ದಯಾಮರಣಕ್ಕೆ ಅರ್ಜಿ ಸಲ್ಲಿಸಿದ್ರೂ ಸಿಗದ ನ್ಯಾಯ

ಬಾಗಲಕೋಟೆ:ಆ-13: ಮಾಜಿ ಸಿಎಮ್ ಸಿದ್ದರಾಮಯ್ಯ ಕ್ಷೇತ್ರದಲ್ಲಿ ದಯಾಮರಣಕ್ಕಾಗಿ ಅರ್ಜಿ ಸಲ್ಲಿಸಿದರೂ ನ್ಯಾಯ ಸಿಗದೆ ಕುಟುಂಬವೊಂದು ಸಂಕಷ್ಡಕ್ಕೀಡಾಗಿದೆ.

ಬಾಗಲಕೋಟೆ ಜಿಲ್ಲೆ ಬಾದಾಮಿ ಪಟ್ಟಣದಲ್ಲಿ ಬಸಪ್ಪ ತಳವಾರ ಕುಟುಂಬದ ಪರಿಸ್ಥಿತಿ. ದಯಾಮರಣಕ್ಕೆ ಅರ್ಜಿ ಸಲ್ಲಿಸಿದರೂ ನ್ಯಾಯ ಸಿಗದ ಹಿನ್ನೆಲೆ ಪುರಸಭೆ ಮುಂದೆ ಕುಟುಂಬ ಧರಣಿ ನಡೆಸುತ್ತಿದೆ.

ಬಸಪ್ಪ ತಳವಾರ ಬಾದಾಮಿ ಪುರಸಭೆ ಮುಂದೆ ಸೊಸೆ,ಮೊಮ್ಮಕ್ಕಳ ಸಮೇತ ಧರಣಿ ನಡೆಸುತ್ತಿದ್ದಾರೆ.ತಮ್ಮ ಮನೆ ಮನೆ ಪಕ್ಕ ಶೋಭಾ ಹೊಸಗೌಡ್ರ ಎಂಬುವರು ನಿಯಮಬಾಹೀರ ಕಟ್ಟಡ ಕಟ್ಟಿಸುತ್ತಿದ್ದಾರೆ. ಮನೆ ಪಕ್ಕ ಮೂರು ಅಡಿ ಸ್ಥಳ ಬಿಡುವ ನಿಯಮ ಉಲ್ಲಂಘನೆ ಮಾಡಿದ್ದಾರೆ. ಇದರಿಂದ ತಳವಾರ ಕುಟುಂಬಕ್ಕೆ ಗಾಳಿ ಬೆಳಕಿಗೆ ತೊಂದರೆಯಾಗುತ್ತಿದೆ.ಕಟ್ಟಡ ಪ್ರಾರಂಭಿಕ ಹಂತದಿಂದಲೂ ಈ ಬಗ್ಗೆ ಪುರಸಭೆಗೆ ನೊಂದ ಕುಟುಂಬ ಮನವಿ ಮಾಡುತ್ತ ಬಂದಿದೆ. ಪುರಸಭೆ ಅಧಿಕಾರಿಗಳು ನೆಪಮಾತ್ರಕ್ಕೆ ನೊಟೀಸ್ ನೀಡುತ್ತಿದ್ದಾರೆ.

ಶೋಭಾ ಹೊಸಗೌಡ್ರ ಮತ್ತು ಕುಟುಂಬ ಸಿದ್ದರಾಮಯ್ಯ, ಬಿಬಿ ಚಿಮ್ಮನಕಟ್ಟಿ ನಮ್ಮವರು
ಸಿದ್ದರಾಮಯ್ಯಗೆ ಹೇಳಿದರೂ ಏನೂ ಮಾಡಿಕೊಳ್ಳೋಕಾಗೋದಿಲ್ಲ ಎಂದು ದಬ್ಬಾಳಿಕೆ ಮಾಡುತ್ತಿದಾರೆ. ಎಂದು ಬಸಪ್ಪ ತಳವಾರ ಆರೋಪ ಮಾಡುತ್ತಿದ್ದಾರೆ.

ಇನ್ನು ಇದೇ ವಿಚಾರಕ್ಕಾಗಿ ೨೦೧೬ ರಲ್ಲಿ ಈ ಕುಟುಂಬ ಸಾಮೂಹಿಕ ದಯಾಮರಣಕ್ಕಾಗಿ ರಾಷ್ಟ್ರಪತಿಗಳಿಗೆ ಅರ್ಜಿ ಸಲ್ಲಿಸಿತ್ತು. ನಂತರ ಕಟ್ಟಡ ತೆರವುಗೊಳಿಸುವ ಭರಸೆ ನೀಡಿದ ಪುರಸಭೆ ಅಧಿಕಾರಿಗಳು ಕಾಟಾಚಾರಕ್ಕೆ ನೊಟೀಸ್ ಕೊಟ್ಟು ಕೈ ತೊಳೆದುಕೊಳ್ಳುತ್ತಿದ್ದಾರೆ.

ಸದ್ಯ ಮಾಜಿ ಸಿಎಮ್ ಸಿದ್ದರಾಮಯ್ಯ ನಮ್ಮ ಶಾಸಕರಾಗಿದ್ದು ಅವರಾದರೂ ನಮಗೆ ನ್ಯಾಯ ಕೊಡಿಸಲಿ ಎನ್ನುತ್ತಿದೆ ಈ ನೊಂದ ಕುಟುಂಬ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ