ಕೊಡಗು: ಮಳೆಯ ರೌದ್ರವತಾರಕ್ಕೆ ಕೊಡಗು ಜಿಲ್ಲೆ ಅಕ್ಷರಶ : ನಲುಗಿ ಹೋಗಿದ್ದು, ಮನೆ ಮಠ ಕಳೆದುಕೊಂಡು ಸಂತ್ರಸ್ತರಾಗಿರುವವರಿಗೆ ನೆರವು ನೀಡುವಂತೆ ಸ್ಯಾಂಡಲ್ ವುಡ್ ನಟರು ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಮಳೆಯಿಂದ ಹಾನಿಯಾದ ಮಡಿಕೇರಿ ಮತ್ತು ಕರಾವಳಿಯ ನೆರವಿಗೆ ದೊಡ್ಮನೆ ಸದಾ ಸಿದ್ಧ ಎಂದು ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಹೇಳಿದ್ದಾರೆ.
ಮತ್ತೊಂದೆಡೆ ಸಂತ್ರಸ್ತರಿಗೆ ಅಗತ್ಯ ನೆರವು ನೀಡುವಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕಿಚ್ಚ ಸುದೀಪ್ ಅವರು ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಪ್ರವಾಹ ಪೀಡಿತ ಜನರಿಗೆ ಏನು ಒಳ್ಳೇಯದನ್ನು ಮಾಡಬಹುದೋ ಅದನ್ನು ಮಾಡಿ, ಇದು ನೀವು ನನ್ನಗೆ ನೀವು ಕೊಡುವ ದೊಡ್ಡ ಗಿಪ್ಟ್ ಎಂದು ಎಂದು ಸುದೀಪ್ ಟ್ವಿಟರ್ ನಲ್ಲಿ ಮನವಿ ಮಾಡಿಕೊಂಡಿದ್ದಾರೆ. ಸರ್ಕಾರ ಕೂಡಾ ಸಂತ್ರಸ್ತರ ನೆರವಿಗೆ ಸ್ಪಂದಿಸುವಂತೆ ಅವರು ಮನವಿ ಮಾಡಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡಾ ಮಳೆ ಪೀಡಿತ ಕೊಡಗು ಜಿಲ್ಲೆಯ ಸಂತ್ರಸ್ತರಿಗೆ ಅಗತ್ಯ ನೆರವು ನೀಡುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
Seen By: 44 ಕೊಡಗು: ಇವರು ಮಡಿಕೇರಿ ಜೋಡುಪಾಲದಿಂದ ಮೇಲೆ ಇರುವ ಸೆಕೆಂಡ್ ಮುಣ್ಣಂಗೇರಿ ಗ್ರಾಮದ ಕೆ.ಗಿರಿಜ.ಇಂದು 18/08/2018ರಂದು ಸಂಪಾಜೆಯ ಗಂಜಿ ಕೇಂದ್ರದಲ್ಲಿ ಇದ್ದಾರೆ.ಇವರ ಮಗಳ ಹೆಸರು [more]
Seen By: 147 ಮಡಿಕೇರಿ:ಆ-17: ಕೊಡಗು ಜಿಲ್ಲೆಯಾದ್ಯಂತ ಮಳೆ ಆರ್ಭಟಕ್ಕೆ ಮುಂದುವರೆದಿದ್ದು, ಗುಡ್ಡ ಕುಸಿತ ಉಂಟಾಗುತ್ತಿರುವ ಹಿನ್ನಲೆಯಲ್ಲಿ ಜನರು ಜೀವ ಕೈಲಿಹಿಡಿದು ಬದುಕುವಂತಾಗಿದೆ. ನಿರಂತರ ಮಳೆಗೆ ಜಿಲ್ಲೆಯಾದ್ಯಂತ [more]