೧೦೦ ನಿವೃತ್ತ ಶಿಕ್ಷಕರಿಗೆ ಉಚಿತ ಮಂಡಿ ಶಸ್ತ್ರಚಿಕಿತ್ಸೆ ನಡೆಸಲಿದ್ದಾರೆ

ಬೆಂಗಳೂರು, 9, ಆಗಸ್ಟ್, 2018: ಸ್ಪರ್ಷ ಆಸ್ಪತ್ರೆಯ ಚಾರಿಟಿ ಅಂಗವಾಗಿರುವ “ಸ್ಪರ್ಷ ಫೌಂಡೇಷನ್”, ಸೆಪ್ಟೆಂಬರ್ 5ರಂದು ಶಿಕ್ಷಕರ ದಿನಾಚರಣೆ ಅಂಗವಾಗಿ ದುರ್ಬಲ ಸಂಧಿವಾತದಿಂದ ಬಳಲುತ್ತಿರುವ ನಿವೃತ್ತ ಶಿಕ್ಷಕರಿಗೆ “ಗುರು ನಮನ” ಕಾರ್ಯಕ್ರಮ ಆಯೋಜಿಸಿದೆ. ಈ ಕುರಿತು ಆಸ್ಪತ್ರೆ ಇಂದು ಘೋಷಿಸಿದೆ. ಈ ಕಾರ್ಯಕ್ರಮದಡಿ ನಿವೃತ್ತ ಶಿಕ್ಷಕರಿಗೆ ನುರಿತ ತಜ್ಞರು ಸಂಪೂರ್ಣ ಉಚಿತ ಮಂಡಿ ಶಸ್ತ್ರಚಿಕಿತ್ಸೆ ನಡೆಸಲಿದ್ದಾರೆ. ಇದಕ್ಕೆ ಅಗತ್ಯವಾದ ವಾರ್ಡ್‍ಗಳು, ಆಪರೇಷನ್ ಥಿಯೇಟರ್ ಸೇರಿದಂತೆ ಎಲ್ಲ ಅಗತ್ಯ ಸೌಕರ್ಯ, ಅಗತ್ಯ ಸಾಮಾಗ್ರಿಗಳನ್ನು ಸ್ಪರ್ಷ ಆಸ್ಪತ್ರೆ ಉಚಿತವಾಗಿ ಒದಗಿಸಲಿದೆ.

ಶಸ್ತ್ರಚಿಕಿತ್ಸೆ ನಡೆಸುವ ತಜ್ಞ ವೈದ್ಯರು, ಸಿಬ್ಬಂದಿ, ನರ್ಸ್, ವೈದ್ಯಕೀಯ ಸಿಬ್ಬಂದಿ, ಫಿಸಿಯೋಥೆರಪಿ ವೈದ್ಯರು, ಔದ್ಯೋಗಿಕ ಥೆರಪಿಸ್ಟ್‍ಗಳು, ಪೌಷ್ಟಿಕ ತಜ್ಞರು ಮತ್ತಿತರರು ಒಟ್ಟಾಗಿ ಸ್ಪರ್ಷ ಆಸ್ಪತ್ರೆಯ ಒಂದೇ ಸೂರಿನಡಿ ಕೆಲಸ ಮಾಡಲಿದ್ದಾರೆ. ಇವರು ಶಸ್ತ್ರಚಿಕಿತ್ಸೆ ಜೊತೆಗೆ, ಚಿಕಿತ್ಸೆ ನಂತರವೂ ಅಗತ್ಯವಿರುವಷ್ಟು ಕಾಲ ಉಚಿತ ಸೇವೆಯನ್ನು ಒದಗಿಸಲಿದ್ದಾರೆ.

ತಪಾಸಣೆಯ ಸ್ಥಳಗಳ ವಿವರ ಇಂತಿವೆ:

ಸ್ಥಳ ದಿನಾಂಕ ತಪಾಸಣಾ ಸ್ಥಳ ಸಮಯ
ರಾಯಚೂರು 11 ಆಗಸ್ಟ್2018 ಸ್ಪರ್ಷ ಮಾಹಿತಿ ಕೇಂದ್ರ, ಉಮಾ ಹೋಟೆಲ್  ಆವರಣ 8AM-2PM
ಚಿಕ್ಕಮಗಳೂರು 11 ಆಗಸ್ಟ್2018 ಜೋಲ್ಡಲ್ ನರ್ಸಿಂಗ್ ಹೋಂ 10AM-2PM
ಬಿಜಾಪುರ 18 ಆಗಸ್ಟ್2018 ಯಶೋಧರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಸೋಲಾಪುರ ಬೈಪಾಸ್ ರಸ್ತೆ, ಬಿಜಾಪುರ 8AM-2PM
ದಾವಣಗರೆ 23 ಆಗಸ್ಟ್2018 ಮೋದಿ ಕಾಂಪೌಂಡ್, ಗುಂಡಿ ಸರ್ಕಲ್ ಹತ್ತಿರ, ದಾವಣಗೆರೆ 9AM-2PM
ಗುಲ್ಬರ್ಗ 22 ಆಗಸ್ಟ್2018 ಎಚ್‍ಸಿಜಿ ಕೇಂದ್ರ, ಖ್ಯೂಬಾ ಪ್ಲಾಟ್ಸ್, ಗುಲ್ಬರ್ಗ 9.30AM-2.30PM
ಬೆಂಗಳೂರು 5ರಿಂದ 8ಸೆಪ್ಟೆಂಬರ್2018 ಸ್ಪರ್ಷ ಹಾಸ್ಪಿಟಲ್ ಫಾರ್ ಅಡ್ವಾನ್ಸ್ ಸರ್ಜರೀಸ್, #146, ಇನ್‍ಫ್ಯಾಂಟ್ರಿ ರಸ್ತೆ, ಬೆಂಗಳೂರು-560001 10AM-2PM
ಚನ್ನಪಟ್ಟಣ 11ಸೆಪ್ಟೆಂಬರ್2018 ಬಾಲು ಡಯಾಗ್ನಸ್ಟಿಕ್ ಕೇಂದ್ರ, ಪಾರ್ವತಿ ಥಿಯೇಟರ್ ರಸ್ತೆ,ಚನ್ನಪಟ್ಟಣ 10AM-2PM

 

ರೋಗಿಗಳ ಉಚಿತ ತಪಾಸಣೆ ಆಗಸ್ಟ್ 11ರಿಂದ ಆರಂಭಗೊಂಡು ಸೆಪ್ಟೆಂಬರ್ 11ರವರೆಗೆ ನಡೆಯಲಿದೆ. ಕರ್ನಾಟಕ ಯಾವುದೇ ಭಾಗದ ನಿವೃತ್ತ ಶಿಕ್ಷಕರು ಮಾನ್ಯತೆ ಪಡೆದ ಗುರುತಿನ ಚೀಟಿ ಹಾಗೂ ಹಿಂದಿನ ತಪಾಸಣಾ ವಿವರಗಳೊಂದಿಗೆ ಉಚಿತ ತಪಾಸಣೆಗೆ ಪೂರ್ವ ನೊಂದಣಿ ಮಾಡಿಕೊಳ್ಳಬಹುದಾಗಿದೆ.

ಈ ಕುರಿತು ಮಾತನಾಡಿರುವ ಸ್ಪರ್ಷ ಆಸ್ಪತ್ರೆಯ ಅಧ್ಯಕ್ಷ ಡಾ. ಶರಣ್ ಪಾಟೀಲ್, “ನಾವು ಸಮಾಜದ ಬೆನ್ನೆಲುಬಾಗಿರುವ ಶಿಕ್ಷಕರಿಗೆ ಧನ್ಯವಾದ ಅರ್ಪಿಸುವ ಸಲುವಾಗಿ ಗುರು ನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದೇವೆ. ದುರದೃಷ್ಟವೆಂದರೆ, ಶಿಕ್ಷಕರಿಗೆ ಅತ್ಯಂತ ಕಡಿಮೆ ವೇತನ ನೀಡಲಾಗುತ್ತಿದ್ದು, ಅವರು ಮಂಡಿ ಶಸ್ತ್ರಚಿಕಿತ್ಸೆಯಂತಹ ಚಿಕಿತ್ಸೆ ಪಡೆಯಲು ವಿಫಲರಾಗುತ್ತಿದ್ದಾರೆ. ಈ ಅಭಿಯಾನದ ಮೂಲಕ ನಾವು ನಮ್ಮ ಬದುಕಿನ ಹೆಸರಿಲ್ಲದ ಹೀರೋಗಳನ್ನು ನೆನೆಯುತ್ತಿದ್ದೇವೆ. ಈ ಮೂಲಕ ನಾವು ಸೆಪ್ಟೆಂಬರ್ 5ರಂದು ಶಿಕ್ಷಕರ ದಿನಾಚರಣೆ ಆಚರಿಸುತ್ತಿದ್ದೇವೆ” ಎಂದರು.

“ಕಳೆದ 7 ವರ್ಷಗಳಲ್ಲಿ ನಾವು ಬೆಂಗಳೂರು, ರಾಯಚೂರು, ಬಿಜಾಪುರ, ಗುಲ್ಬರ್ಗ ಹಾಗೂ ದಾವಣಗೆರೆಯಲ್ಲಿ ತಪಾಸಣಾ ಶಿಬಿರಗಳನ್ನು ನಡೆಸಿ 800 ಅರ್ಹ ಹಾಗೂ ಅಗತ್ಯವಿರುವ ನಿವೃತ್ತ ಶಿಕ್ಷಕರನ್ನು ಗುರುತಿಸಿದ್ದೇವೆ. ಎಲ್ಲ ಶಸ್ತ್ರಚಿಕಿತ್ಸೆಗಳನ್ನು ಉಚಿತವಾಗಿ ನಡೆಸಲಾಗಿದೆ” ಎಂದರು.

ಗುರು ನಮನ  ನೋಂದಣಿಗಾಗಿ 080-61222000 ಕರೆ ನೀಡಿ 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ