ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ: ಶೋಭಾ ಕರಂದ್ಲಾಜೆ

ಗದಗ:ಆ-13: ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ. ರಾಜ್ಯದಲ್ಲಿ ಅನೇಕ ಮಕ್ಕಳ, ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ನಡೆಯುತ್ತಿದ್ದರೂ, ರಾಜ್ಯ ಸರ್ಕಾರ ಕಣ್ ಮುಚ್ಚಿಕುಳತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಆರೋಪಿಸಿದರು.

ಗದಗನಲ್ಲಿ ಮಾತನಾಡಿದ ಅವರು, ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಅಪರಾಧಿ ಹಿಡಿಯುವಲ್ಲಿ ಸರ್ಕಾರ ವಿಫಲವಾಗಿದೆ. ಕೇಂದ್ರ ಸರ್ಕಾರದ ಕ್ರಿಮಿನಲ್ ಅಮಾನ್ಮೆಂಟ್ ಬಿಲ್ ೨೦೧೮ ಅನ್ನು ಕರ್ನಾಟಕದಲ್ಲಿ ಇನ್ನಷ್ಟು ಘಟ್ಟಿಗೊಳಿಸಬೇಕು. ಜೊತೆಗೆ ಅಪರಾಧಿಗಳಿಗೆ ಕಾನೂನು ಭಯ ಹುಟ್ಟಿಸುವ ಕೆಲಸ ರಾಜ್ಯ ಸರ್ಕಾರ ಮಾಡಬೇಕೆಂದ್ರ ಆಗ್ರಹಿಸಿದ್ರು.

ಇನ್ನು ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಚಾರ ಹಿನ್ನಲೆಯಲ್ಲಿ, ಅಧಿಕಾರದ ಲಾಲಸೆಗೆ ಈಗಾಗಲೇ ಬೆಂಗಳೂರು ಬಲಿಯಾಗಿದೆ. ಬೆಂಗಳೂರ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಒಟ್ಟಾದ್ರಿ, ಆದ್ರೆ ಮಹಾನಗರ ಪಾಲಿಕೆ ನಾಶಮಾಡಿದ್ರಿ. ಅಭಿವೃದ್ಧಿ ಕೆಲಸಗಳಾಗದೆ ಭ್ರಷ್ಟಾಚಾರದ ಕೂಪವಾಗಿದೆ. ಬೆಂಗಳೂರು ನಲ್ಲಿ ದೋಸ್ತಿ ಜಿಲ್ಲೆಯಲ್ಲಿ ಕುಸ್ತಿ. ವಿಧಾನ ಸಭೆಯಲ್ಲೂ ದೋಸ್ತಿ ಗದಗನಲ್ಲೂ ಕುಸ್ತಿ ಇದು ನಿಮ್ಮ ನೀತಿನಾ? ನಿಮ್ಮದೋಸ್ತಿ ಎಲ್ಲಿ ವರೆಗೆ ಎಂಬುದನ್ನ ಸ್ಪಷ್ಟಪಡಿಸಬೇಕು ಅಂತ ಸಮ್ಮಿಶ್ರ ಸರ್ಕಾರಕ್ಕೆ ಸಂಸದೆ ಶೋಭಾ ಪ್ರಶ್ನೆಮಾಡಿದ್ರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ