ಜಿಕೆವಿಕೆಯಲ್ಲಿ ನಾಳೆಯಿಂದ ಅಲಂಕಾರಿಕ ಕೇಕ್‍ಗಳ ಪ್ರದರ್ಶನ ಮತ್ತು ಮಾರಾಟ

 

ಬೆಂಗಳೂರು, ಆ.13-ಅಲಂಕಾರಿಕ ಕೇಕ್‍ಗಳ ಪ್ರದರ್ಶನ ಮತ್ತು ಮಾರಾಟವನ್ನು ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ)ದ ಆವರಣದಲ್ಲಿ ನಾಳೆ ಬೆಳಗ್ಗೆ 11 ಗಂಟೆಗೆ ಹಮ್ಮಿಕೊಳ್ಳಲಾಗಿದೆ.
ಬೇಕರಿ ತರಬೇತಿ ಕೇಂದ್ರ, ಕೃಷಿ ವಿಸ್ತರಣಾ ನಿರ್ದೇಶನಾಲಯ ಹಾಗೂ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಿರುವ ಕೇಕ್‍ಗಳ ಪ್ರದರ್ಶನ ಹಾಗೂ ಮಾರಾಟವನ್ನು ಕೃಷಿ ವಿವಿ ಕುಲಪತಿ ಡಾ.ಎಂ.ಎಸ್.ನಟರಾಜು ಉದ್ಘಾಟಿಸುವರು. ಹೆಚ್ಚಿನ ಮಾಹಿತಿಗೆ ಡಾ.ಎಸ್.ವಿ.ಸುರೇಶ್, ಸಂಯೋಜಕರು, ಬೇಕರಿ ತರಬೇತಿ ಘಟಕ, ಹೆಬ್ಬಾಳ, ಬೆಂಗಳೂರು-24, ಮೊ.ಸಂ.9845351626 ಸಂಪರ್ಕಿಸುವಂತೆ ಕೋರಲಾಗಿದೆ.
ಪಾರ್ಥೇನಿಯಂ ಜಾಗೃತಿ ಸಪ್ತಾಹ :
ಹದಿಮೂರನೇ ಪಾರ್ಥೇನಿಯಂ ಜಾಗೃತಿ ಸಪ್ತಾಹವನ್ನು ಇದೇ 16 ರಿಂದ 22 ರವರೆಗೆ ಬೆಂಗಳೂರು ಕೃಷಿ ವಿವಿ ಮತ್ತು ಮಧ್ಯಪ್ರದೇಶದ ಕಳೆ ಸಂಶೋಧನಾ ನಿರ್ದೇಶನಾಲಯದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಪ್ತಾಹದ ಅಂಗವಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಹಾಗೂ ಕೃಷಿಕರಿಗೆ ಸಮಗ್ರ ಪಾರ್ಥೇನಿಯಂ ಕಳೆ ನಿಯಂತ್ರಣ ಕುರಿತ ಪ್ರಾತ್ಯಕ್ಷಿಕೆ, ವಿಡಿಯೋ ಪ್ರದರ್ಶನ, ಮುಂತಾದ ಸಾಧನಗಳ ಮೂಲಕ ಜಾಗೃತಿ ಮೂಡಿಸಲಾಗುವುದು.
ಆಸಕ್ತರು ಹೆಚ್ಚಿನ ಮಾಹಿತಿಗೆ ಡಾ.ಜಿ.ಎನ್.ಧನಪಾಲ್, ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು, ಅಖಿಲ ಭಾರತ ಸುಸಂಘಟಿತ ಸಂಶೋಧನಾ ಪ್ರಾಯೋಜನೆ, ಕಳೆ ನಿಯಂತ್ರಣ, ಮುಖ್ಯ ಸಂಶೋಧನಾ ಕೇಂದ್ರ, ಹೆಬ್ಬಾಳ, ಬೆಂಗಳೂರು-24, ಮೊ.ಸಂ.9480315492 ಸಂಪರ್ಕಿಸಲು ಕೋರಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ