ಕೋಲಾರ: ಆ-11: ಅವಿಭಜಿತ ಕೋಲಾರ ಜಿಲ್ಲೆಯ ಹೈನೋದ್ಯಮಕ್ಕೆ ಕಂಟಕಪ್ರಾಯವಾಗಿರುವ ಸಚಿವ ಹೆಚ್.ಡಿ ರೇವಣ್ಣ ಅವ್ರು ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಿ ಕೋಲಾರ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಟಿ.ಎ ನಾರಾಯಗೌಡ ಬಣದ ಜಿಲ್ಲಾ ಘಟಕ ವತಿಯಿಂದ ಹೆಚ್.ಡಿ ರೇವಣ್ಣ ಅವ್ರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಲಾಯಿತು.
ಕೋಲಾರ ಒಕ್ಕೂಟದಿಂದ ರಕ್ಷಣಾ ಇಲಾಖಾ ಕೇಂದ್ರಗಳಿಗೆ ನೇರವಾಗಿ ಟೆಂಡರ್ ನಲ್ಲಿ ಭಾಗವಹಿಸಿ ಟೆಂಡರ್ ಪಡೆದು ಯಶಸ್ವಿಯಾಗಿ ಯುಹೆಚ್ ಟಿ ಹಾಲನ್ನು ಸಮರ್ಪಕವಾಗಿ, ಉತ್ತಮ ಬಾಂದವ್ಯದೊಂದಿಗೆ ಮಾರುಕಟ್ಟೆ ಅಭಿವೃದ್ದಿ ಪಡಿಸಿ ಹಾಲು ಪೂರೈಕೆ ಮಾಡಲಾಗುತ್ತಿತ್ತು. ಕೋಚಿಮುಲ್ ಗೆ ಬಹುದೊಡ್ಡ ಆಸರೆ ಎನಿಸಿದ್ದ ಗುಡ್ ಲೈಫ್ ಹಾಲನ್ನು ಭಾರತೀಯ ಸೈನ್ಯಕ್ಕೆ ಸರಬರಾಜು ಮಾಡುತ್ತಿದ್ದ ೮೦ ಲಕ್ಷ ಲೀಟರ್ ಹಾಲನ್ನು ಮುಖ್ಯಮಂತ್ರಿ ಅವ್ರ ಸಹೋದರ ಹೆಚ್.ಡಿ ರೇವಣ್ಣ ಮಾಡಿದ ಮಸಲತ್ತಿನಿಂದ ೪೦ ಲಕ್ಷ ಲೀಟರ್ ಹಾಲನ್ನು ಕಡಿತಗೊಳಿಸಿ ಹಾಸನಕ್ಕೆ ಹಂಚಿಕೆ ಮಾಡಿರುವುದು ನಮ್ಮ ಕೋಚಿಮುಲ್ ಗೆ ಬಾರಿ ಹೊಡೆತ ಬಿದ್ದಿದೆ. ಇದು ಕೋಲಾರ ಜಿಲ್ಲೆಯ ಹಾಲು ಉತ್ಪಾದಕರ ಜೀವನಕ್ಕೆ ಕೊಳ್ಳಿ ಇಟ್ಟಂತ್ತಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೋಚಿಮುಲ್ ಗೆ ಪ್ರತಿನಿತ್ಯ ೧೧ ಲಕ್ಷ ಲೀಟರ್ ಹಾಲಿಗೆ ಮಾರುಕಟ್ಟೆಯಿಲ್ಲದೆ ದಿನಕ್ಕೆ ೮ ಲಕ್ಷ ಮೌಲ್ಯದ ಹಾಲನ್ನು ಪರಿವರ್ತನೆಗೆ ಕಳುಹಿಸುತ್ತಿರುವ ಕಾರಣ ದಿನಕ್ಕೆ ೨೫ ಲಕ್ಷ ನಷ್ಟ ಉಂಟಾಗುತ್ತಿದೆ ಇದರ ಪರಿಣಾಮ ಜಿಲ್ಲೆಯ ರೈತರು ಸಂಕಷ್ಟಕ್ಕೆ ಸಿಲುಕಿದ್ದು ಹೆಚ್ .ಡಿ ರೇವಣ್ಣ ಅವರ ಈ ನಿಲುವನ್ನು ಕೂಡಲೇ ವಾಪಸ್ ಪಡೆಯಬೇಕು ಮುಖ್ಯಮಂತ್ರಿಗಳು ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಿ ಜಿಲ್ಲೆಗೆ ಹಾಗಿರುವ ನಷ್ಟವನ್ನು ಪರಿಹರಿಸಬೇಕೆಂದು ಒತ್ತಾಯಿಸಿದರು.