
ಕೊಯಂಬತ್ತೂರ್: ಆಧ್ಯಾತ್ಮಿಕ ನಾಯಕ, ಈಶಾ ಫೌಂಡೇಷನ್ನ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಅವರು ಯೋಗ ಗುರು ಬಾಬಾ ರಾಮ್ ದೇವ್ ಅವರನ್ನು ಬೈಕ್ ಮೇಲೆ ಕೂರಿಸಿಕೊಂಡು ಬೈಕ್ ರೈಡಿಂಗ್ ಮಾಡಿದ್ದಾರೆ.
ಇತ್ತೀಚೆಗೆ ಬಾಬಾ ರಾಮ್ ದೇವ್ ಅವರು ತಮಿಳುನಾಡಿನ ಕೊಯಂಬತ್ತೂರಿನಲ್ಲಿರುವ ಜಗ್ಗಿ ವಾಸುದೇವ್ ಅವರ ಆಶ್ರಮಕ್ಕೆ ಭೇಟಿ ನೀಡಿದ್ದರು. ಆಗ ಸದ್ಗುರು ತಮ್ಮ ಡುಕ್ಕಾಟಿ ಸ್ಕ್ರ್ಯಾಂಬ್ಲರ್ ಬೈಕ್ನ ಹಿಂಬದಿಯಲ್ಲಿ ರಾಮ್ದೇವ್ ಅವರನ್ನು ಕೂರಿಸಿಕೊಂಡು ಆಶ್ರಮದಲ್ಲೊಂದು ಸುತ್ತು ಹಾಕಿ ಬಂದರು.
ಸದ್ಗರು ಮತ್ತು ರಾಮ್ ದೇವ್ ಇಬ್ಬರು ಬೈಕ್ ರೈಡ್ ಮಾಡುತ್ತಿರುವ ದೃಶ್ಯವನ್ನು ಸ್ವತಃ ಸದ್ಗುರು ಅವರೇ ‘ಬೈಕ್ ಡ್ಯೂಡ್ಸ್’ ಎಂಬ ಹೆಸರಿನಲ್ಲಿ ತಮ್ಮ ಯ್ಯೂಟ್ಯೂಬ್ ಚಾನೆಲ್ನಲ್ಲಿ ಪ್ರಕಟಿಸಿದ್ದಾರೆ.
Sadhguru Jaggi Vasudev,Baba Ramdev,Bike riding