ಬೆನ್ ಸ್ಟೋಕ್ಸ್ ಕ್ರಿಕೆಟ್ ಬದುಕೇ ಅತಂತ್ರ; ಕುಡಿದು ಸಂಯಮ ಕಳೆದುಕೊಂಡಿದ್ದ: ಕೋರ್ಟ್

ಬರ್ಮಿಂಗ್ ಹ್ಯಾಮ್: ಟೀಂ ಇಂಡಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವಿಗೆ ಪ್ರಮುಖ ಕಾರಣರಾಗಿದ್ದ ವೇಗಿ ಬೆನ್ ಸ್ಟೋಕ್ಸ್ ಕ್ರಿಕೆಟ್ ಜೀವನ ಇದೀಗ ಅತಂತ್ರವಾಗಿದೆ.
ಮಧ್ಯರಾತ್ರಿಯಲ್ಲಿ ಬಾರ್ ಹೊರಗೆ ಗಲಾಟೆ ಮಾಡಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಿಸ್ಟಲ್ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಗಿದೆ. ಇನ್ನು ನಿನ್ನೆ ವಿಚಾರಣೆ ನಡೆದ ಕೋರ್ಟ್ ಅಂದು ಬೆನ್ ಸ್ಟೋಕ್ಸ್ ಸಂಯಮ ಕಳೆದುಕೊಂಡು ವರ್ತಿಸಿದ್ದರು ಎಂದು ಹೇಳಿದ್ದು ಇದು ಬೆನ್ ಸ್ಟೋಕ್ಸ್ ಕ್ರಿಕೆಟ್ ಬದುಕು ಅತಂತ್ರವಾಗುವ ಸಾಧ್ಯತೆ ಇದೆ.
ವಿಚಾರಣೆ ಇನ್ನು ಐದು ದಿನಗಳ ಕಾಲ ನಡೆಯಲಿದ್ದು ಇದರಿಂದಾಗಿ ಟೀಂ ಇಂಡಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಿಂದ ಬೆನ್ ಸ್ಟೋಕ್ಸ್ ಹೊರಗುಳಿದಿದ್ದಾರೆ. ಇನ್ನು ಪ್ರಕರಣ ತೀರ್ಪು ಬಂದ ಮೇಲೆ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುವ ಸಾಧ್ಯತೆ ಇದೆ.
ಬೆನ್ ಸ್ಟೋಕ್ಸ್ ಇಂಗ್ಲೆಂಡ್ ತಂಡದ ಆಲ್ ರೌಂಡರ್ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ನಲ್ಲಿ ಸಖತ್ ಫಾರ್ಮ್ ಹೊಂದಿರುವ ಬೆನ್ ಸ್ಟೋಕ್ಸ್ ವಿರುದ್ಧ ತೀರ್ಪು ಬಂದರೆ ಇದು ಇಂಗ್ಲೆಂಡ್ ತಂಡಕ್ಕೂ ಬಾರಿ ಹೊಡೆತ ಬೀಳಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ