8 ಹೊಸ ಕಾರುಗಳ ಖರೀದಿಗೆ ಆರ್ಥಿಕ ಇಲಾಖೆ ಒಪ್ಪಿಗೆ; ಸುಮಾರು 1 ಕೋಟಿ ರೂ. ವೆಚ್ಚ!

ಬೆಂಗಳೂರು: ಹೊಸ ಕಾರುಗಳನ್ನು ಕೊಟ್ಟರೆ ಅಧಿಕಾರಿಗಳು ಚುರುಕಾಗಿ ಓಡಾಡಲಿದ್ದಾರೆ. ಜೊತೆಗೆ ಅಬಕಾರಿ ಇಲಾಖೆ ಆದಾಯ ಹೆಚ್ಚಾಗಬೇಕಾದರೆ ಹೊಸ ಕಾರು ಬೇಕು ಎಂದು 8 ಹೊಸ ಕಾರುಗಳ ಖರೀದಿಗೆ ಆರ್ಥಿಕ ಇಲಾಖೆ ಒಪ್ಪಿಗೆ ಸೂಚಿಸಿದೆ.

ಸರ್ಕಾರದ ಆದಾಯವನ್ನು ಹೆಚ್ಚಿಸಬೇಕದಾರೆ ಹೊಸ ಕಾರು ಬೇಕೇಬೇಕು. ಹಾಗಾಗಿ ನಮಗೆ ಹೊಸ 8 ಎಕ್ಸ್ ಯುವಿ ಡಬ್ಲ್ಯು 4 ಎಫ್‍ಡಬ್ಲ್ಯುಡಿ ದುಬಾರಿ ಬೆಲೆಯ ಕಾರನ್ನು ಕೊಡಿಸಿ ಅಂತ ಅಬಕಾರಿಯ ಇಲಾಖೆಯ ಜಂಟಿ ಆಯುಕ್ತರು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದರು. ವಿಪರ್ಯಾಸ ಅಂದರೆ ಆರ್ಥಿಕ ಇಲಾಖೆ ಅಬಕಾರಿ ಇಲಾಖೆ ಅಧಿಕಾರಿಗಳ ಬೇಡಿಕೆ ಅಸ್ತು ಅಂದಿದೆ. ಹೊಸ ಕಾರು ಖರೀದಿಸಲು ಅನುಮತಿ ನೀಡಿರುವ ಪತ್ರ ಲಭ್ಯವಾಗಿದೆ.

ಅಬಕಾರಿ ಅನುಮತಿ ನೀಡಿದ ಪತ್ರದಲ್ಲಿ ತಲಾ ಒಂದು ಕಾರಿಗೆ 10,64,187 ರೂ. ರಂತೆ ಒಟ್ಟು 8 ಎಕ್ಸ್ ಯುವಿ ಡಬ್ಲ್ಯು 4 ಎಫ್‍ಡಬ್ಲ್ಯುಡಿ ವಾಹಗಳ ಖರೀದಿಗಾಗಿ 85,13,496 ರೂ. ಗಳಂತೆ ಅನುಮೋದನೆ ನೀಡಬೇಕೆಂದು ಮನವಿ ಮಾಡಲಾಗಿದೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಿತವ್ಯಯವಾಗಬೇಕೆಂದು ನಿರ್ದೇಶನ ನೀಡುತ್ತಿದ್ದಾರೆ. ಆದರೆ ಇನ್ನೊಂದು ದಿಕ್ಕಿನಲ್ಲಿ ಅಧಿಕಾರಿಗಳು ಹೊಸ ಹೊಸ ರೀತಿಯಲ್ಲಿ ದುಂದು ವೆಚ್ಚ ಮಾಡುತ್ತಿದ್ದಾರೆ. ಆದ್ದರಿಂದ ಸಿಎಂ ಅವರು ಯಾರು ಈ ದುಂದುವೆಚ್ಚ ಮಾಡುತ್ತಿದ್ದಾರೆ ಅವರಿಗೆ ಕಡಿವಾಣ ಹಾಕಬೇಕು. ಕಾರು ಖರೀದಿಸಲು ಹೋಗಿರುವ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.

ನಮ್ಮದು ಮಿಥವ್ಯಯ ಸರ್ಕಾರ ಇನ್ನು ಮುಂದೆ ಸರ್ಕಾರಿ ಅಧಿಕಾರಿಗಳು ದುಂದು ವೆಚ್ಚ ಮಾಡದೇ ಇರುವುದರಲ್ಲಿ ಆಡಳಿತ ನಡೆಸಿ ಅಂತ ಮುಖ್ಯಮಂತ್ರಿ ಕುಮಾರಸ್ವಾಮಿ ಪದೇ ಪದೇ ಹೇಳಿಕೆ ನೀಡುತ್ತಿದ್ದಾರೆ. ಅಷ್ಟೇ ಅಲ್ಲದೆ ಯಾವುದೇ ರೀತಿಯಲ್ಲೂ ಹೊಸ ಕಾರು ಖರೀದಿ ಮಾಡಬೇಡಿ. ನಾನು ಸ್ವಂತ ಕಾರಲ್ಲಿ ಓಡಾಡುತ್ತಿದ್ದೇನೆ ನೀವು ಹಾಗೆ ಮಾಡಿ ಅಂತ ಎಂದು ಹೇಳಿದ್ದರು. ಆದ್ರೆ ಇದೀಗ ಅಧಿಕಾರಿಗಳು ಸಾಥ್ ಕೊಡದೆ ಹೊಸ ಕಾರು ಖರೀದಿಸಲು ಮುಂದಾಗಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ