ಸೋಮನಾಥ್ ಚಟರ್ಜಿ ದೇಹ ಸಂಶೋಧನೆಗೆ ದಾನ

ನವದೆಹಲಿ:13: ಲೋಕಸಭಾ ಮಾಜಿ ಸ್ಪೀಕರ್,ಕಮ್ಯುನಿಸ್ಟ್ ಹಿರಿಯ ಮುಖಂಡ ಸೋಮನಾಥ್ ಚಟರ್ಜಿ ತೀವ್ರ ಅನಾರೋಗ್ಯದ ಹಿನ್ನಲೆಯಲ್ಲಿ ನಿಧನರಾಗಿದ್ದು, ಅವರ ದೇಹವನ್ನು ವೈದ್ಯಕೀಯ ಸಂಶೋಧನೆಗಾಗಿ ದಾನ ಮಾಡಲಾಗುತ್ತಿದೆ.

ಈ ಕುರಿತಂತೆ ಹೇಳಿಕೆ ನೀಡಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು, ಸೋಮನಾಥ್ ಚಟರ್ಜಿಯವರು ಹೈಕೋರ್ಟ್ ನಲ್ಲಿ ಸುದೀರ್ಘ ಕಾಲ ಕಳೆದಿದ್ದರು. ಚಟರ್ಜಿಯವರ ಪಾರ್ಥೀವ ಶರೀರವನ್ನು ಬೆಲ್ಲೆ ವ್ಯೂ ಕ್ಲಿನಿಕ್ ನಿಂದ ಹೈಕೋರ್ಟ್’ಗೆ ತೆಗೆದುಕೊಂಡು ಹೋಗಲಾಗುತ್ತದೆ. ನ್ಯಾಯಾಲಯದಿಂದ ರಾಜ್ಯ ವಿಧಾನಸಭೆಗೆ ಕರೆದೊಯ್ದು ಅಲ್ಲಿ ರಾಜ್ಯ ಸರ್ಕಾರದ ವತಿಯಿಂದ ಸಕಲ ಗೌರವಗಳನ್ನು ಸಲ್ಲಿಸಲಾಗುತ್ತದೆ.

ವಿಧಾನಸಭೆಯಲ್ಲಿ ಕೆಲ ಗಂಟೆಗಳ ಕಾಲ ಇರಿಸಿ, ನಂತರ ಚಟರ್ಜಿಯವರ ಕುಟುಂಬ ಸದಸ್ಯರಿಗೆ ಹಸ್ತಾಂತರ ಮಾಡಲಾಗುತ್ತದೆ. ಬಳಿಕ ವೈದ್ಯಕೀಯ ಸಂಶೋಧನೆಗಾಗಿ ಎಸ್ಎಸ್ಎಮ್ ಆಸ್ಪತ್ರೆಗೆ ದೇಹವನ್ನು ದಾನ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

Somnath Chatterjee,Body donate, Medical research

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ