ಜಾರ್ಖಂಡ್‌ನಲ್ಲಿ ಮೋಜು ಮಸ್ತಿ, ಜಲಪಾತದಲ್ಲಿ ಧೋನಿ ಶವರ್!

ರಾಂಚಿ: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಸದ್ಯ ಮಸ್ತಿ ಮೂಡ್ ನಲ್ಲಿದ್ದು ಜಲಪಾತವೊಂದರಲ್ಲಿ ಸ್ನಾನ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
ಸದ್ಯ ಕ್ರಿಕೆಟ್ ನಿಂದ ದೂರವಾಗಿ ಬಿಡುವಿನ ವೇಳೆಯನ್ನು ಕಳೆಯುತ್ತಿರುವ ಧೋನಿ ತವರೂರು ಜಾರ್ಖಂಡ್ ನ ಜಲಪಾತವೊಂದರಲ್ಲಿ ಸ್ನಾನ ಮಾಡುತ್ತಿರುವ ವಿಡಿಯೋವನ್ನು ಇದೀಗ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ಅಪ್ ಲೋಡ್ ಮಾಡಿದ್ದಾರೆ.
2014ರಲ್ಲೇ ಧೋನಿ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದು ಇಂಗ್ಲೆಂಡ್ ವಿರುದ್ಧದ ಟಿ20 ಹಾಗೂ ಏಕದಿನ ಅಂತಾರಾಷ್ಟ್ರೀಯ ಸರಣಿಗಳ ಬಳಿಕ ತವರಿಗೆ ಮರಳಿದ್ದರು.
10 ವರ್ಷಗಳ ಬಳಿಕ ನಾನು ಈ ಜಲಪಾತದಲ್ಲಿ ಸ್ನಾನ ಮಾಡಿದ್ದಾಗಿ ಸ್ವತಃ ಧೋನಿಯೇ ಬಹಿರಂಗಪಡಿಸಿದ್ದು ಹಳೆಯ ನೆನಪುಗಳು ಮತ್ತೆ ನೆನಪಿನಾಳದಿಂದ ಬರುತ್ತಿರುವುದಾಗಿ ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ