ಮಳೆಗಾಲದಲ್ಲಿ ಮಕ್ಕಳಿಗೆ ರೋಗ ನಿರೋದಕ ಶಕ್ತಿ ಹೆಚ್ಚಿಸಲು ನೀಡಬೇಕಾದ ಔಷದ ಮತ್ತು ಆಹಾರ

ಸಾಮಾನ್ಯವಾಗಿ ಮಕ್ಕಳಿಗೆ ಮಳೆಗಾಲದಲ್ಲಿ ಶೀತ, ನೆಗಡಿ, ಕೆಮ್ಮು, ಕಫ, ತಲೆನೋವು ಇತ್ಯಾದಿ ಕಾಯಿಲಿಗಳು ಮೇಲಿಂದಮೇಲೆ ಕಾಣಿಸಿಕೂಳ್ಳುತ್ತದೆ. ಇದಕ್ಕೆ ಕಾರಣವೆಂದರೆ

  • ಹವಾಮಾನ ಮತ್ತು ತಾಪಮಾನದಲ್ಲಿನ ಬದಲಾವಣೆ.
  • ಮಳೆಗಾಲದಲ್ಲಿ ಆಗಷ್ಟೆ ಶೇಖರಣೆಯಾಗಿರುವ ಕಲುಷಿತವಾದ ನೀರು.

ಮಳೆಗಾಲದಲ್ಲಿ ಕಡಿಮೆ ಬಿಸಿಲು ಇರುವ ಕಾರಣದಿಂದಾಗಿ ಸೂಂಕು ಉಂಟುಮಾಡುವ ರೋಗಾಣುಗಳು ಹೆಚ್ಚು ಹರಡುತ್ತದೆ. ಮಕ್ಕಳಲ್ಲಿ ಮಳೆಗಾಲದಲ್ಲಿ ಸಹಜವಾಗಿ ಕುಂಠಿತವಾಗಿರುವ ರೋಗನಿರೋದಕ ಶಕ್ತಿ.

 

ಮಕ್ಕಳಿಗೆ ಮಳೆಗಾಲದಲ್ಲಿ ನೀಡಬೇಕಾದ ಆಹಾರ ಮತ್ತು ಮನೆಮದ್ದು-

ಕೆಲವೂಂದು ನಿತ್ಯಬಳಿಕೆಯ ಆಹಾರ ಪದಾರ್ಥವನ್ನು, ಮನೆ ಮದ್ದನ್ನು ಬಳಸುವುದರಿಂದ ಮಕ್ಕಳ್ಳಲ್ಲಿ ಮಳೆಗಾಲದಲ್ಲಿ ಊಂಟಾಗುವ ಹಲವು ಸೊಂಕುಗಳನ್ನು ತಡೆಗಟ್ಟಬಹುದು ಹಾಗು ಅವರ ಜೀರ್ಣಶಕ್ತಿ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಸಬಹುದು. ಮಕ್ಕಳಿಗೆ ಮಳೆಗಾಲದಲ್ಲಿ ನೀಡಬಹುದಾದ ಆಹಾರ ಹಾಗು ಮನೆ ಮದ್ದಿನ ವಿವರ ಈ ಕೆಳಗಿನಂತಿದೆ-

 

ದಾಳಿಂಬೆ ಹಣ್ಣು- ದಾಳಿಂಬೆ ಹಣ್ಣಿನಲ್ಲಿ, ದೇಹದಲ್ಲಿನ ಪಿತ್ತವನ್ನು ಹೆಚ್ಚಿಸುವ ಗುಣವಿರುತ್ತದೆ. ದೇಹದಲ್ಲಿ ಪಿತ್ತದ ಅಂಶ ಜಾಸ್ತಿಮಾಡಲು ಹಾಗು ಜೀರ್ಣಶಕ್ತಿ ಹೆಚ್ಚಿಸಿ, ರಕ್ತವೃದ್ಧಿ ಮಾಡುವ ಕಾರಣದಿಂದ ಮಕ್ಕಳಿಗೆ ದಾಳಿಂಬಿ ರಸವನ್ನು ಬೀಜ ಶೋದಿಸಿ ಕೂಡಬೇಕು.

ಪಪಾಯಿ ಹಣ್ಣು- ಮಕ್ಕಳಿಗೆ ಜೀರ್ಣಕ್ರಿಯೆ ಹೆಚ್ಚಾಗಿಸಿ ದೇಹದ ಕಫವನ್ನು ಕಡಿಮೆಮಾಡಲು 50-75 ಗ್ರಾಂ ಪಪಾಯ ಹಣ್ಣನ್ನು ಊಟದ ನಂತರ ಸೇವಿಸಲು ಕೂಡುವುದು ಉತ್ತಮ.

ಹಾಲು- ಮಕ್ಕಳ ಬೆಳವಣಿಗೆಗೆ ಕ್ಯಾಲ್ಸಿಯಂ ಅಂಶ ಬಹು ಮುಖ್ಯವಾದುದು. ಹಾಲಿನಲ್ಲಿ ಕ್ಯಾಲ್ಸಿಯಮ್ ಅಂಶ ಹೆಚ್ಚಿರುವ ಕಾರಣದಿಂದ ಮಕ್ಕಳಿಗೆ ಬೆಳಗೆ ಹಾಗು ಸಂಜೆ ಎರಡು ಬಾರಿ ಸುಮಾರು 250 ಎಮ್.ಎಲ್ ನಷ್ಟು ಹಾಲು ಸೇವಿಸಲು ಕೂಡುವುದು ತು0ಬ ಉಪಯುಕ್ತ. ಆದರೆ ಹಾಲಿನ ಸೇವನೆಯಿಂದ ಮಕ್ಕಳಲ್ಲಿ ಕಫ ವೃದ್ಧಿಸಿ ಶೀತ, ನೆಗಡಿ, ಕೆಮ್ಮಿನ ಭಾದೆ ಹೆಚ್ಚಾಗಿ ಕಾಣಿಸಿಕೂಳ್ಳುವ ಸಂಭವವಿರುತ್ತದೆ. ಇದರ ನಿವಾರಣೆಗೆ ಕಾಯಿಸಿದ ಹಾಲಿಗೆ, ಒಂದು ಚಿಟಕಿ ಏಲಕ್ಕಿ ಪುಡಿಬೆರಸಿ ನೀಡುವುದರಿಂದ ಶಿತಬಾದೆ ಮಕ್ಕಳಿಗೆ ಕಾಣಿಸಿಕೂಳ್ಳದಂತೆ ತಡೆಗಟ್ಟಬಹುದು.

 

ಮನೆಮದ್ದು:

ಮಕ್ಕಳಲ್ಲಿ ನೆಗಡಿ, ಕೆಮ್ಮು ಉಂಟಾದಲ್ಲಿ ಕಫ ಕಟ್ಟಿದಲ್ಲಿ, 4-5 ಎಸಳು ಬೆಳ್ಳುಳ್ಳಿಯನ್ನು ಜಜ್ಜಿ, ಅದರ ರಸ ತೆಗೆದು, ಆ ರಸಕ್ಕೆ 1/2 ಚಿಟಕೆ ಕಾಳುಮೆಣಸಿನ ಪುಡಿ ಬೆರಸಿ ದಿನದಲ್ಲಿ 2 ಭಾರಿ ಕುಡಿಸಬೇಕು ಇದರಿಂದ ಶೀತಬಾದೆ ನಿವಾರಣೆಯಾಗಿ, ಕಫ ಕಡಿಮೆಯಾಗುತ್ತದೆ.

ಅರ್ಧ ಚಮಚ ಕರಿಮೆಣಸಿನ ಪುಡಿಗೆ, ಒಂದು ಚಿಮಚ ಜೇನುತುಪ್ಪವನ್ನು ಬೆರಸಿ, ಬೆಳಗೆ ಮಕ್ಕಳಿಗೆ ಖಾಲಿಹೂಟ್ಟೆಯಲ್ಲಿ ನೀಡುವುದರಿಂದ ಜ್ವರದ ಬಾದೆ ತಪ್ಪುತ್ತದೆ ಹಾಗು ಅಜೀರ್ಣ ಉಂಟಾಗದ ಹಾಗೆ ಕಾಪಾಡುತ್ತದೆ.

ಮಕ್ಕಳಿಗೆ ಮೇಲಿಂದ ಮೇಲೆ ಜ್ವರ ಬರುತ್ತಿದ್ದಲ್ಲಿ 10-12 ಅಡುಸೋಗೆ ಗಿಡದ ಎಲೆಗಳನ್ನು, 1/2 ಲೀಟರ್ ನೀರಿನಲ್ಲಿ ಕುಡಿಸಿ, ನಂತರ ಅದನ್ನು ಶೋದಿಸಿ ಅದಕ್ಕೆ 1-2 ಚಮಚ ಬೆಲ್ಲವನ್ನು ಹಾಕಿ ಕರಗಿಸಿ, ಅದನ್ನು 15 ಎಮ್.ಎಲ್ ನಷ್ಟು 1 ದಿನದಲ್ಲಿ 3-4 ಭಾರಿ ಕುಡಿಸಿದಲ್ಲಿ ಜ್ವರ ಕಡಿಮೆಯಾಗುತ್ತದೆ.

ಮಕ್ಕಳಿಗೆ ಜ್ವರ, ನೆಗಡಿ, ಕೆಮ್ಮು ಕಫ ಕಾಣಿಸಿಕೂಂಡಿದಲ್ಲಿ, ನೆಲಬೇವಿನ ಎಲೆಗಳನ್ನು ಸಂಗ್ರಹಿಸಿ, ಅದರ ಎಲೆಯನ್ನು ಜಜ್ಜಿ, ಅದರಿಂದ ಸುಮಾರು 10 ಎಮ್.ಎಲ್ ರಸವನ್ನು ತಗೆದು, ಅದಕ್ಕೆ 1 ಚಮಚ ಜೇನುತುಪ್ಪ ಬೆರಸಿ ಮಕ್ಕಳಿಗೆ ಖಾಲಿ ಹೂಟ್ಟೆಯಲ್ಲಿ ಸೇವಿಸಲು ಕೂಡಬೇಕು.

 

ಲೇಖಕರು
ಡಾ|| ಸಿಂಧು ಪ್ರಶಾಂತ್
ಬಿ.ಎ.ಎಮ್.ಎಸ್, ಎಮ್.ಡಿ(ಆಲ್ಟರ್ ನೇಟಿವ್ ಮೆಡಿಸನ್), ಎಮ್.ಎಸ್ಸಿ(ಯೋಗ)
ದೂರವಾಣಿ- 9743857575

ಡಾ|| ಸಿಂಧು ಅವರು ಗರ್ಭಿಣಿಯರೆಗೆ ಯೋಗದ ಮಹತ್ವ ಹಾಗು ಹೇಗೆ ಯೋಗವನ್ನು ಮಾಡಬೇಕೆಂದು ತರಬೇತಿಯನ್ನು ಸ್ಕೈಪ್ ಮುಕಾ0ತರ ಹಲವಾರು ಸ್ತ್ರೀಯರಿಗೆ ಹೇಳಿಕೂಡುತ್ತಿದ್ದಾರೆ. ಅತಿ ಶೀಘ್ರದಲ್ಲಿ ಗರ್ಭಿಣಿಯರಿಗಾಗಿ ಯೋಗ ಹಾಗು ಪ್ರಾಣಾಯಾಮವನ್ನು ಕುರಿತು ಪುಸ್ತಕವನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಡಾ|| ಸಿಂಧು ಪ್ರಶಾಂತ್ ರವರು ಬಹುಮುಖ ಪ್ರತಿಭಾವಂತರು.”ನೃತ್ಯ ಪ್ರಾರ್ಥನ ” ಎಂಬ ಸಂಸ್ಥೆಯ ಸ್ಥಾಪಕಿ ಹಾಗು ಶಕ್ಷಕಿಯಾಗಿ ಹಲವಾರು ಶಿಶ್ಯವೃಂದವನ್ನು ತಯಾರಿಸುತಿರುವ ಹೇಗಳಿಕೇ ಇವರದು.

 

 

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ