ರಾಜ್ಯದಲ್ಲಿ ಸ್ನೂಕರ್ ಮತ್ತು ಬಿಲಿಯಡ್ರ್ಸ್ ಕ್ರೀಡೆಯ ಅಭಿವೃದ್ಧಿಗಾಗಿ ಕೆಎಸ್‍ಬಿಎ ಚುನಾವಣೆಯಲ್ಲಿ ಸ್ಪರ್ಧೆ: ಪಂಕಜ್ ಅಡ್ವಾಣಿ

 

ಬೆಂಗಳೂರು,ಆ.17- ರಾಜ್ಯದಲ್ಲಿ ಸ್ನೂಕರ್ ಮತ್ತು ಬಿಲಿಯಡ್ರ್ಸ್ ಕ್ರೀಡೆಯ ಅಭಿವೃದ್ಧಿಗಾಗಿ ಕರ್ನಾಟಕ ರಾಜ್ಯ ಬಿಲಿಯಡ್ರ್ಸ್ ಸಂಸ್ಥೆಯ (ಕೆಎಸ್‍ಬಿಎ) ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದೇವೆ ಎಂದು ವಿಶ್ವ ಚಾಂಪಿಯನ್ ಪಂಕಜ್ ಅಡ್ವಾಣಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು 19 ಬಾರಿ ವಿಶ್ವ ಚಾಂಪಿಯನ್ ಆಗುವುದಕ್ಕೆ ಕೆಎಸ್‍ಬಿಎಯ ಸಹಕಾರ ಮತ್ತು ಪೆÇ್ರೀ ಕಾರಣ. ಇದರಿಂದಾಗಿಯೇ ಈ ಕ್ರೀಡೆಯಲ್ಲಿ ಎತ್ತರದ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಹೇಳಿದರು.

ಇತ್ತೀಚೆಗೆ ಸಂಸ್ಥೆಯ ಆಡಳಿತ ಹದಗೆಟ್ಟಿದೆ.ಇದನ್ನು ಸರಿಪಡಿಸುವ ಕೆಲಸವಾಗಬೇಕು. ಜೊತೆಗೆ ಯುವ ಆಟಗಾರರು ಮುಂದೆ ಬರುವಂತೆ ಮಾಡಿ ಅವರಿಗೆ ಪೆÇ್ರೀ ನೀಡಿ ಅವರಲ್ಲಿ ಸ್ನೂಕರ್ ಮತ್ತು ಬಿಲಿಯಡ್ರ್ಸ್ ಬಗ್ಗೆ ಆಸಕ್ತಿ ಬೆಳೆಯುವಂತೆ ಮಾಡಬೇಕು ಎಂದು ತಿಳಿಸಿದರು.
ರಾಜ್ಯದಲ್ಲಿ ಕೆಎಸ್‍ಬಿಎಯ ಆಡಳಿತದಲ್ಲಿ ಸುಧಾರಣೆ ತರುವ ಉದ್ದೇಶದಿಂದ ನಾನು ಸ್ಪರ್ಧೆ ಬಯಸಿದ್ದೇನೆ. ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ನನ್ನ ಗುರು ಅರವಿಂದ್ ಸವೂರ್, ಉಪಾಧ್ಯಕ್ಷ ಸ್ಥಾನಕ್ಕೆ ಜಯರಾಜ್ ಅವರು ಸ್ಪರ್ಧಿಸುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು.
ಇವರಿಬ್ಬರಿಗೂ ಸ್ನೂಕರ್ ಬಿಲಿಯಡ್ರ್ಸ್ ಕ್ರೀಡೆ ಬಗ್ಗೆ ಅಪಾರ ಒಲವಿದೆ ಹಾಗೂ ಆಡಳಿತದ ಬಗ್ಗೆಯೂ ಅನುಭವವಿದೆ. ಅವರಿಂದ ಬದಲಾವಣೆ ನಿರೀಕ್ಷಿಸಲಾಗಿದೆ. ಇವರೊಂದಿಗೆ ಕೈ ಜೋಡಿಸಿದರೆ ಸ್ನೂಕರ್ ತನ್ನ ವೈಭವವನ್ನು ಮರಳಿ ಪಡೆಯಲು ಸಾಧ್ಯವಿದೆ. ಹಾಗಾಗಿ ನಾನು ಕೂಡ ಕರ್ನಾಟಕ ರಾಜ್ಯ ಬಿಲಿಯಡ್ರ್ಸ್ ಸಂಸ್ಥೆಯ ಚುನಾವಣೆಯಲ್ಲಿ ಸ್ಪರ್ಧಿಸಲು ತೀರ್ಮಾನಿಸಿದ್ದೇನೆ ಎಂದು ತಿಳಿಸಿದರು.

ಹಿರಿಯ ಆಟಗಾರ ಅರವಿಂದ ಸವೂರ ಮಾತನಾಡಿ, ರಾಜ್ಯದಲ್ಲಿ ಸ್ನೂಕರ್ ಮತ್ತು ಬಿಲಿಯಡ್ರ್ಸ್ ಕ್ರೀಡೆಯ ಅಭಿವೃದ್ಧಿ ಕುಂಠಿತಗೊಂಡಿದೆ ಸರಿಯಾದ ಪೆÇ್ರೀ ಸಿಗದೆ ಸಾಕಷ್ಟು ಜನ ಕ್ರೀಡೆಯಿಂದ ವಿಮುಖರಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯದ ಆಟಗಾರರು ನಮ್ಮ ಬಳಿ ಬಂದು ಹಲವು ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಇವುಗಳನ್ನು ಪರಿಹರಿಸಲು ನಾನು ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದೇನೆ ಎಂದು ಹೇಳಿದರು.

ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಚಾಂಪಿಯನ್‍ಶಿಪ್‍ಗಳಲ್ಲಿ ರಾಜ್ಯದ ಆಟಗಾರರ ಪ್ರಾಬಲ್ಯ ಕ್ಷೀಣಿಸುತ್ತಿದೆ. ಸರಿಯಾದ ಪೆÇ್ರೀ ಸಿಗದಿರುವುದೇ ಇದಕ್ಕೆ ಕಾರಣ. ಕ್ರೀಡಾಪಟುಗಳ ಸಮಸ್ಯೆಗಳನ್ನು ಅರಿತು ಅವುಗಳನ್ನು ಪರಿಹರಿಸುವ ಅವಶ್ಯಕತೆ ಅತ್ಯಗತ್ಯವಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಎಸ್.ಜೈರಾಜ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ