ನವದೆಹಲಿ: ದೇಶಭ್ರಷ್ಟ ಉದ್ಯಮಿ ಮೆಹುಲ್ ಚೊಕ್ಸಿಗೆ ಆಂಟಿಗುವಾದ ನಾಗರಿಕತೆ ಪಡೆದು ಅಲ್ಲಿ ಹೂಡಿಕೆ ಮಾಡಲು ನಿಯಂತ್ರಕ ಸೆಬಿ ಯಾವುತ್ತೂ ಕೂಡ ಕ್ಲೀನ್ ಚಿಟ್ ವರದಿ ನೀಡಿರಲಿಲ್ಲ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.ಮಾರುಕಟ್ಟೆಯಲ್ಲಿ ಹಣದ ವಂಚನೆಗೆ ಸಂಬಂಧಪಟ್ಟಂತೆ ಸೆಬಿ ತನಿಖೆಯನ್ನು ಮುಂದುವರಿಸಿದೆ. ನೀರವ್ ಮೋದಿ ಮತ್ತು ಮೆಹುಲ್ ಚೊಕ್ಸಿ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಲಕ್ಷಾಂತರ ಕೋಟಿ ರೂಪಾಯಿ ವಂಚನೆ ಎಸಗಿರುವ ಬಗ್ಗೆ ತನಿಖೆ ನಡೆಯುತ್ತಿದೆ.ನೀರವ್ ಮೋದಿ ಮತ್ತು ಮೆಹುಲ್ ಚೊಕ್ಸಿಗೆ ಆಂಟಿಗುವಾದ ನಾಗರಿಕತ್ವ ನೀಡಿರುವ ಬಗ್ಗೆ ಕೂಡ ಸೆಬಿ ನೊಟೀಸ್ ಕಳುಹಿಸಿ ವಿಚಾರಣೆ ನಡೆಸಲು ಮುಂದಾಗಿದೆ. ಕಳೆದ ವಾರ, ಆಂಟಿಗುವಾ ಮಾಧ್ಯಮವೊಂದು ವರದಿ ಮಾಡಿ ಕೆರೆಬಿಯನ್ ದೇಶವಾದ ಆಂಟಿಗುವಾದ ಹೂಡಿಕೆ ಘಟಕದ ನಾಗರಿಕತ್ವವನ್ನು(ಸಿಐಯು) ನೀರವ್ ಮೋದಿ ಮತ್ತು ಮೆಹುಲ್ ಚೊಕ್ಸಿಗೆ ನಾಗರಿಕತ್ವ ನೀಡಿ ಅಲ್ಲಿ ಹೂಡಿಕೆ ಮಾಡಲು ಅವಕಾಶ ನೀಡಿತ್ತು. ಇದಕ್ಕೆ ಭಾರತದ ಕಡೆಯಿಂದ ಯಾವುದೇ ಆಕ್ಷೇಪ ಬಂದಿರಲಿಲ್ಲ ಎಂದು ಹೇಳಿತ್ತು.ವರದಿಯಲ್ಲಿ ಹೇಳಿರುವಂತೆ ಸಿಐಯು ಭಾರತದ ಸೆಬಿಯಿಂದ ಪಡೆದುಕೊಂಡ ದಾಖಲೆಗಳ ಪ್ರಕಾರ 2014 ಮತ್ತು 2017ರಲ್ಲಿ ಚೊಕ್ಸಿ ಒಡೆತನದ ಕಾರ್ಪೊರೇಟ್ ಸಂಸ್ಥೆ ವಿರುದ್ಧ ತನಿಖೆ ಕೈಗೊಂಡಿತ್ತು.
Related Articles
ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣ: ಉದ್ಯಮಿ ನೀರವ್ ಮೋದಿ, ಮೆಹುಲ್ ಚೋಕ್ಸಿಗೆ ಇಡಿ ಸಮನ್ಸ್ ಜಾರಿ
February 16, 2018
Samachar Network
ರಾಷ್ಟ್ರೀಯ, ಕ್ರೈಮ್
Comments Off on ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣ: ಉದ್ಯಮಿ ನೀರವ್ ಮೋದಿ, ಮೆಹುಲ್ ಚೋಕ್ಸಿಗೆ ಇಡಿ ಸಮನ್ಸ್ ಜಾರಿ
Seen By: 62 ಮುಂಬೈ :ಫೆ-16: ಪಂಜಾಬ್ ನ್ಯಾಶನಲ್ ಬ್ಯಾಂಕ್ಗೆ 11,400 ಕೋಟಿ ರೂ.ವಂಚಿಸಿರುವ ಪ್ರಕರಣದಲ್ಲಿ ಮುಖ್ಯ ಆರೋಪಿ ಉದ್ಯಮಿ ನೀರವ್ ಮೋದಿ ಮತ್ತು ಅವರ ಉದ್ಯಮ [more]
ಸಿಂಗಾಪುರ ಪಾಸ್ಪೋರ್ಟ್ ಬಳಸಿ ನೀರವ್ ಲಂಡನ್ನಿಂದ ಪರಾರಿ?
June 14, 2018
VD
ರಾಷ್ಟ್ರೀಯ, ವಾಣಿಜ್ಯ
Comments Off on ಸಿಂಗಾಪುರ ಪಾಸ್ಪೋರ್ಟ್ ಬಳಸಿ ನೀರವ್ ಲಂಡನ್ನಿಂದ ಪರಾರಿ?
Seen By: 315 ಲಂಡನ್: ಭಾರತದ ಅತಿ ದೊಡ್ಡ ಬ್ಯಾಂಕಿಂಗ್ ಹಗರಣದ ರುವಾರಿ ನೀರವ್ ಮೋದಿ ಸಿಂಗಾಪುರ ಪಾಸ್ಪೋರ್ಟ್ ಬಳಸಿ, ಲಂಡನ್ನಿಂದ ಕಾಲ್ಕಿತ್ತಿದ್ದಾರೆ ಎನ್ನಲಾಗಿದೆ. ಪಂಜಾಬ್ ನ್ಯಾಷನಲ್ [more]
ನೀರವ್ ಮೋದಿ ದೇಶಬಿಡಲು ಸಹಾಯ ಮಾಡಿದ್ದ ಬಿಜೆಪಿಯೇ ಚುನಾವಣೆಗಾಗಿ ಆತನನ್ನು ಬಂಧಿಸಿ ವಾಪಸ್ ಕರೆತರುತ್ತಿದೆ: ಗುಲಾಮ್ ನಬಿ ಆಜಾದ್
March 21, 2019
Samachar Network-CLB
ರಾಷ್ಟ್ರೀಯ
Comments Off on ನೀರವ್ ಮೋದಿ ದೇಶಬಿಡಲು ಸಹಾಯ ಮಾಡಿದ್ದ ಬಿಜೆಪಿಯೇ ಚುನಾವಣೆಗಾಗಿ ಆತನನ್ನು ಬಂಧಿಸಿ ವಾಪಸ್ ಕರೆತರುತ್ತಿದೆ: ಗುಲಾಮ್ ನಬಿ ಆಜಾದ್
Seen By: 84 ನವದೆಹಲಿ:ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ನೀರವ್ ಮೋದಿಯನ್ನು ಬಂಧಿಸಿ ವಾಪಸ್ ಕರೆತರುವ ನಾಟಕವನ್ನು ಬಿಜೆಪಿ ಆಡುತ್ತಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಗುಲಾಮ್ ನಬಿ [more]