ಬೆಂಗಳೂರು, ಆ.9- ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆ ಹಾಗೂ ಉದ್ಯಮಗಳನ್ನು ವಹಿವಾಟು ಆಧಾರದ ಮೇಲೆ ವರ್ಗೀಕರಣ ಮಾಡಿರುವುದು ಮಾರಕ ನಿರ್ಣಯವಾಗಿದ್ದು, ಇದನ್ನು ಕೂಡಲೇ ಬದಲಾವಣೆ ಮಾಡಬೇಕೆಂದು ಕಾಸಿಯಾ ಅಧ್ಯಕ್ಷ ಬಸವರಾಜ್ ಎಸ್.ಜವಳಿ ಆಗ್ರಹಿಸಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಣ್ಣ ಕೈಗಾರಿಕೆಗಳು ಹೂಡಿಕೆ ಮಾಡಿರುವ ಬಂಡವಾಳ, ಯಂತ್ರೋಪಕರಣಗಳ ಸಾಮಥ್ರ್ಯ ಇವುಗಳನ್ನು ಆಧರಿಸಿ ವರ್ಗೀಕರಣ ಮಾಡುವ ಪದ್ದತಿ ಮೊದಲಿನಿಂದಲೂ ಜಾರಿಯಲ್ಲಿತ್ತು. ಆದರೆ, ಅದನ್ನು ಬದಲಾವಣೆ ಮಾಡಿ ಕೇಂದ್ರ ಸರ್ಕಾರ ವಾರ್ಷಿಕ ವಹಿವಾಟು ಆಧರಿಸಿ ಕೈಗಾರಿಕೆಗಳನ್ನು ವರ್ಗೀಕರಣ ಮಾಡಲು ಮುಂದಾಗಿದೆ. ಇದು ಅತ್ಯಂತ ಅಪಾಯಕಾರಿ. ವಹಿವಾಟು ಏಕರೂಪವಾಗಿರಲು ಸಾಧ್ಯವಿಲ್ಲ. ಹಾಗಾಗಿ ಅದನ್ನು ಪರಿಗಣಿಸಬಾರದು ಎಂದರು.
ಒಂದು ವೇಳೆ ವಹಿವಾಟು ಮೇಲೆಯೇ ವರ್ಗೀಕರಣ ಮಾಡಿದರೆ ಬಹಳಷ್ಟು ಸಂಸ್ಥೆಗಳು ತೊಂದರೆಗೆ ಸಿಲುಕಲಿವೆ ಮತ್ತು ಅವುಗಳ ಅಸ್ತಿತ್ವಕ್ಕೆ ಧಕ್ಕೆಯಾಗುತ್ತದೆ. ಅದನ್ನು ಅವಲಂಬಿಸಿರುವ ಕುಟುಂಬಗಳು ಕೂಡ ಸಮಸ್ಯೆಗೆ ಸಿಲುಕುತ್ತವೆ ಎಂದು ಆಂತಕ ವ್ಯಕ್ತಪಡಿಸಿದರು.
ಅಸ್ತಿತ್ವದಲ್ಲಿರುವ ಕೈಗಾರಿಕಾ ಪ್ರದೇಶಗಳಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗೆ ಸರ್ಕಾರಗಳು ಗಮನ ಹರಿಸಬೇಕು. ಕೌಶಲ್ಯಾಭಿವೃದ್ಧಿ ಮತ್ತು ಮಾನವಸಂಪನ್ಮೂಲ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕು. ಕೈಗಾರಿಕಾ ವಸಾಹತುಗಳಲ್ಲಿ ಹೊಸ ತಂತ್ರಜ್ಞಾನಗಳನ್ನು ಅವಳವಡಿಸಿಕೊಳ್ಳಲು ಪೆÇ್ರೀ ನೀಡಬೇಕು ಎಂದು ಅವರು ಹೇಳಿದರು.
ಹಲವಾರು ಬೇಡಿಕೆಗಳಿಗೆ ರಾಜ್ಯ ಸರ್ಕಾರ ಈವರೆಗೂ ಸ್ಪಂದಿಸಿದೆ. ಮುಂದಿನ ದಿನಗಳಲ್ಲೂ ಕೈಗಾರಿಕಾಭಿವೃದ್ಧಿಗೆ ಇನ್ನಷ್ಟು ಸಹಕಾರ ನೀಡಲಿ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು.
ಕಾಸಿಯಾ ವತಿಯಿಂದ ದಾಬಸ್ಪೇಟೆ ಬಳಿ ಉದ್ಯಮ ಅಭಿವೃದ್ಧಿಗಾಗಿ ಕಾಸಿಯಾ ಸೆಂಟರ್ ಆಫ್ ಎಕ್ಸಲೆನ್ಸಿ ಆ್ಯಂಡ್ ಇನೋವೇಷನ್ ಕೇಂದ್ರವನ್ನು ಆರಂಭಿಸಲಾಗುತ್ತಿದೆ ಎಂದರು.
2018-19ನೇ ಸಾಲಿಗೆ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳನ್ನು ಪರಿಚಯಿಸಲಾಯಿತು.
ಕಾಸಿಯಾ ಉಪಾಧ್ಯಕ್ಷ ಆರ್. ರಾಜು, ಕಾರ್ಯದರ್ಶಿ ರವಿಕಿರಣ ಕುಲಕರ್ಣಿ, ಜಂಟಿ ಕಾರ್ಯಾದರ್ಶಿಗಳಾದ ಸುರೇಶ್ ಎನ್. ಸಾಗರ್, ಎಸ್. ವಿಶ್ವೇಶ್ವರಯ್ಯ, ಖಜಾಂಚಿ ಶ್ರೀನಾಥ್ ಭಂಡಾರಿ ಉದ್ಯಾವರ್ ಮತ್ತಿತರರಿದ್ದರು.