ಅಂಪೈರ್ನಿಂದ ಚೆಂಡು ಪಡೆದಿದ್ದು ಯಾಕೆ ಗೊತ್ತಾ ? ಧೋನಿ ರಿವೀಲ್

ನವದೆಹಲಿ: ಟೀಂ ಇಂಡಿಯಾದ ಮಿಸ್ಟರ್ ಕೂಲ್ ಎಂ.ಎಸ್.ಧೋನಿ ಇತ್ತಿಚೆಗೆ ಮುಕ್ತಾಯವಾದ ಏಕದಿನ ಸರಣಿ ನಂತರ ಅಂಪೈರ್ನಿಂದ ಯಾಕೆ ಚೆಂಡು ತೆಗೆದುಕೊಂಡಿದ್ದು ಎಂಬುದರ ಕುರಿತು ಕೊನೆಗೂ ರಿವೀಲ್ ಮಾಡಿದ್ದಾರೆ. ಕಳೆದ ತಿಂಗಳು ಲೀಡ್ಸ್ನಲ್ಲಿ ನಡೆದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಆಂಗ್ಲರ ವಿರುದ್ಧ ಇಂಗ್ಲೆಂಡ್ ತಂಡ 8 ವಿಕೆಟ್ಗಳ ಭರ್ಜರಿ ಗೆಲುವು ದಾಖಲಿಸಿ ಏಕದಿನ ಸರಣಿಯನ್ನ ಗೆದ್ದುಕೊಂಡಿತ್ತು. ಪಂದ್ಯ ಮುಗಿದ ಬಳಿಕ ಪೆವಿಲಿಯನ್ಗೆ ಹೆಜ್ಜೆ ಹಾಕುತ್ತಿದ್ದ ಮಿಸ್ಟರ್ ಕೂಲ್ ಎಂ.ಎಸ್.ಧೋನಿ ಅಂಪೈರ್ ಬಳಿ ಚೆಂಡು ತೆಗೆದಕೊಳ್ಲುತ್ತಿದ್ದ ದೃಶ್ಯ ಅಭಿಮಾನಿಗಳ ಗಮನ ಸೆಳೆದಿತ್ತು.
ಅಂಪೈರ್ನಿಂದ ಧೋನಿ ಚೆಂಡು ತೆಗೆದುಕೊಂಡಿದ್ದು ಯಾಕೆ ? ಧೋನಿ ಸೋತ ಬೇಸರದಲ್ಲಿ ಕ್ರಿಕೆಟ್ಗೆ ಗುಡ್ಬೈ ಹೇಳ್ತಾರಾ ಅಂಥ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗಳು ನಡೆದವು. ಕೊನೆಗೆ ತಂಡದ ಕೋಚ್ ರವಿ ಶಾಸ್ತ್ರಿ ಅಂಪೈರ್ನಿಂದ ನಿಂದ ಚೆಂಡು ತೆಗೆದುಕೊಂಡಿರುವ ಬಗ್ಗೆ ವಿವಿರಣೆ ನೀಡಿ ಗೊಂದಲಕ್ಕೆ ತೆರೆ ಎಳೆದಿದ್ದರು.
ನಮ್ಮ ಸುತ್ತ ಏನಾಗುತ್ತಿದೆ ಎಂಬುದರ ಬಗ್ಗೆ ತಿಳಿಯಲು ನಾವು ನಿರಂತರವಾಗಿ ಕೆಲಸ ಮಾಡಬೇಕಾಗುತ್ತದೆ. ನಮಗೆ ಇಲ್ಲಿ ನಿರೀಕ್ಷಿತಾ ಮಟ್ಟಿಗೆ ರಿವರ್ಸ್ ಸ್ವಿಂಗ್ ಸಿಗುತ್ತಿಲ್ಲ. ನಾವು ಮುಂದೆ ವಿಶ್ವಕಪ್ ಆಡುತ್ತೇವೆ. ಇದಕ್ಕೆ ಕಾರಣವನ್ನ ತಿಳಿಯಬೇಕು. ಇದು ತುಂಬ ನಮಗೆ ಪ್ರಮುಖ ವಿಷಯ. ಈ ಕಂಡೀಷನ್ಗಳಲ್ಲಿ ಎದುರಾಳಿಗೆ ಗೆಲುವು ಸಿಗುವಾಗ ನಮಗೆ ಯಾಕೆ ಗೆಲುವು ಸಿಗೋದಿಲ್ಲ. ಪಂದ್ಯ ಮುಗಿದ ನಂತರ ಐಸಿಸಿಗೆ ಚೆಂಡು ಬೇಡ. ಈ ಕಾರಣಕ್ಕಾಗಿ ಅಂಪೈರ್ ಬಳಿ ಮನವಿ ಮಾಡಿ ಚೆಂಡು ತೆಗೆದುಕೊಂಡು ಬೌಲಿಂಗ್ ಕೋಚ್ ಗೆ ಚೆಂಡನ್ನ ಕೊಟ್ಟೆ ಎಂದು ಧೋನಿ ಹೇಳಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ