ಸಣ್ಣ ಉದ್ದಿಮೆದಾರರಿಗೆ ಕೇಂದ್ರದಿಂದ ಅನ್ಯಾಯ: ಬಸವರಾಜ ಜವಳಿ

ಹುಬ್ಬಳ್ಳಿ-: ಕಾರ್ಪೋರೆಟ್ ಕ್ಷೇತ್ರದ ಲಾಬಿಗೆ ಮನಿಯುತ್ತಿರುವ ಕೇಂದ್ರ ಸರ್ಕಾರ, ಎಂ.ಎಸ್.ಎಂ.ಇ ಉದ್ಯಮಿದಾರರನ್ನ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಬಸವರಾಜ ಜವಳಿ ಆರೋಪಿಸಿದರು. ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸಣ್ಣ, ಅತೀ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ಅಭಿವೃದ್ಧಿಗೆ ಶ್ರಮಿಸಬೇಕಿದ್ದ ಕೇಂದ್ರ ಸರ್ಕಾರ, ಪ್ರತಿ ವರ್ಷ 250 ಕೋಟಿ ವ್ಯವಹಾರ ಹೊಂದಿರುವ ಯಾವುದೇ ಕೈಗಾರಿಕೋದ್ಯಮವು, ಎಂ.ಎಸ್.ಎಂ.ಇ ಉದ್ಯಮ ಎಂದು ಪರಿಗಣಿಸುವ ಕಾಯದೆ ತರುತ್ತಿದೆ. ಈ ಸಂಬಂಧ ಲೋಕಸಭೆಯಲ್ಲಿ ಮಸೂದೆಗೆ ಅಂಗಿಕಾರ ಕೂಡ ಮಾಡಲಾಗಿದೆ. ಈ ಕಾಯ್ದೆಯಿಂದ ಸಣ್ಣ ಮತ್ತು ಅತೀ ಸಣ್ಣ ಹಾಗೂ ಮಧ್ಯಮ ಉದ್ದಿಮೆದಾರರಿಗೆ ದೊರೆಯಬೇಕಿದ್ದ ಸರ್ಕಾರಿ ಸೌಲಭ್ಯಗಳು ಕೈ ತಪ್ಪಿಲಿವೆ ಎಂದು ಕಳವಳ ವ್ಯಕ್ತಪಡಿಸಿದರು. ಈ ಕಾಯ್ದೆ ಜಾರಿ ತಡೆಯಲು ಕರ್ನಾಟಕ ಸಣ್ಣ ಕೈಗಾರಿಕಾ ಸಂಘದಿಂದ ಸಾಕಷ್ಟು ಹೋರಾಟ ಮಾಡಲಾಗುತ್ತಿದೆ. ಬರುವ ಸೆಪ್ಟೆಂಬರ್ ತಿಂಗಳಿನಲ್ಲಿ ಹೊಸ ಕಾಯ್ದೆಯನ್ನ ವಿರೋಧಿಸಿ ದಕ್ಷಿಣ ಭಾರತ ಸೇರಿದಂತೆ ಒಟ್ಟು ಏಳು ರಾಜ್ಯದ ಸಣ್ಣ ಉದ್ದಿಮೆದಾರರಿಂದ ದೆಹಲಿ ಮಟ್ಟದಲ್ಲಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದರು. ಕೇವಲ ಓಟ್ ಬ್ಯಾಂಕ್ ಉದ್ದೇಶದಿಂದ ಎಂ.ಎಸ್.ಎಂ.ಇ ಪರಿಕಲ್ಪನೆಯೇ ಬದಲಿಸುವುದು ಸರಿಯಲ್ಲ ಎಂದರು. ಹೊಸ ಉದ್ದಿಮೆದಾರರಿಗೆ ಬ್ಯಾಂಕುಗಳು ಸಾಲ ನೀಡಲು ಮುಂದಾಗುತ್ತಿಲ್ಲ. ಸರ್ಕಾರದ ಯಾವುದೇ ಯೋಜನೆ ಕೇಳಿದರು. ಈ ಯೋಜನೆ ನಮ್ಮಲ್ಲಿ ಇಲ್ಲ ಎಂದು ಸಾಗಿ ಹಾಕುವ ಕಾರ್ಯ ನಡೆಯುತ್ತಿದೆ. ಇದರಿಂದ ಹೊಸ ಕೈಗಾರಿಕೆಗಳು ಸ್ಥಾಪಿಸಲಾಗುತ್ತಿಲ್ಲ ಎಂದರು. ಸದ್ಯ ರಾಜ್ಯದ ಮುಖ್ಯಮಂತ್ರಿಗಳು ಕೈಗಾರಿಕೆಗಳ ಅಭಿವೃದ್ಧಿ ಪರವಾಗಿದ್ದಾರೆ. ರಾಜ್ಯದ ಕೈಗಾರಿಕೆಗಳ ವಸ್ತುಸ್ಥಿತಿಯನ್ನ ಅವರ ಗಮನಕ್ಕೆ ತರಲಾಗಿದೆ. ಮೂಲಭೂತ ಸೌಕರ್ಯ ಸೇರಿದಂತೆ ಕಾಸಿಯಾದಿಂದ ಇಟ್ಟಿರುವ ವಿವಿಧ ಬೇಡಿಕೆಗಳ ಈಡೇರಿಕೆಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಎಂದ ಅವರು, ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗೆ ಶ್ರಮಿಸಬೇಕಿದ್ದ, ಕೆಎಸ್ಎಸ್ಐಡಿಸಿ ಹಾಗೂ ಕೆಐಎಡಿಬಿ ನಿಗಮಗಳು, ಉದ್ದಿಮೆದಾರರ ವಿರೋಧಿ ನೀತಿ ಅನುಸರಿಸುತ್ತಿವೆ. ಕಡಿಮೆ ಬೆಲೆಗೆ ಖರೀಧಿಸಿದ ಭೂಮಿಯನ್ನು, ದುಪ್ಪಟ್ಟು ಹಣಕ್ಕೆ ಕೈಗಾರಿಕಾ ಸ್ಥಾಪನೆಗೆ ನೀಡಲಾಗುತ್ತಿದೆ. ಇದರಿಂದ ಹೊಸ ಉದ್ದಿಮೆಗಳ ಸ್ಥಾಪನೆ ಮಾಡಲು ಯಾರು ಮುಂದಾಗುತ್ತಿಲ್ಲ. ಬದಲಾಗಿ ರಿಯಲ್ ಎಸ್ಟೇಟ್ ದಂಧೆಯಾಗಿ ಪರಿವರ್ತನೆ ಗೊಂಡಿದೆ‌. ಕೈಗಾರಿಕಾ ನಿವೇಶನಗಳ ದರ‌ ನಿಗದಿಗೆ ಸಂಬಂಧಿಸಿದಂತೆ ಕಾಸಿಯಾ ನಿರಂತರ ಹೋರಾಟ ಮಾಡುತ್ತಿದೆ. ಇದರ ಫಲವಾಗಿ ತಾತ್ಕಾಲಿಕ ದರ ನಿಗದಿ ಬದಲು, ಏಕದರ ನಿಗದಿ ಮಾಡುವುದಕ್ಕೆ ಸರ್ಕಾರ ಮುಂದಾಗಿದೆ ಎಂದರು. ಸಣ್ಣ ಕೈಕಾಗಿರಿಕೆಗಳ ಅಭಿವೃದ್ಧಿಗೆ ಕಾಸಿಯಾದಿಂದ ಅನೇಕ ಹೋರಾಟಗಳು ನಡೆಯುತ್ತಲವೇ ಇವೆ. ಉದ್ಯಮಿಗ ಸ್ಥಾಪನೆಗೆ ವಿವಿಧ ಯೋಜನೆಗಳನ್ನು ಕಾಸಿಯಾ ಹಾಕಿಕೊಂಡಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ, ಪ್ರಧಾನ ಕಾರ್ಯದರ್ಶಿ ರವಿಕಿರಣ ಕುಲಕರ್ಣಿ, ಉಪಾಧ್ಯಕ್ಷ ಆರ್. ರಾಜು., ಎನ್.ಕೆ.ಎಸ್.ಎಸ್.ಐ ಅಧ್ಯಕ್ಷ ವಿಶ್ವನಾಥ ಗೌಡರ, ಜಯಪ್ರಕಾಶ ಟೆಂಗಿನಕಾಯಿ ಇತರರು ಇದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ