ಬೆಂಗಳೂರು:ಆ-9: ರೈತರ ಸಾಲಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ. ಆದರೆ ಇನ್ನೂ ಆದೇಶ ಹೊರಡಿಸಿಲ್ಲ ಎಂಬ ಟೀಕೆಗಳು ಬರುತ್ತಿವೆ. ತಕ್ಷಣವೇ ಹಣ ಕೊಡುವುದಕ್ಕೆ ನಾನೇನು ದುಡ್ಡಿನ ಗಿಡ ಹಾಕಿದ್ದೀನಾ? ಎಂದು ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ವಿಶ್ವ ಆದಿವಾಸಿ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ, ಸಾಲಮನ್ನಾ ಆದೇಶ ಹೊರಡಿಸಲು ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಾಲಮನ್ನಾ ಮಾಡಬೇಕು. ಹೀಗಾಗಿ ಸ್ವಲ್ಪ ವಿಳಂಬ ಆಗುತ್ತಿದೆ . ಆದರೆ ಸಾಲಮನ್ನಾ ಘೋಷಣೆ ಮಾಡಿದ್ದಾರೆ ಹೊರತು ಇನ್ನೂ ಆದೇಶವನ್ನೆ ಹೊರಡಿಸಿಲ್ಲ ಎಂದು ಆರೋಪ ಮಾಡುವುದು ಸರಿಯಲ್ಲ. ಸಾಲಮನ್ನಾ ಆದೇಶ ಶೀಘ್ರದಲ್ಲಿ ಹೊರಡಿಸಲಾಗುತ್ತದೆಎಂದರು.
ಬಜೆಟ್ನಲ್ಲಿ ಸಾಲಮನ್ನಾ ಮಾಡುವುದಾಗಿ ಎಚ್ಡಿಕೆ ತಿಳಿಸಿದ್ದರು. ಆದರೆ, ಇದುವರೆಗೆ ಅವರು ಈ ಸಂಬಂಧ ಯಾವುದೇ ಆದೇಶ ಹೊರಡಿಸಿಲ್ಲ. ಹೀಗಾಗಿ ವಿರೋಧ ಪಕ್ಷಗಳು ಮುಖ್ಯಮಂತ್ರಿಗಳ ಸಾಲಮನ್ನಾ ತೀರ್ಮಾನವನ್ನು ಪ್ರಶ್ನಿಸಿತ್ತಿದ್ದಾರೆ. ಅಲ್ಲದೇ ರೈತರ ಸಾಲಮನ್ನಾ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಹಾಗೂ ಬ್ಯಾಂಕ್ಗಳ ನಡುವೆ ಉದ್ಭವಿಸಿರುವ ಕೆಲವು ಗೊಂದಲ ಬಗೆಹರಿಯದ ಪರಿಣಾಮ ಈ ವರ್ಷವೇ ಸಾಲಮನ್ನಾ ಭಾಗ್ಯ ರೈತರ ಕೈಗೆಟುಕುವುದು ಅನುಮಾನವಾಗಿದೆ ಎಂಬ ವರದಿಗಳು ಬಂದಿದ್ದವು ಈ ಹಿನ್ನಲೆಯಲ್ಲಿ ಸಿಎಂ ಖಡಕ್ ಅಗಿ ತಿರುಗೇಟು ನೀಡಿದಾರೆ.
Farmers,Loan Waiver,HD Kumaraswamay,JDS