನೆಗೆ ಈ ಇಬ್ಬರೂ ಸಹ ಸಹಕಾರ ನಿಡುತ್ತಾರೆ.”ನಟರಿಗೆ ತೃಪ್ತಿ ಸಿಕ್ಕುವುದು ಅಪರೂಪ, ನನಗೆ ಅಪಾರ ತೃಪ್ತಿ ಕೊಟ್ಟ ಚಿತ್ರವೆಂದರೆ ಅದು ಲೈಫ್ ಜೊತೆ…ಮುರಳಿ ಮೀಟ್ಸ್ ಮೀರಾ, ಮೆರವಣಿಗೆ, ಭದ್ರ, ಚೌಕಗಳಿಗೆ ಹೋಲಿಸಿದಾಗ ನನಗೆ ಈ ಚಿತ್ರ ವಿಭಿನ್ನವಾಗಿ ಕಾಣಿಸುತ್ತದೆ.
ಪ್ರಜ್ವಲ್ ಹಾಗೂ ದಿನಕರ್ ಅಹಲವು ವರ್ಷಗಳಿಂದ ಪರಿಚಯಸ್ತರು.ಆದರೆ ಚಿತ್ರವೊಂದರಲ್ಲಿ ಇದೇ ಮೊದಲ ಬಾರಿಗೆ ಒಟ್ಟಾಗಿದ್ದಾರೆ.ದರ್ಶನ್ (ದಿನಕರನ ಸಹೋದರ) ಮತ್ತು ನಾನು ಸಹೋದರರಂತೆ. ನಾನು ದರ್ಶನ್ ನ ಕಿರಿಯ ತಮ್ಮ ಎಂದು ದಿನಕರ್ ಯಾವಾಗಲೂ ಹೇಳುತ್ತಾರೆ.ನಾವು ಭೇಟಿಯಾದ ಪ್ರತಿಯೊಂದು ಸಮಯವೂ ಒಟ್ಟಿಗೆ ಕೆಲಸ ಮಾಡುವ  ಕುರಿತು ಚರ್ಚಿಸುತ್ತಿದ್ದೆವು. ಅಂತಿಮವಾಗಿ ಇದು ಲೈಫ್ ಜೊತೆ… ಚಿತ್ರದಲ್ಲಿ ನಿಜವಾಗಿದೆ.
ದಿನಕರ್ ನಿರ್ದೇಶಕರಾಗಿ ತೀವ್ರವಾದ ಒಳಗಣ್ಣು ಹೊಂದಿದ್ದಾರೆ. ಚಿತ್ರದ ಪ್ರತಿ ಫ್ರೇಮ್ ಬಗೆಗೆನಿರ್ದಿಷ್ಟ ಕಲ್ಪನೆ ಹೊಂದಿದ್ದಾರೆ. ಅವರು ಹಿನ್ನೆಲೆ ಅಥವಾ ಸೆಟ್ ನಲ್ಲಿ ಎಂದಿಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ.\
ಪ್ರೇಮ್ ಹಿನ್ನೆಲೆ ಗಾಯಕನಾಗಬೇಕೆಂದು ಬಯಸಿದ್ದರು.ಆದರೆ ಅಂತಿಮವಾಗಿ ಅವರು ನಟನೆಯನ್ನೇ ಆಯ್ದುಕೊಂಡಿದ್ದಾರೆ. ಲೈಫ್ ಜೊತೆ…. ಚಿತ್ರದಲ್ಲಿ ಪ್ರೇಮ್ ಪ್ರಜ್ವಲ್ ಹಾಗೂ ಹರಿಪ್ರಿಯಾ ಜತೆ ಪರದೆ ಹಂಚಿಕೊಳ್ಳುತ್ತಿದ್ದಾರೆ.
 “ಇಂದಿನ ಸನ್ನಿವೇಶದಲ್ಲಿ, ವಿಷಯವು ಆದ್ಯತೆ ಪಡೆಯುತ್ತದೆ. ನಾನು ಯಾವುದೇ ಚಿತ್ರಕ್ಕೆ ಸಹಿ ಹಾಕುವ ಮುನ್ನ ಕಥೆಯ ಕುರಿತು ಮತ್ತು ಪಾತ್ರವನ್ನು ನೋಡುತ್ತೇನೆ.ಚೌಕ ಚಿತ್ರ ಇದಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ.ತ್ತು ಇದೀಗ ನಾನು ಲೈಫ್ ಜೊತೆ….ಚಿತ್ರದ ಕುರಿತಂತೆ ಇದೇ ವಿಶ್ವಾಸದಲ್ಲಿದ್ದೇನೆ.ಪ್ರೇಮ್ ಹೇಳಿದ್ದಾರೆ.
ವಾಸ್ತವವಾಗಿ, ಪಾತ್ರವು ನನ್ನ ಸ್ವಂತ ಜೀವನವನ್ನು ಚೆನ್ನಾಗಿ ಹೊಂದುತ್ತದೆ ಎಂದು ಅವರು ತಿಳಿಸಿದರು.”ದಿನಕರ್ ಒಡನೆ ಈ ಹಿಂದೆ ಸಹ ಕೆಲಸ ಮಾಡಿರುವ ಕಾರಣ ಮತ್ತು ಉದ್ಯಮಕ್ಕೆ ಬರುವ ಮುಂಚಿನಿಂದಲೂ ನನಗೆ ಅವರ ಪರಿಚಯವಿದ್ದ ಕಾರಣಗಳಿಂದ  ಅವರು ನನ್ನಿಂದ ಏನನ್ನು ನಿರೀಕ್ಷಿಸುತ್ತಾರೆಂದು ನನಗೆ ತಿಳಿದಿದೆ. ಜೊತೆ ಜೊತೆಯಲಿ ಚಿತ್ರ ಬಿಡುಗಡೆಯಾಗಿ  12 ವರ್ಷಗಳ ನಂತರವೂ, ಚಿತ್ರನಿರ್ಮಾಣದ ಬಗೆಗಿನ ಅವರ ಪ್ರೀತಿ ಇನ್ನೂ ಹಾಗೆಯೇ ಇದೆ.ಎಂದು ಅವರು ಹೇಳುತ್ತಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ