ಕೊಲ್ಕತ್ತಾ :ಆ-12 ಲೋಕಸಭಾ ಮಾಜಿ ಸ್ಪೀಕರ್, ಸಿಪಿಐ(ಎಂ) ನೇತಾರ ಸೋಮನಾಥ ಚಟರ್ಜಿ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಸದ್ಯ ವೆಂಟಿಲೇಟರ್ ಸಹಾಯದಿಂದ ಉಸಿರಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಕಿಡ್ನಿ ಸಂಬಂಧಿತ ಕಾಯಿಲೆಯಿಂದ ಬಳಲುತ್ತಿರುವ ಚಟರ್ಜಿ ಅವರು, ಆಗಸ್ಟ್ 10 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಜುಲೈ ತಿಂಗಳಲ್ಲಿ ಹೆಮೋರ್ಹಾಗಿಕ್ ಸ್ಟ್ರೋಕ್ನಿಂದ ಚಿಕಿತ್ಸೆ ಪಡೆದಿದ್ದರು. ಕೆಲ ದಿನಗಳಿಂದ ಅವರ ಆರೋಗ್ಯದಲ್ಲಿ ಭಾರಿ ಏರುಪೇರು ಉಂಟಾಗುತ್ತಿದ್ದು, ಸದ್ಯ ತೀವ್ರ ಅಸ್ವಸ್ಥರಾಗಿದ್ದಾರೆ. ಚಟರ್ಜಿಯವರಿಗೆ 89 ವರ್ಷ.
ಚಟರ್ಜಿ ಅವರು ದೀರ್ಘ ಕಾಲದವರೆಗೆ ಸಂಸತ್ತಿಗೆ ತಮ್ಮ ಸೇವೆ ಸಲ್ಲಿಸಿದ ಸಜ್ಜನ ರಾಜಕಾರಣಿ ಎಂದೇ ಖ್ಯಾತರಾದವರು. 10 ಬಾರಿ ಲೋಕಸಭೆಗೆ ಸಂಸದರಾಗಿ ಆಯ್ಕೆಯಾಗಿದ್ದರು. 2004-2009ರ ಅವಧಿಯಲ್ಲಿ ಲೋಕಸಭೆಯ ಸ್ಪೀಕರ್ ಆಗಿ ಸೇವೆ ಸಲ್ಲಿಸಿದ್ದರು. ಇಂಡೋ ಅಮೇರಿಕದ ನ್ಯೂಕ್ಲಿಯರ್ ಒಪ್ಪಂದ ವಿಚಾರದಲ್ಲಿ ಕಮ್ಯುನಿಸ್ಟ್ ಪಾರ್ಟಿಯು ಕಾಂಗ್ರೆಸ್ಗೆ ನೀಡಿದ್ದ ಬೆಂಬಲ ವಾಪಸ್ ಪಡೆದ ಸಂದರ್ಭದಲ್ಲಿ ಅದನ್ನು ನಿರಾಕರಿಸಿದ ಕಾರಣ ಅವರು ರಾಜಕಾರಣದಿಂದಲೇ ಹೊರಬರಬೇಕಾಯಿತು.
Former Lok Sabha speaker, Somnath Chatterjee, condition critical