ವೈಜ್ಞಾನಿಕ ಮನೋಭಾವಕ್ಕಾಗಿ ನಡಿಗೆ

Varta Mitra News

 

ಬೆಂಗಳೂರು,ಆ.17- ಮೂಢನಂಬಿಕೆ ಮತ್ತು ಅವೈಜ್ಞಾನಿಕತೆ ವಿರುದ್ದ ವಿವಿಧ ಪ್ರಗತಿಪರ ಸಂಘಟನೆಗಳು ಒಗ್ಗೂಡಿ ವೈಜ್ಞಾನಿಕ ಮನೋಭಾವಕ್ಕಾಗಿ ನಡಿಗೆ ಎಂಬ ಅಭಿಯಾನವನ್ನು ಸಂಘಟಿಸಲಾಗುತ್ತಿದೆ ಎಂದು ಸಂವಿಧಾನ ತಜ್ಞ ಪೆÇ್ರ. ರವಿವರ್ಮಕುಮಾರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು 2.30ಕ್ಕೆ ಟೌನ್‍ಹಾಲ್‍ನ ಮುಂದೆ ಸೇರಿ ಸಭೆ ನಡೆಸಿ ನಂತರ ಕಾಪೆರ್Çೀರೇಷನ್ ಕೆಂಪೇಗೌಡ ರಸ್ತೆ, ಮೈಸೂರು ಬ್ಯಾಂಕ್ ಮಾರ್ಗವಾಗಿ ಸರ್ಕಾರಿ ಕಲಾ ಕಾಲೇಜಿನವರೆಗೆ ನಡೆಸಿ ನಂತರ ಸರ್ಕಾರಿ ಕಲಾ ಕಾಲೇಜಿನ ಬಾಪೂಜಿ ಸಭಾಂಗಣದಲ್ಲಿ ಬಹಿರಂಗ ಸಭೆ ನಡೆಸಲಾಗುವುದು ಎಂದು ತಿಳಿಸಿದರು.

ವೈಜ್ಞಾನಿಕ ಮನೋಭಾವ ಮತ್ತು ವೈಚಾರಿಕತೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ನಾಗರಿಕರ ಸಂವಿಧಾನ ಬದ್ಧವಾದ ಕರ್ತವ್ಯವಾಗಿದೆ. ನೀತಿ ನಿರೂಪಕರು, ಆಡಳಿತ ನಡೆಸುವವರು ಹಾಗೂ ಸಂವಿಧಾನಿಕವಾಗಿ ಜವಾಬ್ದಾರಿಯುತ ಹುದ್ದೆಗಳಲ್ಲಿರುವವರೇ ಮೂಢನಂಬಿಕೆ ಮತ್ತು ಅವೈಜ್ಞಾನಿಕ ವಿಚಾರಗಳನ್ನು ಹರಡುತ್ತಿದ್ದಾರೆ ಎಂದು ವಿಷಾದಿಸಿದರು.

ಇತ್ತೀಚಿನ ದಿನಗಳಲ್ಲಿ ಹಲವಾರು ವಿಚಾರವಾದಿಗಳು , ಬುದ್ದಿ ಜೀವಿಗಳು ಮತ್ತು ಬರಹಗಾರರ ಮೇಲೆ ಮೌಢ್ಯ ಶಕ್ತಿಗಳಿಂದ ದಾಳಿಗಳು ನಡೆಯುತ್ತಿವೆ ಎಂದರು.
ಡಾರ್ವಿನ್‍ನ ವೈಜ್ಞಾನಿಕ ವಿಕಾಸ ವಾದ ಸುಳ್ಳು. ಅದನ್ನು ಶಾಲಾಕಾಲೇಜುಗಳ ಪಠ್ಯದಿಂದ ತೆಗೆದು ಹಾಕಬೇಕೆಂದು ಪ್ರತಿಪಾದಿಸುತ್ತಿರುವುದು ವಿಜ್ಞಾನ ಮತ್ತು ತರಗತಿಯ ಭೋಧನೆಯ ಮೇಲೆ ನಡೆಸಲಾಗುತ್ತಿರುವ ದಾಳಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಡಾ.ನರೇಂದ್ರ ದಾಬೋಲ್ಕರ್ ಅವರನ್ನು ಹತ್ಯೆಗೈದ ದಿನವನ್ನು ಆ.20ರಂದು ರಾಷ್ಟ್ರೀಯ ವೈಜ್ಞಾನಿಕ ಮನೋಭಾವ ದಿನ ಎಂದು ಅಸಂಖ್ಯಾತ ಸಂಘಟನೆಗಳು ಕರೆ ನೀಡಿವೆ. ಈ ನಿಟ್ಟಿನಲ್ಲಿ ಅಂದು ವೈಜ್ಞಾನಿಕ ಮನೋಭಾವಕ್ಕಾಗಿ ನಡಿಗೆ ಎಂಬ ಅಭಿಯಾನ ನಡೆಸಲಾಗುತ್ತದೆ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ